ಹಿಂದೂ ದೇವತೆಯ ಅವಮಾನಕರ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತ ಪಕ್ಷದ ಸಂಸದನಿಂದ ಕ್ಷಮೆಯಾಚನೆ !

ಹಿಂದೂ ದೇವತೆಗಳನ್ನು ಅವಮಾನಿಸಿದ ಟ್ವೀಟ್ ಮಾಡಿದ್ದಕ್ಕಾಗಿ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಇ-ಇನ್ಸಾಫ್ ನ ಸಂಸದ ಅಮೀರ್ ಲಿಯಾಕತ್ ಹುಸೇನ್ ಹಿಂದೂಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಅವರು ಈ ಟ್ವೀಟ್ ಅನ್ನು ಸಹ ಅಳಿಸಿದ್ದಾರೆ.

‘ಭಾರತವು ಜಮ್ಮೂ-ಕಾಶ್ಮೀರದ ನಾಗರಿಕರ ಮೇಲೆ ಹೇರಿದ ನಿರ್ಬಂಧಗಳನ್ನು ಸಡಿಲಿಸಬೇಕು ! (ಅಂತೆ) -ತುರ್ಕಸ್ತಾನ

ಭಾರತದ ಆಂತರಿಕ ವಿಷಯಗಳಲ್ಲಿ ತುರ್ಕಿಯು ತಲೆಹಾಕಬಾರದು, ಅದು ತನ್ನ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದರ ಕಡೆಗೆ ಗಮನಹರಿಸಬೇಕು. ಕಾಶ್ಮೀರದ ಕುರಿತು ಭಾರತದ ವಿರೋಧಿ ನಿಲುವನ್ನು ಸತತವಾಗಿ ತೆಗೆದುಕೊಳ್ಳುವ ತುರ್ಕಿಗೆ ಅರ್ಥವಾಗುವಂತಹ ಭಾಷೆಯನ್ನು ಬಳಸಬೇಕು !

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ವ್ಯಕ್ತಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ರದ್ದುಪಡಿಸುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಇಲ್ಲಿಯ ಪರಿಶಿಷ್ಟ ಜಾತಿಗೆ ಸೇರಿದ ವಿಕ್ರಮ್ ಬಾಗಡೆ ಎಂಬವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸಬಲ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದರ ವಿರುದ್ಧ ಸರ್ವೋಚ್ಚ ನ್ಯಾಯಾಕಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇರಾನಿನಲ್ಲಿ ಕೊಲೆ ಆರೋಪ ಹೊತ್ತಿದ್ದ ಮಹಿಳೆಯನ್ನು ಆಕೆಯ ಮರಣದ ನಂತರವೂ ಗಲ್ಲಿಗೇರಿಸಲಾಯಿತು !

ಇಲ್ಲಿನ ಜಾಹರಾ ಇಸ್ಮಾಯಿಲಿ ಎಂಬ ಮಹಿಳೆ ಹೃದಯಾಘಾತದಿಂದ ಮೃತಪಟ್ಟರು. ತನ್ನ ಗಂಡನನ್ನು ಕೊಂದ ಆರೋಪ ಅವರ ಮೇಲಿತ್ತು. ಪರಿಣಾಮವಾಗಿ, ಆಕೆಯ ದೇಹವನ್ನು ಶರಿಯಾ ಕಾನೂನಿನ ಪ್ರಕಾರ ಮೃತ್ಯುವಾದ ನಂತರವೂ ಗಲ್ಲಿಗೇರಿಸಲಾಯಿತು.

ಧಾರ್ಮಿಕ ಚಿತ್ರಗಳ ಮುಂದೆ ಶೌಚಾಲಯಗಳನ್ನು ನಿರ್ಮಿಸಿದ್ದಕ್ಕಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳ ಕಚೇರಿ ಮುಖ್ಯಸ್ಥರು

ಕುಂಭಮೇಳ ಸಿದ್ಧತೆಯ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಧಾರ್ಮಿಕ ವರ್ಣಚಿತ್ರಗಳನ್ನು ನಿರ್ಮಿಸಲಾಗಿದೆ; ಆದರೆ, ರಾಜಪಥದಲ್ಲಿ ಈ ಚಿತ್ರಗಳ ಮುಂದೆ ೧೦೦ಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ.

ಭಾರತದಿಂದ ಪುನಃ ಚೀನಾದ ಕಂಪನಿಗಳ ಹೂಡಿಕೆಗೆ ಅನುಮೋದನೆ ನೀಡುವ ಸಾಧ್ಯತೆ !

ಗಾಲ್ವಾನ್ ಕಣಿವೆಯಲ್ಲಿನ ಸಂಘರ್ಷದ ನಂತರ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾದ ನಂತರ ಭಾರತವು ಚೀನಾದ ಕಂಪನಿಗಳಿಗೆ ನೀಡಿದ್ದ ಗುತ್ತಿಗೆಗಳನ್ನು ರದ್ದುಗೊಳಿಸಿತ್ತು. ಅಲ್ಲದೆ, ಪ್ಯಾಂಗೊಂಗ್ ಸರೋವರದ ಬಳಿ ಚೀನಾದ ಪಡೆಗಳು ನುಸುಳಿದ ನಂತರ ಹಲವಾರು ಚೀನೀ ಅಪ್ಲಿಕೇಶನ್‌ಗಳನ್ನು ಸಹ ನಿಷೇಧಿಸಲಾಗಿತ್ತು.

ನಾವು ಯಾವುದೇ ಸಾಂಪ್ರದಾಯಿಕ ಔಷಧಿಗೆ ಮಾನ್ಯತೆಯನ್ನು ನೀಡಿಲ್ಲ – ವಿಶ್ವ ಆರೋಗ್ಯ ಸಂಸ್ಥೆಯ ಸ್ಪಷ್ಟೋಕ್ತಿ

ಈ ಸಂಪೂರ್ಣ ವಿವಾದವನ್ನು ಮುಚ್ಚಿಹಾಕಲು ಕೇಂದ್ರ ಸರಕಾರವು ದೃಢ ನಿಲುವು ತಳೆಯಬೇಕಾಗಿದೆ. ಕರೋನಾವನ್ನು ಆಯುರ್ವೇದ ಔಷಧದಿಂದ ಗುಣಪಡಿಸಿದ ಅನೇಕ ಉದಾಹರಣೆಗಳಿವೆ. ಆದ್ದರಿಂದ, ಯಾರ ಪ್ರಮಾಣಪತ್ರಕ್ಕಾಗಿ ಕಾಯದೆ, ಆಯುರ್ವೇದ ಔಷಧೋಪಚಾರ ನೀಡುವವರಿಗೆ ಕೇಂದ್ರ ಸರಕಾರವು ಅಭಯವನ್ನು ನೀಡಬೇಕು !

ಯುರೋಪ್ ಗೆ ಬರುತ್ತಿದ್ದ ಮುಸ್ಲಿಂ ನಿರಾಶ್ರಿತರ ಬಗ್ಗೆ ಜಾಗೃತಿ ಮೂಡಿಸಿದ ಕಾರ್ಡಿನಲ್‌ನನ್ನು ಹೊರಹಾಕಿದ ಪೋಪ್

ಯುರೋಪಿನಲ್ಲಿ ಮುಸ್ಲಿಂ ನಿರಾಶ್ರಿತರ ಪ್ರವಾಹ ಮುಂದುವರಿದರೆ, ಶೀಘ್ರದಲ್ಲೇ ವಿಶ್ವದಾದ್ಯಂತ ಇಸ್ಲಾಮಿಕ್ ದಾಳಿಗಳು ಪ್ರಾರಂಭವಾಗುತ್ತವೆ. ವ್ಯಾಟಿಕನ್ ಸಿಟಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿದ ನಂತರ ಪೋಪ್ ಫ್ರಾನ್ಸಿಸ್ ಇವರು ೭೫ ವರ್ಷದ ಆಫ್ರಿಕನ್ ಕಾರ್ಡಿನಲ್ ರಾಬರ್ಟ್ ಸಾರಾ ಅವರನ್ನು ವಜಾ ಮಾಡಿದ್ದಾರೆ.

ರೈತರ ಆಂದೋಲನಕ್ಕಾಗಿ ಕಾಂಗ್ರೆಸ್ ಆಯೋಜಿಸಿದ್ದ ‘ಜನ ಅಕ್ರೋಶ್ ಸಭೆ’ಯಲ್ಲಿ ಹಿಂದಿ ಚಿತ್ರಗೀತೆಗಳಿಗೆ ನೃತ್ಯ

ರೈತರ ಆಂದೋಲನವನ್ನು ಬೆಂಬಲಿಸಲು ರಾಜ್ಯದ ಸರಾಯಕೆಲಾ-ಖಾರ್ಸಾವಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ‘ಜನ ಅಕ್ರೋಶ್ ಸಭೆ’ ಆಯೋಜಿಸಿತ್ತು. ಈ ಸಮಯದಲ್ಲಿ, ವೇದಿಕೆಯಲ್ಲಿ ಮಹಿಳೆಯರು ಹಿಂದಿ ಚಿತ್ರಗಳ ಹಾಡುಗಳಿಗೆ ನೃತ್ಯ ಮಾಡಿದರು.

ವಿಶ್ವದ ದೊಡ್ಡ ಜನಸಂಖ್ಯೆಯನ್ನು ’ಪರಿಸರ ಯೋಧರನ್ನಾಗಿ’ ಮಾಡುವ ಶಕ್ತಿ ಧರ್ಮಕ್ಕಿದೆ ! – ವಿಶ್ವಸಂಸ್ಥೆ

ಹವಾಮಾನ ಬದಲಾವಣೆಯನ್ನು ನಿಗ್ರಹಿಸುವ ಎಲ್ಲಾ ಪ್ರಯತ್ನಗಳಿಂದ, ವಿಶ್ವದ ದೊಡ್ಡ ಜನಸಂಖ್ಯೆಯನ್ನು‘’ಪರಿಸರ ಯೋಧ’ನನ್ನಾಗಿ ಮಾಡುವ ಶಕ್ತಿ ಕೇವಲ ಧರ್ಮದಲ್ಲಿ ಮಾತ್ರವಿದೆ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ.