ಭಾರತದಿಂದ ಪುನಃ ಚೀನಾದ ಕಂಪನಿಗಳ ಹೂಡಿಕೆಗೆ ಅನುಮೋದನೆ ನೀಡುವ ಸಾಧ್ಯತೆ !

ಪ್ಯಾಂಗೊಂಗ್ ಸರೋವರದಿಂದ ಚೀನಾ ತನ್ನ ಸೈನ್ಯವನ್ನು ಹಿಂಪಡೆದ ಪರಿಣಾಮಗಳು !

ಚೀನಾ ವಿಶ್ವಾಸದ್ರೋಹಿ ದೇಶವಾಗಿರುವುದರಿಂದ, ಅದರ ವಿರುದ್ಧ ಕಠೋರವಾದ ನಿರ್ಣಯಗಳನ್ನು ತೆಗೆದು ಅದರ ಮೇಲೆ ಒತ್ತಡ ಹೇರಲು ಚೀನೀ ಸರಕುಗಳನ್ನು ನಿಷೇಧಿಸುವುದು ಆವಶ್ಯವಿರುವಾಗ ಈ ರೀತಿ ಅನುಮೋದನೆ ನೀಡುವ ವಿಚಾರ ಆಗುತ್ತಿದ್ದರೆ ಅದು ಆತ್ಮಘಾತವೇ ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !

ನವದೆಹಲಿ: ಗಾಲ್ವಾನ್ ಕಣಿವೆಯಲ್ಲಿನ ಸಂಘರ್ಷದ ನಂತರ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹೆಚ್ಚಾದ ನಂತರ ಭಾರತವು ಚೀನಾದ ಕಂಪನಿಗಳಿಗೆ ನೀಡಿದ್ದ ಗುತ್ತಿಗೆಗಳನ್ನು ರದ್ದುಗೊಳಿಸಿತ್ತು. ಅಲ್ಲದೆ, ಪ್ಯಾಂಗೊಂಗ್ ಸರೋವರದ ಬಳಿ ಚೀನಾದ ಪಡೆಗಳು ನುಸುಳಿದ ನಂತರ ಹಲವಾರು ಚೀನೀ ಅಪ್ಲಿಕೇಶನ್‌ಗಳನ್ನು ಸಹ ನಿಷೇಧಿಸಲಾಗಿತ್ತು. ಚೀನಾದ ಕಂಪನಿಗಳಿಂದ ಭಾರತದಲ್ಲಿ ಹೂಡಿಕೆಗೆ ನಿರ್ಬಂಧ ಹೇರಲಾಗಿತ್ತು. ಚೀನಾದೊಂದಿಗಿನ ಮಾತುಕತೆಯ ನಂತರ, ಅವರು ಪ್ಯಾಂಗೊಂಗ್ ಸರೋವರದಿಂದ ಸೈನ್ಯವನ್ನು ಹಿಂಪಡೆದಿದೆ. ಇದೀಗ ಭಾರತ ಸರಕಾರವು ಮತ್ತೊಮ್ಮೆ ಚೀನಾದ ಕಂಪನಿಗಳ ಹೂಡಿಕೆಗಳನ್ನು ಅನುಮೋದಿಸಲು ತಯಾರಿ ನಡೆಸುತ್ತಿದೆ ಎಂದು ‘ರೈಟರ್’ ಈ ವಾರ್ತಾ ಸಂಸ್ಥೆಗೆ ಮೂಲಗಳು ತಿಳಿಸಿವೆ. ಚೀನಾದಿಂದ ಸುಮಾರು ೪೫ ಹೂಡಿಕೆ ಪ್ರಸ್ತಾವನೆಗಳನ್ನು ಭಾರತ ಅನುಮೋದಿಸುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ. ಇವುಗಳಲ್ಲಿ ಗ್ರೇಟ್ ವಾಲ್ ಮೋಟಾರ್ ಮತ್ತು ಎಸ್‌ಐಸಿ-ಮೋಟಾರ್ ಕಾರ್ಪ್ ಒಳಗೊಂಡಿವೆ.

ವರದಿಯ ಪ್ರಕಾರ, ಎರಡೂ ದೇಶಗಳಲ್ಲಿ ೨ ಬಿಲಿಯನ್ ಡಾಲರ್ (೧೪,೪೮೮ ಕೋಟಿ ರೂ.) ಮೌಲ್ಯದ ೧೫೦ ಪ್ರಸ್ತಾವನೆಗಳು ಬಾಕಿ ಉಳಿದಿವೆ. ಈ ಪ್ರಸ್ತಾವನೆಗಳಲ್ಲಿ ಹೆಚ್ಚಿನವು ಉತ್ಪನ್ನಗಳಿಗೆ ಸಂಬಂಧಿಸಿವೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಯಾವುದೇ ಉತ್ಪನ್ನ ಸಂವೇದನಾಶೀಲವಾಗಿಲ್ಲ ಎಂದು ಹೇಳಲಾಗುತ್ತಿದೆ.