ವಿಶ್ವದ ದೊಡ್ಡ ಜನಸಂಖ್ಯೆಯನ್ನು ’ಪರಿಸರ ಯೋಧರನ್ನಾಗಿ’ ಮಾಡುವ ಶಕ್ತಿ ಧರ್ಮಕ್ಕಿದೆ ! – ವಿಶ್ವಸಂಸ್ಥೆ

ಪರಿಸರವನ್ನು ರಕ್ಷಿಸಲು ವಿಶ್ವಸಂಸ್ಥೆಯು ಧಾರ್ಮಿಕ ಮುಖಂಡರ ಸಹಾಯವನ್ನು ಪಡೆಯಲಿದೆ!

* ಶ್ರದ್ಧೆಯೊಂದೇ ಭೂಮಿಯನ್ನು ಉಳಿಸುವ ಬಯಕೆಯನ್ನು ಮೂಡಿಸಬಲ್ಲದು!

* ತಡವಾದರೂ ಸರಿ, ವಿಶ್ವಸಂಸ್ಥೆಯು ಧರ್ಮದ ಮಹತ್ವವನ್ನು ಅರಿತುಕೊಂಡಿದೆ. ಪರಿಸರಕ್ಕಾಗಿ ನಿಜವಾಗಿಯೂ ಯಾರು ಕೆಲಸ ಮಾಡುತ್ತಾರೆ ಎಂದು ನೋಡುವುದು ಈಗ ಮಹತ್ವದ್ದಾಗಿದೆ. ಹಿಂದೂ ಧರ್ಮದಲ್ಲಿ ಪ್ರಕೃತಿ ಮತ್ತು ಪರಿಸರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ, ಅದನ್ನು ರಕ್ಷಿಸಲು ಯಾವಾಗಲೂ ಪ್ರಯತ್ನಗಳು ನಡೆಯುತ್ತವೆ! ಆದ್ದರಿಂದ, ನಾವು ಹಿಂದೂ ಧರ್ಮಕ್ಕನುಸಾರ ಆಚರಣೆ ಮಾಡಿದಾಗಲೇ ನಿಜವಾದ ಅರ್ಥದಲ್ಲಿ ಪರಿಸರ ರಕ್ಷಣೆಯಾಗುವುದು!

ಡಾ. ಇಯಾದ್ ಅಬು ಮೊಗ್ಲಿ

ನವದೆಹಲಿ : ಹವಾಮಾನ ಬದಲಾವಣೆಯನ್ನು ನಿಗ್ರಹಿಸುವ ಎಲ್ಲಾ ಪ್ರಯತ್ನಗಳಿಂದ, ವಿಶ್ವದ ದೊಡ್ಡ ಜನಸಂಖ್ಯೆಯನ್ನು‘’ಪರಿಸರ ಯೋಧ’ನನ್ನಾಗಿ ಮಾಡುವ ಶಕ್ತಿ ಕೇವಲ ಧರ್ಮದಲ್ಲಿ ಮಾತ್ರವಿದೆ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ. ವಿಜ್ಞಾನವು ಅಂಕಿಅಂಶಗಳನ್ನು ನೀಡಬಹುದು; ಆದರೆ ಶ್ರದ್ಧೆಯೇ ಭೂಮಿಯನ್ನು ಉಳಿಸುವ ಬಯಕೆಯನ್ನು ಸೃಷ್ಟಿಸಬಹುದು ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ)ಅಂತರ್ಗತ ‘ಫೆತ್ ಫಾರ್ ಅರ್ತ್’ ಅಭಿಯಾನದ ನಿರ್ದೇಶಕ ಡಾ. ಇಯಾದ್ ಅಬು ಮೊಗ್ಲಿ ಪ್ರತಿಪಾದಿಸಿದ್ದಾರೆ. ವಿಶ್ವದಾದ್ಯಂತದ ಧಾರ್ಮಿಕ ಸಂಸ್ಥೆಗಳು, ಧರ್ಮಗುರುಗಳು ಮತ್ತು ಆಧ್ಯಾತ್ಮಿಕ ಮುಖಂಡರ ಸಹಾಯದಿಂದ, ೨೦೩೦ ರ ವೇಳೆಗೆ ಭೂಮಿಯ ಶೇಕಡಾ ೩೦ ರಷ್ಟು ಭಾಗವನ್ನು ಅದರ ಮೂಲ ನೈಸರ್ಗಿಕ ಸ್ಥಿತಿಗೆ ಪರಿವರ್ತಿಸುವ ಗುರಿಯೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಡಾ. ಇಯಾದ ಇವರ ಪ್ರಕಾರ ಪರಿಸರ ರಕ್ಷಣೆಗಾಗಿ ವಿಶ್ವದಾದ್ಯಂತವಿರುವ ಧಾರ್ಮಿಕ ಸಂಸ್ಥೆಗಳಿಂದ ಎಷ್ಟು ಬೇಕೋ ಅಷ್ಟು ಬೆಂಬಲ ಸಿಗುತ್ತಿಲ್ಲ ಎಂದು ಇಯಾದ್ ಹೇಳುತ್ತಾರೆ. ವಿಶ್ವದ ಜನಸಂಖ್ಯೆಯ ಎಂಭತ್ತು ಪ್ರತಿಶತ ಜನರು ಧಾರ್ಮಿಕ ನೈತಿಕತೆಯನ್ನು ಪಾಲಿಸುತ್ತಾರೆ. ಇದರಿಂದ, ಈ ಸಂಘಟನೆಯ ಸಾಮರ್ಥ್ಯದ ಕಲ್ಪನೆ ಬರುತ್ತದೆ. ಈ ಸಂಸ್ಥೆಗಳ ಒಟ್ಟು ಸಂಪತ್ತನ್ನು ಒಟ್ಟುಗೂಡಿಸಿದರೆ, ಇದು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಬಲ್ಲದು. ವಿಶ್ವದ ಶೇಕಡಾ ೧೦ ರಷ್ಟು ಭೂಮಿಯು ನಿಯಂತ್ರಣವು ಈ ಸಂಸ್ಥೆಗಳಲ್ಲಿದೆ. ಧಾರ್ಮಿಕ ಸಂಸ್ಥೆಗಳಲ್ಲಿ ಶೇ ೬೦ ರಷ್ಟು ಶಾಲೆಗಳು ಮತ್ತು ೫೦ ರಷ್ಟು ಆಸ್ಪತ್ರೆಗಳಿವೆ. ಮಾನವ ಕಲ್ಯಾಣಕ್ಕಾಗಿ ಈ ಶಕ್ತಿಯನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ’ಫೇತ್ ಫಾರ್ ಅರ್ಥ್’ ಅಭಿಯಾನ ಹುಟ್ಟಿಕೊಂಡಿದೆ. ಈ ವರ್ಷ ವಿಶ್ವದ ಧಾರ್ಮಿಕ ಮುಖಂಡರ ಸಂಸತ್ತು ಜಿನೀವಾದಲ್ಲಿ ನಡೆಯಲಿದೆ. ಇದರಲ್ಲಿ ’ಧಾರ್ಮಿಕ ಇಕೋ-ಯೋಧರು’ ಕೂಡ ಬರಲಿದ್ದಾರೆ. ವಿಜ್ಞಾನ ಮತ್ತು ಧಾರ್ಮಿಕ-ಆಧ್ಯಾತ್ಮಿಕ ನೀತಿಗಳನ್ನು ಸಂಯೋಜಿಸುವುದರಿಂದ ಈ ಅಭಿಯಾನಕ್ಕೆ ವ್ಯಾಪಕ ಸ್ವರೂಪವನ್ನು ನೀಡುವುವು.