ನಾವು ಯಾವುದೇ ಸಾಂಪ್ರದಾಯಿಕ ಔಷಧಿಗೆ ಮಾನ್ಯತೆಯನ್ನು ನೀಡಿಲ್ಲ – ವಿಶ್ವ ಆರೋಗ್ಯ ಸಂಸ್ಥೆಯ ಸ್ಪಷ್ಟೋಕ್ತಿ

’ಕೊರೊನಿಲ್’ ಔಷಧಿಗೆ ವಿಶ್ವ ಆರೋಗ್ಯ ಸಂಸ್ಥೆಯು ಮಾನ್ಯತೆ ನೀಡಿದೆ ಎಂದು ಯೋಗ ಋಷಿ ರಾಮದೇವ್ ಬಾಬಾರವರು ಹೇಳಿಕೆ ನೀಡಿದ್ದರು!

ಈ ಸಂಪೂರ್ಣ ವಿವಾದವನ್ನು ಮುಚ್ಚಿಹಾಕಲು ಕೇಂದ್ರ ಸರಕಾರವು ದೃಢ ನಿಲುವು ತಳೆಯಬೇಕಾಗಿದೆ. ಕರೋನಾವನ್ನು ಆಯುರ್ವೇದ ಔಷಧದಿಂದ ಗುಣಪಡಿಸಿದ ಅನೇಕ ಉದಾಹರಣೆಗಳಿವೆ. ಆದ್ದರಿಂದ, ಯಾರ ಪ್ರಮಾಣಪತ್ರಕ್ಕಾಗಿ ಕಾಯದೆ, ಆಯುರ್ವೇದ ಔಷಧೋಪಚಾರ ನೀಡುವವರಿಗೆ ಕೇಂದ್ರ ಸರಕಾರವು ಅಭಯವನ್ನು ನೀಡಬೇಕು !

ನವದೆಹಲಿ : ಪತಂಜಲಿ ಆಯುರ್ವೇದ ಕಂಪನಿಯು ತಯಾರಿಸಿದ ‘ಕೊರೊನಿಲ್’ ಎಂಬ ಔಷಧಿಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಮಾಣೀಕರಣ ಯೋಜನೆಯ ಪ್ರಕಾರ ಆಯುಷ್ ಸಚಿವಾಲಯವು ಪ್ರಮಾಣಪತ್ರವನ್ನು ನೀಡಿದೆ ಎಂಬ ಮಾಹಿತಿಯನ್ನು ಯೋಗ ಋಷಿ ರಾಮದೇವಬಾಬಾ ಇವರು ಕೆಲವು ದಿನಗಳ ಹಿಂದೆ ಒಂದು ಬಹಿರಂಗ ಕಾರ್ಯಕ್ರಮದಲ್ಲಿ ಕೇಂದ್ರೀಯ ಆರೋಗ್ಯಮಂತ್ರಿ ಹರ್ಷವರ್ಧನ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಉಪಸ್ಥಿತಿಯಲ್ಲಿ ನೀಡಿದ್ದರು. ಆದಾಗ್ಯೂ, ದಕ್ಷಿಣ ಏಷ್ಯಾದ ವಿಶ್ವ ಆರೋಗ್ಯ ಸಂಸ್ಥೆಯ ಟ್ವಿಟ್ಟರ್ ಖಾತೆಯು “ಕೊರೋನದ ಸಂದರ್ಭದಲ್ಲಿ ಯಾವುದೇ ಸಾಂಪ್ರದಾಯಿಕ ಔಷಧಿಯನ್ನು ನಾವು ಅನುಮತಿ ನೀಡಿಲ್ಲ” ಎಂದು ಟ್ವೀಟ್ ಮಾಡಿ ತಿಳಿಸಿದೆ.

 ‘ಕೊರೊನಿಲ್’ಗೆ ಮಾನ್ಯತೆ ದೊರಕಿದೆ ಎಂದು ಸಾಬೀತುಪಡಿಸಿ! – ಭಾರತೀಯ ವೈದ್ಯಕೀಯ ಸಂಘದ ಸವಾಲು

ಭಾರತೀಯ ವೈದ್ಯಕೀಯ ಸಂಘವು ಸಾರ್ವಜನಿಕರ ಕಾಳಜಿಯಿಂದ ಹೇಳುತ್ತಿದೆಯೋ ಅಥವಾ ಆಯುರ್ವೇದದ ದ್ವೇಷದಿಂದ ಸವಾಲು ಮಾಡುತ್ತಿದೆ ಎಂದು ನೋಡಬೇಕಾಗಿದೆ; ಏಕೆಂದರೆ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ, ಅಲೋಪತಿ ಔಷಧೋಪಚಾರ ಮಾಡುವವರಿಗೆ ಆಯುರ್ವೇದದ ಮೇಲೆ ದ್ವೇಷ ಇರುತ್ತದೆ ಎಂದು ಅನೇಕ ಬಾರಿ ಬಹಿರಂಗವಾಗಿದೆ !

ಕೊರೊನಿಲ್ ಅನ್ನು ವೈದ್ಯರ ಅಧಿಕೃತ ಸಂಘವಾದ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರೋಧಿಸಿದೆ. “ಈ ಔಷಧಿಯನ್ನು ಯಾವುದೇ ಮಾನ್ಯತೆ ಪಡೆದ ಅಧಿಕೃತ ಸಂಸ್ಥೆ ಅನುಮೋದಿಸಿಲ್ಲ. ಮಾನ್ಯತೆ ಸಿಕ್ಕಿದೆ ಎಂದಾದಲ್ಲಿ ಅದನ್ನು ಸಾಬೀತುಪಡಿಸಬೇಕು” ಎಂದು ತಿಳಿಸಿದೆ.

‘ಈ ಪ್ರಕರಣವು ಸಾರ್ವಜನಿಕರನ್ನು ಸಂಪೂರ್ಣವಾಗಿ ದಾರಿ ತಪ್ಪಿಸುತ್ತದೆ ಮತ್ತು ಅವರ ಆರೋಗ್ಯದೊಂದಿಗೆ ಆಡುತ್ತದೆ. ಲಸಿಕೆ ತಯಾರಿಸಲು ಇಷ್ಟು ತಿಂಗಳು ತೆಗೆದುಕೊಂಡಾಗ, ಈ ಔಷಧಿ ಹೇಗೆ ಲಭ್ಯವಾಯಿತು ? ಇದನ್ನು ಯಾರು ಅನುಮೋದಿಸಿದರು?’, ಎಂಬ ಪ್ರಶ್ನೆಗಳನ್ನು ಐಎಂಎ ಮುಂದಿಟ್ಟಿದೆ.