ರೈತರ ಆಂದೋಲನಕ್ಕಾಗಿ ಕಾಂಗ್ರೆಸ್ ಆಯೋಜಿಸಿದ್ದ ‘ಜನ ಅಕ್ರೋಶ್ ಸಭೆ’ಯಲ್ಲಿ ಹಿಂದಿ ಚಿತ್ರಗೀತೆಗಳಿಗೆ ನೃತ್ಯ

ಕಾಂಗ್ರೆಸ್ ರೈತರನ್ನು ಎಷ್ಟು ಪ್ರೀತಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ !

ರಾಂಚಿ (ಜಾರ್ಖಂಡ್) – ರೈತರ ಆಂದೋಲನವನ್ನು ಬೆಂಬಲಿಸಲು ರಾಜ್ಯದ ಸರಾಯಕೆಲಾ-ಖಾರ್ಸಾವಾ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ‘ಜನ ಅಕ್ರೋಶ್ ಸಭೆ’ ಆಯೋಜಿಸಿತ್ತು. ಈ ಸಮಯದಲ್ಲಿ, ವೇದಿಕೆಯಲ್ಲಿ ಮಹಿಳೆಯರು ಹಿಂದಿ ಚಿತ್ರಗಳ ಹಾಡುಗಳಿಗೆ ನೃತ್ಯ ಮಾಡಿದರು. ಪಕ್ಷದ ಅಲ್ಪಸಂಖ್ಯಾತ ಮೋರ್ಚಾದಿಂದ ಇಲ್ಲಿ ಕುಕಡು ಹಾತ್ ಮೈದಾನದಲ್ಲಿ ಸಭೆ ಆಯೋಜಿಸಲಾಗಿತ್ತು. ಪಕ್ಷದ ಕೆಲವು ಮಹಿಳಾ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು ಮತ್ತು ಅವರ ಮುಂದೆ ನೃತ್ಯ ನಡೆಯುತ್ತಿತ್ತು. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಘಟನೆಯ ಬಗ್ಗೆ ಕಾಂಗ್ರೆಸ್ ಅನ್ನು ಟೀಕಿಸಿದ ಬಿಜೆಪಿ, ಕಾಂಗ್ರೆಸ್ ರೈತರ ಮೇಲೆ ಸುಳ್ಳು ಪ್ರೀತಿ ಹೊಂದಿದೆ ಎಂದು ಆರೋಪಿಸಿದೆ.