ಧಾರ್ಮಿಕ ಚಿತ್ರಗಳ ಮುಂದೆ ಶೌಚಾಲಯಗಳನ್ನು ನಿರ್ಮಿಸಿದ್ದಕ್ಕಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮುಖ್ಯಮಂತ್ರಿಗಳ ಕಚೇರಿ ಮುಖ್ಯಸ್ಥರು

ಹರಿದ್ವಾರ ಕುಂಭಮೇಳ!

ಸರ್ಕಾರಿ ನೌಕರರು ಮತ್ತು ಕುಂಭಮೇಳದ ನಿಯೋಜನೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳಲ್ಲಿ ಭಾವಭಕ್ತಿ ಇಲ್ಲದ ಕಾರಣ ಅವರು ಈ ರೀತಿ ಮಾಡುತ್ತಿದ್ದಾರೆ. ಹಿಂದೂ ರಾಷ್ಟ್ರದಲ್ಲಿ ಎಲ್ಲೆಡೆ ಸಾಧನೆ ಮಾಡುವ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಇರುವರು !

ಹರಿದ್ವಾರ (ಉತ್ತರಾಖಂಡ) – ಕುಂಭಮೇಳ ಸಿದ್ಧತೆಯ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಧಾರ್ಮಿಕ ವರ್ಣಚಿತ್ರಗಳನ್ನು ನಿರ್ಮಿಸಲಾಗಿದೆ; ಆದರೆ, ರಾಜಪಥದಲ್ಲಿ ಈ ಚಿತ್ರಗಳ ಮುಂದೆ ೧೦೦ಕ್ಕೂ ಹೆಚ್ಚು ತಾತ್ಕಾಲಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಇದರ ಪರಿಣಾಮವಾಗಿ, ಮುಖ್ಯಮಂತ್ರಿಗಳ ಕಚೇರಿ ಮುಖ್ಯಸ್ಥರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.