ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯಿಂದ ಕೋಟ್ಯವದಿ ಸಂಪತ್ತಿನ ಲೂಟಿ !

ಭಕ್ತರು ಶ್ರದ್ಧೆಯಿಂದ ಅರ್ಪಿಸಿದ ದಾನವು ಭ್ರಷ್ಟ ಅಧಿಕಾರಿಗಳ ಕಿಸೆಗೆ ಹೋಗುತ್ತಿದ್ದರೆ, ಭಕ್ತರು ದೇವಸ್ಥಾನಗಳಿಗೆ ಏಕೆ ದಾನ ನೀಡಬೇಕು ? ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಸರಕಾರಿ ಅಧಿಕಾರಿಯು ಕೋಟ್ಯವಧಿ ಸಂಪತ್ತು ಲೂಟಿ ಮಾಡಿರುವುದು ಮಾಹಿತಿ ಹಕ್ಕು ಅಧಿನಿಯಮದಿಂದ ಬಹಿರಂಗವಾಗಿದೆ.

ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ನಿರ್ಧಾರಕ್ಕೆ ತುರ್ತಾಗಿ ತಡೆ

ಧಾರ್ಮಿಕ ದತ್ತಿ ಆಯುಕ್ತರು ಬೆಳಗಾವಿ ಜಿಲ್ಲೆಯ ೧೬ ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ನಿರ್ಧಾರವನ್ನು ತೆಗೆದುಕೊಂಡು ಅವುಗಳಿಗೆ ನೋಟಿಸ್ ಕಳುಹಿಸಿದ್ದರು; ಈ ಅನ್ಯಾಯದ ಆದೇಶಕ್ಕೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮುಂದಿನ ಆದೇಶ ನೀಡುವ ತನಕ ತಡೆಹಿಡಿಯಲು ಹೇಳಿದ್ದಾರೆ.

ಪ್ರಸಿದ್ಧ ಹಿಂದುತ್ವನಿಷ್ಠ ಪತ್ರಕರ್ತ ಫ್ರಾನ್ಸುವಾ ಗೋತಿಯೆಯವರ ಟ್ವಿಟ್ಟರ್ ಖಾತೆ ಬಂದ್ !

ಸಾರ್ವಭೌಮ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತಕ್ಕೆ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ತಿಳುವಳಿಕೆ ನೀಡುವ ಟ್ವಿಟರ್ ನ  ದ್ವಿಮುಖ ನೀತಿಯಲ್ಲವೇ ? ಹಿಂದೂಗಳೇ, ಟ್ವಿಟರ್ ನ ದುರಹಂಕಾರದ ವಿರುದ್ಧ ಈಗ ಒಂದಾಗುವ ಆವಶ್ಯಕತೆಯಿದೆ !

ರಾಜಸ್ಥಾನದ ಅಲ್ವಾರ್ ನ ಪೊಲೀಸ್ ಠಾಣೆಯ ಪರಿಸರದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ನ ಅಮಾನತು ಹಾಗೂ ಬಂಧನ

ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ ನಂತರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಭರತ್ ಸಿಂಗ್ ತನ್ನ ಸಹಚರದೊಂದಿಗೆ ನಿವಾಸದ ಕೋಣೆಯಲ್ಲಿ ಮೂರು ದಿನಗಳ ಕಾಲ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಸಿಖ್ ಯುವಕನೊಂದಿಗೆ ಮದುವೆಯಾಗಿದ್ದ ಮುಸ್ಲಿಂ ಹುಡುಗಿಯನ್ನು ತನ್ನ ಅತ್ತೆಯ ಮನೆಯಿಂದ ಅಪಹರಿಸಲು ಕುಟುಂಬ ಸದಸ್ಯರ ಪ್ರಯತ್ನ

ಲ್ಲಿಯ ಮಂಡಿ ಗೋಬಿಂದ್‍ಗಡ್‍ನಲ್ಲಿ ಸಿಖ್ ಯುವಕನನ್ನು ಮದುವೆಯಾದ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಯುವತಿಯನ್ನು ಆಕೆಯ ಸಂಬಂಧಿಕರು ಆ ಯುವಕನ ಮನೆಯಿಂದ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ.

ನವದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಬಾಂಬ್ ಸ್ಫೋಟದ ಹಿಂದೆ ಇರಾನ್ ಕೈವಾಡ !

ನಿನ್ನೆ ತನಕ, ಪಾಕಿಸ್ತಾನಕ್ಕಾಗಿ ದೇಶದ್ರೋಹದ ಕೃತ್ಯಗಳನ್ನು ನಡೆಸುತ್ತಿದ್ದವರು ಈಗ ಇರಾನ್‍ಗೋಸ್ಕರವೂ ದೇಶದ್ರೋಹದ ಕೃತ್ಯಗಳನ್ನು ನಡೆಸುತ್ತಿದ್ದಾರೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ಶ್ರೀರಾಮಮಂದಿರಕ್ಕಾಗಿ ಅಗತ್ಯಕ್ಕಿಂತ ದುಪ್ಪಟ್ಟು ದೇಣಿಗೆ ಸಂಗ್ರಹ, ದೇಣಿಗೆ ಸಂಗ್ರಹಕ್ಕೆ ತಡೆ !

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ನಿಲ್ಲಿಸಲಾಗಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಈ ದೇವಸ್ಥಾನಕ್ಕೆ ೧ ಸಾವಿರದ ೧೦೦ ಕೋಟಿ ರೂಪಾಯಿ ಅಗತ್ಯವಿರುವಾಗ ೨ ಸಾವಿರದ ೫೦೦ ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದ್ದರಿಂದ ಈ ಅಭಿಯಾನವನ್ನು ನಿಲ್ಲಿಸಲಾಗಿದೆ.

‘ನನಗೆ ಮತ ನೀಡದಿದ್ದರೆ ನೀರು ಮತ್ತು ವಿದ್ಯುತ್ ಪೂರೈಕೆ ನಿಲ್ಲಿಸುತ್ತೇನೆ !’

ನನಗೆ ಮತ ಸಿಗದ ಪ್ರದೇಶಗಳಲ್ಲಿ ಜನರಿಗೆ ನೀರು ಮತ್ತು ವಿದ್ಯುತ್ ಸಿಗುವುದಿಲ್ಲ ಎಂದು ಬಂಗಾಲ ಕೃಷಿ ಸಚಿವ ತಪನ ದಾಸಗುಪ್ತಾ ಇಲ್ಲಿನ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ನೌಕರರು ಕೇಳದಿದ್ದರೆ, ಅವರನ್ನು ಬೆತ್ತದಿಂದ ಹೊಡೆಯಿರಿ! – ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ರಿಂದ ಜನರಿಗೆ ಸಲಹೆ

ಈ ಸಲಹೆಯು ಕಾನೂನನ್ನು ಕೈಗೆತ್ತಿಕೊಂಡಂತೆ. ಆಡಳಿತದ ಅಧಿಕಾರಿಗಳು ಮತ್ತು ನೌಕರರು ಜನರ ಕೆಲಸವನ್ನು ಮಾಡುತ್ತಿಲ್ಲವಾದರೆ ಅವರನ್ನು ಸರಿದಾರಿಗೆ ತರುವುದು ಸರ್ಕಾರದ ಜವಾಬ್ದಾರಿಯಲ್ಲವೇ ? ಇಂತಹ ಸಲಹೆಗಳನ್ನು ನೀಡುವ ಬದಲು, ಕೇಂದ್ರ ಸಚಿವರು ಆಡಳಿತವು ಜನಪರವಾಗುವಂತೆ ಪ್ರಯತ್ನಿಸಬೇಕು!

ಗೋಪಾಲಗಂಜ್ (ಬಿಹಾರ) ದಲ್ಲಿ ವಿಷಯುಕ್ತ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಮಂದಿಗೆ ಗಲ್ಲು, ೪ ಮಹಿಳೆಯರಿಗೆ ಜೀವಾವಧಿ ಶಿಕ್ಷೆ

೨೦೧೬ ರ ಆಗಸ್ಟ್ ೧೬ ರಂದು ಇಲ್ಲಿನ ಖಜುರಬಾನಿಯಲ್ಲಿ ವಿಷಯುಕ್ತ ಸರಾಯಿ ಸೇವನೆಯಿಂದ ೧೯ ಜನರು ಸಾವನ್ನಪ್ಪಿದರು ಮತ್ತು ೬ ಜನರು ಕುರುಡರಾಗಿದ್ದರು.