ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ನಿರ್ಧಾರಕ್ಕೆ ತುರ್ತಾಗಿ ತಡೆ

ಹಿಂದುತ್ವನಿಷ್ಠರ ಬೇಡಿಕೆಯ ಪರಿಣಾಮ

ಬೆಳಗಾವಿ – ಧಾರ್ಮಿಕ ದತ್ತಿ ಆಯುಕ್ತರು ಬೆಳಗಾವಿ ಜಿಲ್ಲೆಯ ೧೬ ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ನಿರ್ಧಾರವನ್ನು ತೆಗೆದುಕೊಂಡು ಅವುಗಳಿಗೆ ನೋಟಿಸ್ ಕಳುಹಿಸಿದ್ದರು; ಈ ಅನ್ಯಾಯದ ಆದೇಶಕ್ಕೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮುಂದಿನ ಆದೇಶ ನೀಡುವ ತನಕ ತಡೆಹಿಡಿಯಲು ಹೇಳಿದ್ದಾರೆ.

ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಿಸುವ ಅನ್ಯಾಯದ ನಿರ್ಧಾರದ ವಿರುದ್ಧ ಬೆಳಗಾವಿಯಲ್ಲಿ ಸಮಸ್ತ ದೇವಸ್ಥಾನದ ವಿಶ್ವಸ್ತರು ಮತ್ತು ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ, ಶ್ರೀರಾಮ ಸೇನಾ ಹಿಂದುಸ್ಥಾನ ಸಹಿತ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದವು. ‘ಮುಂದಿನ ೧೫ ದಿನಗಳಲ್ಲಿ ಬೆಳಗಾವಿಯ ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ನಿರ್ಧಾರವನ್ನು ಹಿಂಪಡೆಯದಿದ್ದರೆ, ನಾವು ರಾಜ್ಯವ್ಯಾಪಿ ಆಂದೋಲನವನ್ನು ಮಾಡುತ್ತೇವೆ, ಎಂದು ಮಹಾಸಂಘದ ಕರ್ನಾಟಕ ವಕ್ತಾರ ಶ್ರೀ. ಗುರುಪ್ರಸಾದ ಗೌಡ ಇವರು ಪತ್ರಿಕಾ ಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದರು. ಭಾಜಪದ ಶಾಸಕ ಅನಿಲ್ ಬೆನಕೆ ಮತ್ತು ಶಾಸಕ ಅಭಯ ಪಾಟೀಲ್ ಕೂಡ ಮಾರ್ಚ್ ೫ ರಂದು ಜಿಲ್ಲಾಧಿಕಾರಿ ಎಂ.ಜಿ. ಹಿರೆಮಠ ಮತ್ತು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ಪೂಜಾರಿ ಅವರನ್ನು ಭೇಟಿಯಾಗಿ ಮನವಿ ನೀಡಿದ್ದರು ಹಾಗೂ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡರು. ಅದರ ನಂತರ, ಎಲ್ಲಾ ಹಿಂದುತ್ವನಿಷ್ಠರು ತೀವ್ರ ವಿರೋಧವನ್ನು ಪರಿಗಣಿಸಿ ೧೬ ದೇವಸ್ಥಾನಗಳ ಆಡಳಿತಾಧಿಕಾರಿ ನೇಮಕಾತಿ ಆದೇಶವನ್ನು ತಡೆ ಹಿಡಿಯಲಾಗಿದೆ. ‘ದೇವಸ್ಥಾನಗಳಿಗೆ ಯಾವುದೇ ರೀತಿಯ ಆಡಳಿತಾಧಿಕಾರಿ ನೇಮಕಾತಿಯನ್ನು ನಾವು ಸಹಿಸುವುದಿಲ್ಲ, ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.

ದೇವಸ್ಥಾನ ಸರಕಾರಿಕರಣದ ಆದೇಶವನ್ನು ರದ್ದು ಪಡಿಸುವ ತನಕ ಹೋರಾಟ ಮುಂದುವರಿಯುವುದು ! – ಗುರುಪ್ರಸಾದ ಗೌಡ

ಶ್ರೀ. ಗುರುಪ್ರಸಾದ ಗೌಡ

ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಿಸುವ ಸರಕಾರದ ನಿರ್ಧಾರಕ್ಕ ತಡೆ ನೀಡಿರುವುದು ಸ್ವಾಗತಾರ್ಹ. ಆದರೆ, ದೇವಸ್ಥಾನ ಸರಕಾರಿಕರಣದ ಆದೇಶ ರದ್ದಾಗುವ ತನಕ ಮತ್ತು ಕರ್ನಾಟಕ ಸರಕಾರದ ವಶದಲ್ಲಿರುವ ೩೨ ಸಾವಿರ ದೇವಸ್ಥಾನಗಳನ್ನು ಮುಕ್ತಗೊಳಿಸುವವರೆಗೆ ಹೋರಾಟ ಮುಂದುವರಿಯುವುದು ಎಂದು ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕದ ವಕ್ತಾರ ಶ್ರೀ. ಗುರುಪ್ರಸಾದ ಗೌಡ ಅವರು ‘ಸನಾತನ ಪ್ರಭಾತದ ಪ್ರತಿನಿಧಿಯೊಂದಿಗೆ ಮಾತನಾಡುವಾಗ ಹೇಳಿದರು.