ಪ್ರಸಿದ್ಧ ಹಿಂದುತ್ವನಿಷ್ಠ ಪತ್ರಕರ್ತ ಫ್ರಾನ್ಸುವಾ ಗೋತಿಯೆಯವರ ಟ್ವಿಟ್ಟರ್ ಖಾತೆ ಬಂದ್ !

ಟ್ವಿಟ್ಟರ್ ನ ಹಿಂದೂದ್ವೇಷ ಮತ್ತು ಭಾರತ ದ್ವೇಷ ಮತ್ತೊಮ್ಮೆ ಬಹಿರಂಗ !

ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ಪ್ರಶ್ನಿಸಿ ‘ಆನ್ ಎನ್ಟೈರ್ಲಿ ನ್ಯೂ ಹಿಸ್ಟರಿ ಆಫ್ ಇಂಡಿಯಾ’ ಪುಸ್ತಕ ಬರೆದ ನಂತರ ಕ್ರಮಗೊಂಡಿರುವ ಅನುಮಾನ !

* ಸಾರ್ವಭೌಮ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವವಾಗಿರುವ ಭಾರತಕ್ಕೆ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ತಿಳುವಳಿಕೆ ನೀಡುವ ಟ್ವಿಟರ್ ನ  ದ್ವಿಮುಖ ನೀತಿಯಲ್ಲವೇ ? ಹಿಂದೂಗಳೇ, ಟ್ವಿಟರ್ ನ ದುರಹಂಕಾರದ ವಿರುದ್ಧ ಈಗ ಒಂದಾಗುವ ಆವಶ್ಯಕತೆಯಿದೆ !

* ಭಾರತವು ಹೊಸದಾಗಿ ಸತ್ಯ ಇತಿಹಾಸವನ್ನು ಬರೆಯಬೇಕಾಗಿದೆ ಎಂದು ಅನೇಕ ಬಾರಿ ಹೇಳಲಾಗಿದೆ; ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಅಂತಹ ಕ್ರಮವನ್ನು ಈಗಾಗಲೇ ಸರಕಾರಿ ಸಂಸ್ಥೆಗಳಿಂದ ನಿರೀಕ್ಷಿಸಲಾಗಿತ್ತು; ಆದರೆ ಇದನ್ನು ಓರ್ವ ಫ್ರೆಂಚ್ ಪತ್ರಕರ್ತರು ಮಾಡಿದ್ದಾರೆ, ಇದು ಭಾರತೀಯ ವ್ಯವಸ್ಥೆಗೆ ನಾಚಿಕೆಯ ವಿಷಯವಾಗಿದೆ. ಈಗ ಸರಕಾರ ಟ್ವಿಟರ್ ಗೆ ಉತ್ತರ ಕೇಳಬೇಕು ಮತ್ತು ಅದರ ಸ್ಥಾನವನ್ನು ತೋರಿಸಬೇಕು !

ನವ ದೆಹಲಿ : ಖ್ಯಾತ ಹಿಂದುತ್ವನಿಷ್ಠ ಫ್ರೆಂಚ್ ಪತ್ರಕರ್ತ ಫ್ರಾನ್ಸುವಾ ಗೋತಿಯೆ ಅವರಿಗೆ ಟ್ವಿಟರ್ ಯಾವುದೇ ಪೂರ್ವಕಲ್ಪನೆ ನೀಡದೇ ಅವರ ಟ್ವಿಟರ್ ಖಾತೆಯನ್ನು ಬಂದ್ ಮಾಡಿದೆ. ಇದರ ವಿರುದ್ಧ ಹಿಂದುತ್ವನಿಷ್ಠರಲ್ಲಿ ಆಕ್ರೋಶದ ಅಲೆ ಎದ್ದಿದೆ. ಇದಕ್ಕಾಗಿ ಮಾರ್ಚ್ ೯ ರಂದು #ISupportGautier ಎಂಬ ಹ್ಯಾಶ್‍ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿತ್ತು.

ಮಾರ್ಚ್ ೫ ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇವರು ಫ್ರಾನ್ಸುವಾ ಗೋತಿಯೆರವರು ಬರೆದ ‘ಆನ್ ಎನ್ಟೈರ್ಲಿ ನ್ಯೂ ಹಿಸ್ಟರಿ ಆಫ್ ಇಂಡಿಯಾ’ (ಭಾರತದ ಇತಿಹಾಸ – ನೂತನ ದೃಷ್ಟಿಕೋನದಿಂದ) ಎಂಬ ಪುಸ್ತಕವನ್ನು ಪ್ರಕಾಶಿಸಿದರು. ಪುಸ್ತಕದಲ್ಲಿ, ಗೋತಿಯೆ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಸವಾಲು ಹಾಕಿ ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದ ಇತಿಹಾಸವನ್ನು ಹೇಗೆ ಕಳಂಕಿತಗೊಳಿಸಿವೆ ಮತ್ತು ಕುತಂತ್ರದಿಂದ ಚಿತ್ರಣವನ್ನು ತಿರುಚಿ ಪ್ರಸಾರ ಮಾಡಿವೆ ಎಂದು ಬಹಿರಂಗಪಡಿಸಿದ್ದಾರೆ. ಅದಕ್ಕಾಗಿಯೇ ಟ್ವಿಟರ್ ಈ ಕ್ರಮ ಕೈಗೊಂಡಿದೆ ಎಂದು ಗರುಡ ಪ್ರಕಾಶನದ ಅಧ್ಯಕ್ಷ ಶ್ರೀ. ಸಂಕ್ರಾಂತ್ ಸಾನು ವ್ಯಕ್ತಪಡಿಸಿದ್ದಾರೆ.

ಗೋತಿಯೆ ಈ ಹಿಂದೆ ಕಾಶ್ಮೀರಿ ಹಿಂದೂಗಳ ನರಮೇಧ, ಔರಂಗಜೇಬನ ಕ್ರೌರ್ಯ ಇತ್ಯಾದಿಗಳ ನಿಜವಾದ ಇತಿಹಾಸವನ್ನು ವಿಶ್ವ ವೇದಿಕೆಯಲ್ಲಿ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದ್ದರು.

ಫ್ರಾನ್ಸುವಾ ಗೋತಿಯೆ ಬರೆದ ‘ಆನ್ ಎನ್‍ಟ್ರೀಲಿ ನ್ಯೂ ಹಿಸ್ಟರಿ ಆಫ್ ಇಂಡಿಯಾ’ ಪುಸ್ತಕದ ಸಂಕ್ಷಿಪ್ತ ಪರಿಚಯ!

ಇಂದು ಚಾಲತಿಯಲ್ಲಿರುವ ಭಾರತೀಯ ಇತಿಹಾಸವನ್ನು ಪಾಶ್ಚಾತ್ಯ ಇತಿಹಾಸಕಾರರು ಮತ್ತು ಅವರ ಬೆಂಬಲಿಗರಾದ ಭಾರತೀಯ ವಿದ್ವಾಂಸರು ಕ್ರೈಸ್ತ ಧರ್ಮದ ಪ್ರಕಾರ ಮಾನವ ಇತಿಹಾಸವು ಕೇವಲ ೬೦೦೦ ವರ್ಷಗಳಷ್ಟು ಹಳೆಯದು ಎಂದು ಗೃಹಿಸಿ ಬರೆದಿದ್ದಾರೆ. ಈ ಇತಿಹಾಸಕಾರರ ಊಹೆಗಳು ಮತ್ತು ತತ್ವಗಳಿಗೆ ಅನುಗುಣವಾಗಿ, ಭಾರತದ ಅನೇಕ ಐತಿಹಾಸಿಕ ಪ್ರಸಂಗಗಳು ಬಹಳ ವಿಳಂಬದಿಂದ ಸಂಭವಿಸಿವೆ ಎಂದು ತೋರಿಸಲಾಗಿದೆ. ‘ಆರ್ಯ ಆಕ್ರಮಣ’ದ ಸುಳ್ಳು ಇತಿಹಾಸವೂ ಅದರೊಳಗೆ ಬಂದಿದೆ ! ಅಲ್ಲದೆ, ವೇದಗಳಲ್ಲಿ ಸರಸ್ವತಿ ನದಿಯನ್ನು ೬೦ ಕ್ಕೂ ಹೆಚ್ಚು ಬಾರಿ ಉಲ್ಲೇಖಿಸಿದ್ದರೂ ಅದನ್ನು ‘ಕಟ್ಟುಕಥೆ’ ಎಂದು ಹೇಳುತ್ತಾ ತಪ್ಪಾಗಿ ನಿರೂಪಿಸಿದ್ದಾರೆ. ಈ ಪುಸ್ತಕದಲ್ಲಿ, ಕಳಿಂಗ ಕದನದ ನಂತರ ಅಶೋಕನು ಪ್ರಾಯಶ್ಚಿತ್ತವೆಂದು ಬೌದ್ಧಧರ್ಮವನ್ನು ಸ್ವೀಕರಿಸಿದ ಸುಳ್ಳನ್ನು ಸಹ ಫ್ರಾನ್ಸುವಾ ಗೋತಿಯೆ ಬಹಿರಂಗಪಡಿಸಿದ್ದಾರೆ. ಒಟ್ಟಾರೆಯಾಗಿ, ಗೋತಿಯೆ ಈ ಪುಸ್ತಕದ ಮೂಲಕ ಭಾರತದ ಹೊಸ ಆದರೆ ಸತ್ಯ ಇತಿಹಾಸವನ್ನು ಬರೆದಿದ್ದಾರೆ, ವೈಜ್ಞಾನಿಕ, ಭಾಷಾ ಮತ್ತು ಆನುವಂಶಿಕ ಆವಿಷ್ಕಾರಗಳ ಆಧಾರದ ಮೇಲೆ ಪ್ರತಿಯೊಂದು ಪ್ರಮುಖ ಘಟನೆಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ಮಾಧ್ಯಮದ ಮೂಲಕ ಅವರು ಭಾರತೀಯ ಇತಿಹಾಸವು ಬಹಳ ಪ್ರಾಚೀನವಾದುದು ಎಂದು ಬೆಳಕಿಗೆ ತಂದಿದ್ದಾರೆ.