ರಾಜಸ್ಥಾನದ ಅಲ್ವಾರ್ ನ ಪೊಲೀಸ್ ಠಾಣೆಯ ಪರಿಸರದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ನ ಅಮಾನತು ಹಾಗೂ ಬಂಧನ

ಅಲ್ವಾರ್ (ರಾಜಸ್ಥಾನ) – ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ ನಂತರ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಭರತ್ ಸಿಂಗ್ ತನ್ನ ಸಹಚರದೊಂದಿಗೆ ನಿವಾಸದ ಕೋಣೆಯಲ್ಲಿ ಮೂರು ದಿನಗಳ ಕಾಲ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ನಂತರ ಆತನನ್ನು ಬಂಧಿಸಿ ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ. ಇದಲ್ಲದೆ ಇತರ ೪ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಸಬ್ ಇನ್‍ಸ್ಪೆಕ್ಟರ್ ನ ಕೊಠಡಿ ಪೊಲೀಸ್ ಠಾಣೆಯ ಪರಿಸರದಲ್ಲಿದೆ. ಅಲ್ಲಿ ಆತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

೨೦೧೮ ರಲ್ಲಿ ವರದಕ್ಷಿಣೆ ಕೋರಿ ಕಿರುಕುಳ ನೀಡಿದ್ದಕ್ಕಾಗಿ ಗಂಡನ ವಿರುದ್ಧ ಮಹಿಳೆ ಪ್ರಕರಣ ದಾಖಲಿಸಿದ್ದಳು; ನಂತರ ಇತ್ಯರ್ಥಪಡಿಸಲಾಗಿತ್ತು. ಆದರೆ ಈಗ ಪತಿಯು ವಿಚ್ಛೇದನೆ ಪಡೆಯಲು ಬಯಸಿದ್ದಾನೆ ಆದರೆ ಅವಳು ಅದಕ್ಕೆ ಒಪ್ಪಲಿಲ್ಲ. ಇದರ ಬಗ್ಗೆ ದೂರು ನೀಡಲು ಅವರು ಪೊಲೀಸ್ ಠಾಣೆಗೆ ಬಂದಿದ್ದರು.