ಸಿಖ್ ಯುವಕನೊಂದಿಗೆ ಮದುವೆಯಾಗಿದ್ದ ಮುಸ್ಲಿಂ ಹುಡುಗಿಯನ್ನು ತನ್ನ ಅತ್ತೆಯ ಮನೆಯಿಂದ ಅಪಹರಿಸಲು ಕುಟುಂಬ ಸದಸ್ಯರ ಪ್ರಯತ್ನ

ಪೊಲೀಸರಿಂದ ಅಪಹರಣದ ದೂರು ದಾಖಲಿಸುತ್ತಾ ಬಂಧನ

ಹಿಂದೂ ಹುಡುಗಿಯು ಮುಸ್ಲಿಮರೊಂದಿಗಿನ ಮದುವೆಗೆ ವಿರೋಧವಾದಾಗ ಹಿಂದೂಗಳಿಗೆ ಬುದ್ಧಿ ಹೇಳುವವರು ಮತಾಂಧರ ಈ ವೃತ್ತಿಯ ಬಗ್ಗೆ ಮೌನವಾಗಿರುತ್ತಾರೆ ಎಂಬುದನ್ನು ಗಮನದಲ್ಲಿಟ್ಟಿಕೊಳ್ಳಿ !

ಫತೇಘಡ್ ಸಾಹಿಬ್ (ಪಂಜಾಬ್) – ಇಲ್ಲಿಯ ಮಂಡಿ ಗೋಬಿಂದ್‍ಗಡ್‍ನಲ್ಲಿ ಸಿಖ್ ಯುವಕನನ್ನು ಮದುವೆಯಾದ ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಯುವತಿಯನ್ನು ಆಕೆಯ ಸಂಬಂಧಿಕರು ಆ ಯುವಕನ ಮನೆಯಿಂದ ಕೊಂಡೊಯ್ಯಲು ಪ್ರಯತ್ನಿಸಿದ್ದಾರೆ. ಅಪಹರಣಕಾರರ ಬೆನ್ನತ್ತಿದ ಪೊಲೀಸರು ಅವರ ಮೇಲೆ ಅಪಹರಣದ ದೂರನ್ನು ದಾಖಲಿಸಿ ಬಂಧಿಸಿದ್ದಾರೆ.

ಸಿಖ್ ಯುವಕ ಹರಮನ್ ಸಿಂಗ್ ನೀಡಿದ ಮಾಹಿತಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಕುಟುಂಬವೊಂದು ಕೆಲವು ದಿನಗಳ ಕಾಲ ಅವರ ಮನೆಯಲ್ಲಿ ಉಳಿಯಲು ಬಂದಿದ್ದರು. ಅವರು ಅಸಿಮಾ ಬಾನೊನೊಂದಿಗೆ ಪ್ರೀತಿ ನಿರ್ಮಾಣವಾಯಿತು. ಅವರು ಫೆಬ್ರವರಿ ೧೨ ರಂದು ಗುರುದ್ವಾರಕ್ಕೆ ಹೋಗಿ ಅವಳೊಂದಿಗೆ ಮದುವೆಯಾದರು. ಆ ಸಮಯದಲ್ಲಿ ಅವರ ಕುಟುಂಬದವರು ವಿರೋಧಿಸಲಿಲ್ಲ. ನಂತರ ಅವಳು ಅವರ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಳು. ಕೆಲವು ದಿನಗಳ ನಂತರ, ಆಕೆಯ ಕುಟುಂಬದವರು ಕಾಶ್ಮೀರಕ್ಕೆ ಮರಳಿ ಹೋದರು. ಫೆಬ್ರವರಿ ೨೮ ರಂದು, ಹರಮನ್ ಸಿಂಗ್ ಚಂಡೀಗಡ್‍ಗೆ ಹೋಗಿದ್ದಾಗ ಆತನಿಗೆ ದೂರವಾಣಿ ಕರೆ ಬಂದಿದ್ದು ಯುವತಿಯ ಕುಟುಂಬವು ಅವನ ಮನೆಗೆ ಬಂದಿರುವುದಾಗಿ ಹಾಗೂ ಅವರು ಆಕೆಯನ್ನು ವಾಹನದಲ್ಲಿ ಕರೆದೊಯ್ಯುತ್ತಿದ್ದಾರೆ ಎಂದು ತಿಳಿಸಿದರು. ಇದನ್ನು ತಿಳಿದ ಹರಮನ್ ಸಿಂಗ್ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ವಾಹನವನ್ನು ಬೆನ್ನಟ್ಟಿ ಕುಟುಂಬ ಸದಸ್ಯರನ್ನು ತಡೆದು ಅಪಹರಣದ ಆರೋಪದ ಮೇಲೆ ಬಂಧಿಸಿದರು.