ಶ್ರೀರಾಮಮಂದಿರಕ್ಕಾಗಿ ಅಗತ್ಯಕ್ಕಿಂತ ದುಪ್ಪಟ್ಟು ದೇಣಿಗೆ ಸಂಗ್ರಹ, ದೇಣಿಗೆ ಸಂಗ್ರಹಕ್ಕೆ ತಡೆ !

೨ ಸಾವಿರದ ೫೦೦ ಕೋಟಿ ರೂಪಾಯಿ ಜಮೆ

ದೇವಾಲಯಕ್ಕೆ ಬೇಕಾದ ಹಣಕ್ಕಿಂತ ಹೆಚ್ಚಿನ ಹಣ ಸಂಗ್ರಹವಾಗಿದ್ದರಿಂದ ಅದನ್ನು ದೇಶದಲ್ಲಿ ಶಿಥಿಲಗೊಂಡಿರುವ ಪ್ರಾಚೀನ ಮತ್ತು ದೊಡ್ಡ ದೇವಾಲಯಗಳ ನವೀಕರಣಕ್ಕಾಗಿ ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದಕ್ಕಾಗಿ ಧರ್ಮಶಿಕ್ಷಣ ನೀಡುವ ಕೇಂದ್ರಗಳನ್ನು ತೆರೆಯಲು ಖರ್ಚು ಮಾಡಬೇಕೆಂದು ಹಿಂದೂಗಳಿಗೆ ಅನ್ನಿಸುತ್ತದೆ !

ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಭವ್ಯ ಶ್ರೀರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ನಿಲ್ಲಿಸಲಾಗಿದೆ ಎಂದು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ಈ ದೇವಸ್ಥಾನಕ್ಕೆ ೧ ಸಾವಿರದ ೧೦೦ ಕೋಟಿ ರೂಪಾಯಿ ಅಗತ್ಯವಿರುವಾಗ ೨ ಸಾವಿರದ ೫೦೦ ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಲಾಗಿದ್ದರಿಂದ ಈ ಅಭಿಯಾನವನ್ನು ನಿಲ್ಲಿಸಲಾಗಿದೆ.

ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀ. ಚಂಪತ ರಾಯ್‌

ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾತನಾಡಿ, ಜನರು ಈಗ ದಾನ ಮಾಡಲು ಬಯಸಿದರೆ, ಅವರು ಅದನ್ನು ಆನ್‌ಲೈನ್‌ನಲ್ಲಿ ಮಾಡಬೇಕು. ಅದಕ್ಕಾಗಿ ಅವರು ಟ್ರಸ್ಟ್‌ನ ವೆಬ್‌ಸೈಟ್‌ಗೆ ಹೋಗಬಹುದು.

ನಾವು ದೇವಾಲಯದ ಮುಂಭಾಗದಲ್ಲಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಮಾತುಕತೆ ನಡೆಯುತ್ತಿದೆ; ಆದರೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ; ಆದರೆ ಶ್ರೀರಾಮಮಂದಿರದ ನಿರ್ಮಾಣ ಮುಂದಿನ ೩ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ, ಎಂದರು.