ಸರ್ಕಾರಿ ನೌಕರರು ಕೇಳದಿದ್ದರೆ, ಅವರನ್ನು ಬೆತ್ತದಿಂದ ಹೊಡೆಯಿರಿ! – ಕೇಂದ್ರ ಸಚಿವ ಗಿರಿರಾಜ್ ಸಿಂಗ್‌ರಿಂದ ಜನರಿಗೆ ಸಲಹೆ

ಈ ಸಲಹೆಯು ಕಾನೂನನ್ನು ಕೈಗೆತ್ತಿಕೊಂಡಂತೆ. ಆಡಳಿತದ ಅಧಿಕಾರಿಗಳು ಮತ್ತು ನೌಕರರು ಜನರ ಕೆಲಸವನ್ನು ಮಾಡುತ್ತಿಲ್ಲವಾದರೆ ಅವರನ್ನು ಸರಿದಾರಿಗೆ ತರುವುದು ಸರ್ಕಾರದ ಜವಾಬ್ದಾರಿಯಲ್ಲವೇ ? ಇಂತಹ ಸಲಹೆಗಳನ್ನು ನೀಡುವ ಬದಲು, ಕೇಂದ್ರ ಸಚಿವರು ಆಡಳಿತವು ಜನಪರವಾಗುವಂತೆ ಪ್ರಯತ್ನಿಸಬೇಕು!

ಕೇಂದ್ರ ಸಚಿವ ಗಿರಿರಾಜ್ ಸಿಂಗ್

ಬೇಗುಸರಾಯ್ (ಬಿಹಾರ) – ‘ಸರ್ಕಾರಿ ಅಧಿಕಾರಿಗಳು ಆಗಾಗ್ಗೆ ಜನರ ದೂರುಗಳನ್ನು ನಿರ್ಲಕ್ಷಿಸುತ್ತಾರೆ. ನನಗೆ ಜನಸಾಮಾನ್ಯರಿಂದ ಆಗಾಗ ದೂರುಗಳು ಬರುತ್ತಿರುತ್ತವೆ. ಸಣ್ಣ-ಪುಟ್ಟ ವಿಷಯಗಳಿಗಾಗಿ ನೀವು ನನ್ನ ಬಳಿಗೆ ಏಕೆ ಬರುತ್ತೀರಿ ? ಸಂಸದರು, ಶಾಸಕರು, ಗ್ರಾಮದ ಮುಖ್ಯಸ್ಥರು, ಜಿಲ್ಲಾಧಿಕಾರಿ, ಉಪ ಜಿಲ್ಲಾಧಿಕಾರಿಗಳು ಎಲ್ಲರೂ ಜನರ ಸೇವೆ ಮಾಡುವುದು ಅವರ ಕರ್ತವ್ಯವಿದೆ. ಅವರು ನಿಮ್ಮ ಮಾತನ್ನು ಕೇಳದಿದ್ದರೆ, ಎರಡೂ ಕೈಗಳಲ್ಲಿ ಬೆತ್ತವನ್ನು ಹಿಡಿದು ತಲೆಗೆ ಹೊಡೆಯಿರಿ. ಇದರಿಂದಲೂ ಕೆಲಸ ಮಾಡದಿದ್ದರೆ, ನಾನು ನಿಮ್ಮೊಂದಿಗಿದ್ದೇನೆ ಎಂದು ನಾನು ಈ ಜನರಿಗೆ ಹೇಳಲು ಬಯಸುತ್ತೇನೆ’ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ತಮ್ಮ ಕ್ಷೇತ್ರದ ಜನರಿಗೆ ‘ಸಲಹೆ’ ನೀಡಿದ್ದಾರೆ.