ಬಂಗಾಲದ ಕೃಷಿ ಸಚಿವ ತಪನ್ ದಾಸಗುಪ್ತಾರಿಂದ ಮತದಾರರಿಗೆ ಬೆದರಿಕೆ
ಬಂಗಾಲದಲ್ಲಿ ಮಂತ್ರಿಗಳು ಇಂತಹ ಬೆದರಿಕೆಗಳನ್ನು ಹಾಕುತ್ತಾರೆ, ಅಂದರೆ ಅಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸರ್ವಾಧಿಕಾರವಿದೆ, ಎಂಬುದು ಗಮನಕ್ಕೆ ಬರುತ್ತದೆ ! ಇದರ ವಿರುದ್ಧ ಪ್ರಜಾಪ್ರಭುತ್ವದ ತಥಾಕಥಿತ ಬೆಂಬಲಿಗರಾದ ಜಾತ್ಯತೀತವಾದಿಗಳು ಮತ್ತು ಪ್ರಗತಿ (ಅಧೋಗತಿ)ಪರ ಪಕ್ಷ, ಸಂಘಟನೆ, ಬುದ್ಧಿಜೀವಿಗಳು ಬಾಯಿ ತೆರೆಯುವುದಿಲ್ಲ ಎಂಬುದನ್ನು ಗಮನಿಸಿ.
ಹೂಗ್ಲಿ (ಬಂಗಾಲ) – ನನಗೆ ಮತ ಸಿಗದ ಪ್ರದೇಶಗಳಲ್ಲಿ ಜನರಿಗೆ ನೀರು ಮತ್ತು ವಿದ್ಯುತ್ ಸಿಗುವುದಿಲ್ಲ ಎಂದು ಬಂಗಾಲ ಕೃಷಿ ಸಚಿವ ತಪನ ದಾಸಗುಪ್ತಾ ಇಲ್ಲಿನ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
Bengal minister warns 'no water or electricity if not voted to power'; stirs controversy https://t.co/W7TDpiVO4S
— Republic (@republic) March 7, 2021
ಚುನಾವಣೆಯ ಮೊದಲು ತೃಣಮೂಲ ಕಾಂಗ್ರೆಸ್ ಶಾಸಕ ಹಮೀದುಲ್ ರೆಹಮಾನ್ ಸಾರ್ವಜನಿಕ ಸಭೆಯಲ್ಲಿ ‘ಚುನಾವಣೆಯ ನಂತರ ನಂಬಿಕೆ ದ್ರೋಹ ಬಗೆದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆದರಿಕೆ ಹಾಕಿದ್ದರು. ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸರಕಾರಿ ಲಾಭದ ಆನಂದ ಅನುಭವಿಸಿದ ನಂತರವೂ, ನಂಬಿಕೆ ದ್ರೋಹ ಮಾಡುವವರನ್ನು ದೇಶದ್ರೋಹಿ ಎಂದು ಪರಿಗಣಿಸಲಾಗುವುದು’, ಎಂದು ಅವರು ಹೇಳಿದ್ದಾರೆ.