ದೇಶದಲ್ಲಿ ಅಪರಾಧಗಳನ್ನು ಕಡಿಮೆ ಮಾಡುವ ಬದಲು, ಅದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಗುರಿಯಾಗಿರಬೇಕು, ಆಗ ಮಾತ್ರ ಸಮಾಜ ಸುರಕ್ಷತೆ ಮತ್ತು ಶಾಂತಿಯಿಂದ ಬದುಕಲು ಸಾಧ್ಯ !
ನವದೆಹಲಿ : ರಾಷ್ಟ್ರೀಯ ಅಪರಾಧ ನೋಂದಣಿ ಇಲಾಖೆಯ ಪ್ರಕಾರ, ೨೦೧೯ ರಲ್ಲಿ ದೇಶದಲ್ಲಿ ಗಲಭೆಗಳು, ಕೊಲೆಗಳು ಮತ್ತು ಅತ್ಯಾಚಾರಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ನಿತ್ಯಾನಂದ್ ರಾಯ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಜೊತೆಗೆ ಎಲ್ಲಾ ಅಪರಾಧಗಳ ದಾಖಲೆಗಳನ್ನು ಸರ್ಕಾರ ‘ಡಿಜಿಟಲೈಜೆಶನ್’ ಮಾಡಲಾಗುವುದು ಎಂದೂ ಅವರು ಹೇಳಿದರು.
೧. ೨೦೧೮ ರಲ್ಲಿ ದೇಶದಲ್ಲಿ ೫೧೨ ಗಲಭೆಗಳು ವರದಿಯಾಗಿವೆ; ಆದರೆ ೨೦೧೯ ರಲ್ಲಿ ಆ ಸಂಖ್ಯೆ ೪೪೦ ಆಗಿತ್ತು.
೨. ೨೦೧೮ ರಲ್ಲಿ ಅತ್ಯಾಚಾರದ ೩೩ ಸಾವಿರದ ೩೫೬ ಪ್ರಕರಣಗಳು, ೨೯ ಸಾವಿರದ ೨೯ ಕೊಲೆ ಪ್ರಕರಣಗಳು ಮತ್ತು ೧ ಲಕ್ಷ ೫ ಸಾವಿರದ ೭೩೪ ಅಪಹರಣದ ಪ್ರಕರಣಗಳು ನಡೆದಿವೆ. ಇದರ ತುಲನೆಯಲ್ಲಿ ೨೦೧೯ ರಲ್ಲಿ ೩೨ ಸಾವಿರ ೩೩ ಅತ್ಯಾಚಾರ ಪ್ರಕರಣಗಳು, ೨೮ ಸಾವಿರ ೯೧೮ ಕೊಲೆ ಪ್ರಕರಣಗಳು ಮತ್ತು ೧ ಲಕ್ಷ ೫ ಸಾವಿರ ೩೭ ಅಪಹರಣ ಪ್ರಕರಣಗಳು ದಾಖಲಾಗಿವೆ.
೩. ೨೦೧೮ ರಿಂದ ೨೦೨೦ ರವರೆಗೆ ಭಾರತಕ್ಕೆ ಪಾಕಿಸ್ತಾನದಿಂದ ೧೧೬, ಬಾಂಗ್ಲಾದೇಶದಿಂದ ೨ ಸಾವಿರದ ೮೧೨ ಮತ್ತು ಮ್ಯಾನ್ಮಾರ್‍ನಿಂದ ೩೨೫ ಜನರು ನುಸುಳಿ ಬಂದಿದ್ದಾರೆ.