ಹೆಂಡತಿಯ ಎಲ್ಲಾ ಜವಾಬ್ದಾರಿಗಳು ಗಂಡನ ಮೇಲೆ ಇರುತ್ತದೆ. ಅವಳನ್ನು ಎಲ್ಲ ವಿಷಯಗಳಿಂದ ರಕ್ಷಿಸುವುದು ಆತನ ಕರ್ತವ್ಯವಾಗಿದೆ. ಇದನ್ನು ಈಗ ನ್ಯಾಯಾಲಯಕ್ಕೆ ಹೇಳಬೇಕಾಗುತ್ತಿದೆ ಎಂದರೆ, ಭಾರತದಲ್ಲಿ ಕುಟುಂಬ ವ್ಯವಸ್ಥೆಯಲ್ಲಿ ಎಷ್ಟು ಅನಾಚಾರ ನಡೆಯುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ !
ನವದೆಹಲಿ – ಭಾರತದಲ್ಲಿ ಚಾಲತಿಯಲ್ಲಿರುವ ಪದ್ಧತಿಯ ಪ್ರಕಾರ, ಮದುವೆಯ ನಂತರ ಹೆಂಡತಿ ತನ್ನ ಗಂಡನ ಮನೆಯಲ್ಲಿ ಉಳಿಯಲು ಹೋಗುತ್ತಾಳೆ; ಆದರೆ ಮಹಿಳೆಗೆ ಅತ್ತೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದಲ್ಲಿ, ಆಕೆಗೆ ಆದ ವೇದನೆಗೆ ಪತಿಯೇ ಕಾರಣಕರ್ತ ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ವಿಚಾರಣೆಯಲ್ಲಿ ತಿಳಿಸಿದೆ. ಈ ಸಮಯದಲ್ಲಿ, ಪತ್ನಿಯನ್ನು ಹೊಡೆದ ಆರೋಪವಿರುವ ವ್ಯಕ್ತಿಗೆ ಬಂಧನ ಪೂರ್ವ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತು. ಇದು ಆ ವ್ಯಕ್ತಿಯ ಮೂರನೇ ಮದುವೆಯಾಗಿತ್ತು ಹಾಗೂ ಸಂಬಂಧಪಟ್ಟ ಮಹಿಳೆಯ ಎರಡನೇ ವಿವಾಹವಾಗಿತ್ತು. ಆಕೆಯನ್ನು ಗಂಡನಿಂದ ಅಲ್ಲ, ಅತ್ತೆಯಿಂದ ಕಿರುಕುಳ ನೀಡಲಾಗಿದೆ ಎಂದು ಪತಿಯ ವಕೀಲರು ಮಂಡಿಸಿದ್ದರು. ಅದಕ್ಕೆ ನ್ಯಾಯಾಲಯವು ಮೇಲಿನ ಅಭಿಪ್ರಾಯವನ್ನು ನೀಡಿದೆ.