ಹಿಂದೂ ಜನಜಾಗೃತಿ ಸಮಿತಿಯಿಂದ ಭಾರತ ಸರಕಾರದ ಕಡೆ ಕ್ರಮ ಕೈಗೊಳ್ಳುವಂತೆ ಒತ್ತಾಯ !
ಯಾವುದೇ ಸಂಘಟನೆಯು ಅಂತಹ ಬೇಡಿಕೆಯನ್ನು ಮಾಡಬೇಕಾಗಿಲ್ಲ, ಬದಲಾಗಿ ಸರಕಾರವು ಸ್ವತಃ ಕ್ರಮ ತೆಗೆದುಕೊಳ್ಳುವುದು ಅಪೇಕ್ಷಿತವಿದೆ !
ಮುಂಬಯಿ : ವಿಶ್ವದ ವಿವಿಧ ದೇಶಗಳ ‘ಸ್ವಾತಂತ್ರ್ಯ’ದ ಬಗ್ಗೆ ಮೌಲ್ಯಮಾಪನ ಮಾಡುವ ಅಮೇರಿಕಾದ ‘ಫ್ರೀಡಂ ಹೌಸ್’ ತನ್ನ ವೆಬ್‍ಸೈಟ್ freedomhouse.org ನಲ್ಲಿ ಭಾರತದ ತಪ್ಪು ನಕ್ಷೆಯನ್ನು ತೋರಿಸಿದೆ. ಭಾರತದ ನಕ್ಷೆಯಲ್ಲಿ ಕಾಶ್ಮೀರ ಪ್ರದೇಶ ಮತ್ತು ಅಕ್ಸಾಯಿ ಚಿನ್‍ಅನ್ನು ಭಾರತದಲ್ಲಿ ತೋರಿಸಿಲ್ಲ, ಅದೇರೀತಿ ಅಂಡಮಾನ್-ನಿಕೋಬಾರ್ ಮತ್ತು ಲಕ್ಷದ್ವೀಪ ದ್ವೀಪಗಳನ್ನು ತೋರಿಸಲೇ ಇಲ್ಲ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆದಾಗ್ಯೂ ‘ಫ್ರೀಡಂ ಹೌಸ್’ ಕಾಶ್ಮೀರವನ್ನು ‘ಪಾಕಿಸ್ತಾನಿ ಕಾಶ್ಮೀರ’ ಎಂದು ಉಲ್ಲೇಖಿಸಿದರೆ, ಅಕ್ಸಾಯಿ ಚಿನ್ ಅನ್ನು ಚೀನಾದ ಪ್ರದೇಶವೆಂದು ತೋರಿಸಲಾಗಿದೆ. ಇದು ಭಾರತದ ನಕ್ಷೆಯ ವಿಕೃತಿಯಾಗಿದ್ದು ಭಾರತದ ಅವಮಾನವೇ ಆಗಿದೆ. ಹಿಂದೂ ಜನಜಾಗೃತಿ ಸಮಿತಿಯು ಈ ಸಂಸ್ಥೆಯನ್ನು ಬಹಿರಂಗವಾಗಿ ನಿಷೇಧಿಸಿದೆ. ಈ ಸಂದರ್ಭದಲ್ಲಿ ಭಾರತ ಸರಕಾರವು ಸಂಘಟನೆಯೊಂದಿಗೆ ಪತ್ರ ವ್ಯವಹಾರ ನಡೆಸಬೇಕು ಮತ್ತು ಭಾರತದ ತಪ್ಪು ನಕ್ಷೆಯನ್ನು ತೆಗೆದುಹಾಕಿ ಸರಿಯಾದ ನಕ್ಷೆಯನ್ನು ಪ್ರಕಟಿಸುವಂತೆ ಅವರಿಗೆ ತಿಳಿಸಬೇಕು; ಇಲ್ಲದಿದ್ದರೆ, ಭಾರತ ಸರಕಾರ ಈ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿದೆ.
೧. ಸಮಿತಿಯು ಕೇಂದ್ರ ಗೃಹ ಸಚಿವ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಮತ್ತು ಭಾರತೀಯ ಸಮೀಕ್ಷಾ ಇಲಾಖೆಗಳಿಗೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ಭಾರತ ಸರಕಾರ ಪ್ರಕಟಿಸಿದ ಭಾರತದ ನಕ್ಷೆಯನ್ನು ಅಂತಿಮ ಎಂದು ಪರಿಗಣಿಸಿ ಅದನ್ನು ಎಲ್ಲಾ ಕಡೆಗಳಲ್ಲಿ ಬಳಸಬೇಕು. ಭಾರತದ ನಕ್ಷೆಯನ್ನು ವಿರೂಪಗೊಳಿಸುವುದು ಭಾರತೀಯ ದಂಡ ಸಂಹಿತೆ (ತಿದ್ದುಪಡಿ) ೧೯೬೧ ರ ಸೆಕ್ಷನ್ ೨(೧) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
೨. ‘ಫ್ರೀಡಂ ಹೌಸ್’ ಭಾರತದ ನಕ್ಷೆಯನ್ನು ವಿರೂಪಗೊಳಿಸುವುದರಿಂದ ಭಾರತದ ಅವಮಾನ ಆಗಿದೆ ಮತ್ತು ಎಲ್ಲಾ ದೇಶಭಕ್ತ ಭಾರತೀಯರ ಭಾವನೆಗಳನ್ನು ಘಾಸಿಗೊಳಿಸಿದೆ. ಆದ್ದರಿಂದ, ಈ ನಕ್ಷೆಯನ್ನು ಕೂಡಲೇ ತೆಗೆದುಹಾಕಿ ಸೂಕ್ತ ನಕ್ಷೆಯನ್ನು ಪ್ರಕಟಿಸಲು ಭಾರತ ಸರಕಾರವು ಫ್ರೀಡಂ ಹೌಸ್‍ಗೆ ಪತ್ರ ಬರೆಯಬೇಕು. ಸಂಸ್ಥೆಯು ಭಾರತ ಸರಕಾರಕ್ಕೆ ಸಾರ್ವಜನಿಕ ಕ್ಷಮೆಯಾಚಿಸಬೇಕು. ಹಾಗೆ ಮಾಡದಿದ್ದರೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
೩. ‘ಫ್ರೀಡಂ ಹೌಸ್’ನ ವಿರುದ್ಧ ಪ್ರತಿಭಟಿಸಲು ಮತ್ತು ಭಾರತದ ನಕ್ಷೆಯನ್ನು ವಿರೂಪಗೊಳಿಸುವುದನ್ನು ತಡೆಯಲು ‘ಆನ್‍ಲೈನ್ ಅಭಿಯಾನ’ ಪ್ರಾರಂಭಿಸುವುದಾಗಿ ಹಿಂದೂ ಜನಜಾಗೃತಿ ಸಮಿತಿ ಘೋಷಿಸಿದೆ.
ಭಾರತದ ವಿರೂಪಗೊಳಿಸಿದ ನಕ್ಷೆಯಿರುವ ವೆಬ್‍ಸೈಟ್‍ನ ಲಿಂಕ್ :
https://freedomhouse.org/explore-the-map?type=fiw&year=2021&country=IND