ಘಟನೆಯ ಹೊಣೆ ಹೊತ್ತಿರುವ ಸಂದೇಶ ಬಂದ ‘ಜೈಶ್-ಉಲ್-ಹಿಂದ್’ ಹೆಸರಿನ ಟೆಲಿಗ್ರಾಮ್ ಖಾತೆಯ ಮೂಲ ತಿಹಾರ್ ಜೈಲು !

ಮುಕೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಹೊರಗೆ ಸ್ಫೋಟಕ ಪತ್ತೆಯಾದ ಪ್ರಕರಣ

ಈ ಪ್ರಕರಣವು ಹೆಚ್ಚು ಹೆಚ್ಚು ಸೂಕ್ಷ್ಮವಾಗುತ್ತಿರುವುದರಿಂದ, ತಿಹಾರ್ ಜೈಲಿನಿಂದ ಈ ಸಂದೇಶವನ್ನು ಯಾರು ಕಳುಹಿಸಿದ್ದಾರೆ ಅಥವಾ ಬೇರೆ ಯಾರಾದರೂ ಕಳುಹಿಸಿದ್ದಾರೆ ಹಾಗೂ ಏಕೆ ಕಳಿಸಿದ್ದಾರೆ ಎಂದು ಬೆಳಕಿಗೆ ಬರುವುದು ಆವಶ್ಯಕ !

ನವ ದೆಹಲಿ : ಉದ್ಯಮಿ ಮುಕೇಶ್ ಅಂಬಾನಿಯ ಮುಂಬೈಯ ಪ್ರಸಿದ್ಧ ಆಂಟಿಲಿಯಾ ನಿವಾಸದ ಹೊರಗೆ ಜೆಲೆಟಿನ್ ಕೋಲುಗಳನ್ನು ಹೊಂದಿರುವ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಇದರ ಹಿಂದ ತನ್ನ ಕೈವಾಡವಿರುವ ಬಗ್ಗೆ ಜೈಶ್-ಉಲ್-ಹಿಂದ್ ಫೆಬ್ರವರಿ ೨೬ ರಂದು ಟೆಲಿಗ್ರಾಮ್ ಮೂಲಕ ತಿಳಿಸಿತ್ತು, ನಂತರ ಅದೇ ಸಂಘಟನೆ ಅದು ಸುಳ್ಳು ಎಂದು ಸ್ಪಷ್ಟಪಡಿಸಿತು. ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ನಡೆಸಿದ ತನಿಖೆಯಲ್ಲಿ ತಿಹಾರ್ ಜೈಲಿನಿಂದ ಟೆಲಿಗ್ರಾಮ್ ನಿಂದು ಸುಳ್ಳು ಸಂದೇಶ ಬಂದಿರುವುದು ತಿಳಿದುಬಂದಿದೆ. ಇದರ ನಂತರ ದೆಹಲಿ ಪೊಲೀಸರಿಗೆ ಈ ವಿಚಾರವನ್ನು ಮಂಡಿಸಿದಾಗ ೩ ಸ್ಮಾರ್ಟ್‍ಫೋನ್‍ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಅದರಲ್ಲಿ ಒಂದು ಫೋನಿನಿಂದ ಈ ಸಂದೇಶವನ್ನು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಎನ್.ಐ.ಎ. ಹೆಚ್ಚಿನ ತನಿಖೆ ನಡೆಸುತ್ತಿದೆ.