ಚೀನಾದ ವಿಸ್ತರಣಾ ಮನೋಭಾವವನ್ನು ಭಾರತ, ಅಮೇರಿಕಾ ಮತ್ತು ಅದರ ನೆರೆಹೊರೆಯವರು ಪ್ರಶ್ನಿಸಿದ್ದಾರೆ ಆದ್ದರಿಂದ ಚೀನಾದ ರಾಷ್ಟ್ರಪತಿ ಕ್ಸಿ ಜಿನ್‍ಪಿಂಗ್ ಅಂತಹ ಕರೆಯನ್ನು ನೀಡಬೇಕಾಗಿ ಬಂದಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ಕ್ಸಿ ಜಿನ್‍ಪಿಂಗ್‍ರ ಕರೆಯಿಂದಾಗಿ ಮುಂದಿನ ೧-೨ ವರ್ಷಗಳಲ್ಲಿ ವಿಶ್ವವು ಮೂರನೆಯ ಮಹಾಯುದ್ಧವನ್ನು ಎದುರಿಸಬೇಕಾದಲ್ಲಿ ಆಶ್ಚರ್ಯವೇನಿಲ್ಲ ! ಇದನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ಭಾರತೀಯ ಸೇನೆ ಮತ್ತು ಜನರು ಶಸ್ತ್ರಸಜ್ಜಿತರಾಗಬೇಕಾಗುವುದು ಅಗತ್ಯವಿದೆ, ಎಂದು ಗಮನದಲ್ಲಿಟ್ಟುಕೊಳ್ಳಬೇಕು ! |
ಬೀಜಿಂಗ್ (ಚೀನಾ) – ‘ನಮ್ಮ ದೇಶದ ಪ್ರಸ್ತುತ ಭದ್ರತಾ ಪರಿಸ್ಥಿತಿ ಅಸ್ಥಿರ ಹಾಗೂ ಅನಿಶ್ಚಿತವಾಗಿದೆ. ಇಂತಹ ಸಮಯದಲ್ಲಿ, ಯುದ್ಧದ ಸಿದ್ಧತೆಯನ್ನು ಹೆಚ್ಚಿಸಲು ಮತ್ತು ಸೈನ್ಯದ ಸಾಮಥ್ರ್ಯ ಹೆಚ್ಚಿಸಲು ಸಮನ್ವಯ ಮಾಡಬೇಕಿದೆ. ಅದೇರೀತಿ ಯಾವುದೇ ಸಮಯದಲ್ಲಿ ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿರಬೇಕು’ ಎಂದು ಚೀನಾದ ರಾಷ್ಟ್ರಪತಿ ಕ್ಸಿ ಜಿನ್‍ಪಿಂಗ್ ಚೀನಾ ಸೈನ್ಯಕ್ಕೆ ಕರೆ ನೀಡಿದ್ದಾರೆ. ಅವರು ಸೇನಾ ಪ್ರತಿನಿಧಿಗಳೊಂದಿಗೆ ನಡೆದ ಚರ್ಚೆಯಲ್ಲಿ ಮಾತನಾಡುತ್ತಿದ್ದರು. ‘ದೇಶದ ಸಾರ್ವಭೌಮತ್ವ, ರಕ್ಷಣೆ ಮತ್ತು ಅಭಿವೃದ್ಧಿಯನ್ನು ಕಾಪಾಡಬೇಕು ಮತ್ತು ಸೈನ್ಯವು ಒಂದು ಆಧುನಿಕ ಸಮಾಜವಾದಿ ರಾಜ್ಯವನ್ನು ನಿರ್ಮಿಸಿ ಬಣಪಡಿಸಲು ಸಹಾಯ ಮಾಡಬೇಕು’ ಎಂದು ಕೂಡ ಜಿನ್‍ಪಿಂಗ್ ಹೇಳಿದರು.