ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತೀ ಇವರಿಂದ ಕೇಂದ್ರ ಹಾಗೂ ಉತ್ತರಾಖಂಡ ಸರಕಾರಕ್ಕೆ ಎಚ್ಚರಿಕೆ !
ಹಿಂದೂಗಳ ಅತ್ಯುನ್ನತ ಧರ್ಮಗುರುಗಳಿಗೆ ಇಂತಹ ಬೇಡಿಕೆಯನ್ನು ಮಾಡಬೇಕಾಗಿ ಬರುವುದು ನಾಚಿಕೆಗೇಡು ! ಬಿಜೆಪಿ ರಾಜ್ಯದಲ್ಲಿ ಇಂತಹ ಬೇಡಿಕೆ ಇಡುವ ಸಮಯ ಬರುವುದು ಇದು ಹಿಂದೂಗಳಿಗೆ ಅಪೇಕ್ಷಿತವಲ್ಲ !
ಪುರಿ (ಒಡಿಶಾ) – ಹರಿದ್ವಾರದಲ್ಲಿ ಕುಂಭಮೇಳವು ನಡೆಯುತ್ತಿದೆ ಆದರೆ ನಾವು ಶಂಕರಾಚಾರ್ಯರು ಸರಕಾರಿ ಮಟ್ಟದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ ಎಂಬುದನ್ನು ಪ್ರಧಾನಿ ಮತ್ತು ಗೃಹ ಸಚಿವರು ಗಮನಿಸಬೇಕು; ನಮಗೆ ಸರಿಯಾದ ಜಾಗವನ್ನು ಸರಿಯಾದ ಸ್ಥಳದಲ್ಲಿ ನೀಡುವ ಯಾವುದೇ ಚಟುವಟಿಕೆ ಕಂಡು ಬರುತ್ತಿಲ್ಲಿ. ನಿಮ್ಮ ಆಳ್ವಿಕೆಯಲ್ಲಿ ಅಂತಹ ರಾಜಪ್ರಭುತ್ವ ಏಕೆ? ಅಥವಾ ನೀವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ನೇತೃತ್ವವನ್ನು ವಹಿಸಲು ಬಯಸುವಿರಾ ?’ ಎಂದು ಪುರಿ ಪೀಠದ ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತೀ ಅವರು ವಿಡಿಯೋ ಮೂಲಕ ಪ್ರಶ್ನೆಯನ್ನು ಎತ್ತಿದ್ದಾರೆ. ‘ನಮ್ಮ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮುಂದಿನ ಐದು ದಿನಗಳಲ್ಲಿ ಸರಿಯಾದ ಸ್ಥಳದಲ್ಲಿ ಜಾಗವನ್ನು ಒದಗಿಸಲು ವ್ಯವಸ್ಥೆ ಮಾಡಬೇಕು’ ಎಂದು ಅವರು ಎಚ್ಚರಿಸಿದ್ದಾರೆ.
(ಸೌಜನ್ಯ : Govardhan Math, Puri)
ನ್ಯಾಯ ಒದಗಿಸದಿದ್ದರೆ, ‘ನೀವೂ ರಾಜ್ಯವಾಳಲು ಯೋಗ್ಯರಲ್ಲ’ ಎಂದು ಘೋಷಿಸುತ್ತೇವೆ !
ಶಂಕರಾಚಾರ್ಯರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ನಮಗೆ ಸರಿಯಾದ ನ್ಯಾಯ ಸಿಗಬೇಕು, ಇಲ್ಲದಿದ್ದರೆ ‘ನೀವೂ ರಾಜ್ಯವಾಳಲು ಅರ್ಹರಲ್ಲ’ ಎಂದು ಘೋಷಿಸುತ್ತೇವೆ. ನಮಗೆ ನಿಮ್ಮ ಬಗ್ಗೆ ಕಾಳಜಿ ಇದೆ; ಆದರೆ ಅಂತಹ ನಿರ್ಲಕ್ಷ್ಯವನ್ನು ನಿರೀಕ್ಷಿಸುವುದಿಲ್ಲ. ನಮಗೆ ಸರಿಯಾದ ಜಾಗ ಮತ್ತು ಸ್ಥಳಾವಕಾಶ ನೀಡಿಲ್ಲ. ನಮ್ಮನ್ನು ಏಕೆ ನಿರ್ಲಕ್ಷಿಸಲಾಗುತ್ತಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿಯವರು ಪದಾಧಿಕಾರಿಗಳನ್ನು ಕೇಳಬೇಕು. ಶಂಕರಾಚಾರ್ಯರನ್ನು ನಿರ್ಲಕ್ಷಿಸುವುದು ಎಂದರೆ ನಮಗೆ ವಿಚಾರ ಮಾಡಲು ಒತ್ತಾಯಿಸಲಾಗುತ್ತಿದೆ’ ಎಂದು ಹೇಳಿದರು.