೨ ಕಾರ್ಯಕರ್ತರ ಮತ್ತು ೧ ಮಹಿಳಾ ಪದಾಧಿಕಾರಿಯ ಬಂಧನ
ತಾಜ್‍ಮಹಲ್ ಹಿಂದೂಗಳ ವಾಸ್ತುವಾಗಿದ್ದು ಅಲ್ಲಿ ಶಿವಾಲಯವಿತ್ತು, ಈ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಈ ಭಾವದಿಂದ ಹಿಂದೂಗಳು ಅಲ್ಲಿಗೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಈ ವಾಸ್ತುವನ್ನು ಹಿಂದೂಗಳಿಗೆ ಹಿಂತಿರುಗಿಸಲು ಪದೇ ಪದೇ ಒತ್ತಾಯಿಸಿದರೂ ಈ ವಾಸ್ತು ಸಿಗದೇ ಇದ್ದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ, ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಹಿಂದೂಗಳನ್ನು ಬಂಧಿಸುವುದು ಅಪೇಕ್ಷಿತವಿಲ್ಲ !
ಆಗ್ರಾ (ಉತ್ತರ ಪ್ರದೇಶ) – ತಾಜ್ ಮಹಲ್ ಶಿವನ ಪ್ರಾಚೀನ ದೇವಾಲಯವಾಗಿದೆ ಎಂದು ಹಿಂದೂಗಳಲ್ಲಿ ಶ್ರದ್ಧೆ ಇದೆ. ಖ್ಯಾತ ಇತಿಹಾಸ ಸಂಶೋಧಕ ಪಿ.ಎನ್. ಓಕ್ ಇವರೂ ಕೂಡ ತಾಜ್ ಮಹಲ್ ‘ತೇಜೋಮಹಾಲಯ’ ಎಂಬ ಶಿವನ ದೇವಾಲಯವಾಗಿರುವ ಬಗ್ಗೆ ಪುರಾವೆಗಳೊಂದಿಗೆ ಪುಸ್ತಕವನ್ನೂ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾಶಿವರಾತ್ರಿಯ ದಿನದಂದು ಹಿಂದೂ ಮಹಾಸಭಾದ ಇಬ್ಬರು ಕಾರ್ಯಕರ್ತರು ಮತ್ತು ಒಬ್ಬ ಮಹಿಳಾ ಪದಾಧಿಕಾರಿಯು ತಾಜ್‍ಮಹಲ್‍ಗೆ ಹೋಗಿ ಶಿವನ ಪೂಜೆಯನ್ನು ಮಾಡಿದರು. ಪೊಲೀಸರು ಮೂವರ ಬಂಧಿಸಿದ್ದಾರೆ.
೧. ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷೆ ಮೀನಾ ದಿವಾಕರ್ ಅವರು ಸೆಂಟ್ರಲ್ ಟ್ಯಾಂಕ್‍ನ ಡಯಾನಾ ಬೆಂಚ್‍ಗೆ ಹೋಗಿ ವಿಧಿವತ್ತಾಗಿ ಆರತಿ ಮಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಅವರನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯವರು ಬಂಧಿಸಿದರು. ಈ ಸಮಯದಲ್ಲಿ ಮೀನಾ ದಿವಾಕರ್ ಅವರೊಂದಿಗೆ ಇಬ್ಬರು ಕಾರ್ಯಕರ್ತರು ಉಪಸ್ಥಿತರಿದ್ದರು. ಅವರನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಯಿತು. ದೆಹಲಿ ಪೊಲೀಸರು ಮೂವರ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹಿಂದೂ ಮಹಾಸಭಾ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಮತ್ತು ಜಿಲ್ಲಾಧ್ಯಕ್ಷ ರೌನಾಕ್ ಠಾಕೂರ್ ಕೆಲವು ಕಾರ್ಯಕರ್ತರೊಂದಿಗೆ ದೆಹಲಿಯ ತಾಜ್‍ಗಂಜ್ ಪೊಲೀಸ್ ಠಾಣೆಗೆ ತೆರಳಿದರು.
೨. ತಾಜಮಹಲ್‍ನಲ್ಲಿ ಷಹಜಹಾನ್‍ನ ೩ ದಿನಗಳ ಉರುಸ್ ನಡೆಯುತ್ತಿದೆ. ನಿಯಮಗಳ ಪ್ರಕಾರ ತಾಜ್‍ಮಹಲ್‍ನಲ್ಲಿ ಸಾಂಪ್ರದಾಯಿಕ ನಮಾಜ ಪಠಣ ಮಾಡಲಾಗುತ್ತಿದೆ. ಉರುಸ್ ಬಿಟ್ಟು ಬೇರೆ ಯಾವುದೇ ಧಾರ್ಮಿಕ ವಿಧಿಗಳನ್ನು ಮಾಡುವುದು ನಿಷೇಧಿಸಲಾಗಿದೆ. (ಶಿವನ ಪೂಜೆ ಮಾಡಲು ಹಿಂದೂಗಳಿಗೆ ಅವಕಾಶವಿಲ್ಲದಿದ್ದರೆ, ಮುಸ್ಲಿಮರಿಗೆ ಇಂತಹ ಉರುಸ್ ಮಾಡಲು ಏಕೆ ಅವಕಾಶವಿದೆ ? ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವಾಗ ಅಂತಹ ಅನುಮತಿಯನ್ನು ನೀಡಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)