ಕೇರಳದ ಸಿಪಿಐ(ಎಂ) ಸರಕಾರದ ಸಚಿವ ಸುರೇಂದ್ರನ್ ಅವರಿಂದ ವಿಷಾದ ವ್ಯಕ್ತಪಡಿಸುವ ನಾಟಕ !
ಕೇರಳದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಈಗ ಸಿಪಿಐ (ಎಂ) ಹಿಂದೂಗಳ ಮತಗಳನ್ನು ಪಡೆಯುವ ಸಲುವಾಗಿ ನಾಟಕವಾಡುತ್ತಿದೆ, ಇಷ್ಟು ತಿಳಿಯದಿರುವಷ್ಟು ಹಿಂದೂಗಳು ದಡ್ಡರಲ್ಲ ! ಸಿಪಿಐ(ಎಂ)ಗೆ ನಿಜವಾಗಿಯೂ ದುಃಖವೆನಿಸುತ್ತಿದ್ದರೆ, ಸರಕಾರ ಅಧಿಕೃತವಾಗಿ ಈ ನಿಲುವನ್ನು ಸ್ವೀಕರಿಸಬೇಕು ಮತ್ತು ೧೦ ರಿಂದ ೫೦ ವರ್ಷದೊಳಗಿನ ಮಹಿಳೆಯರ ಪ್ರವೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಬೇಕು !
ತಿರುವನಂತಪುರಮ್ (ಕೇರಳ) – ‘ಶಬರಿಮಲಾ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ೨೦೧೮ ರಲ್ಲಿ ನಡೆದ ಘಟನೆ ಒಂದು ಮುಚ್ಚಿದ ಅಧ್ಯಾಯವಾಗಿದೆ. ಹೀಗಾಗಬಾರದಿತ್ತು’ ಎಂಬ ಮಾತುಗಳಿಂದ ರಾಜ್ಯದ ಸಿಪಿಐ(ಎಂ) ಮುಖಂಡ ಮತ್ತು ಸರಕಾರದ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ೨೦೧೮ ರಲ್ಲಿ ೧೦ ರಿಂದ ೫೦ ವರ್ಷದೊಳಗಿನ ಮಹಿಳೆಯರಿಗೆ ಸ್ವಾಮಿ ಅಯ್ಯಪ್ಪನ ದೇವಸ್ಥಾನವನ್ನು ಪ್ರವೇಶಿಸಲು ಅವಕಾಶ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. ಈ ನಿರ್ಣಯವನ್ನು ಭಕ್ತರು ತೀವ್ರವಾಗಿ ವಿರೋಧಿಸಿದ್ದರು.
ಸರ್ವೋಚ್ಚ ನ್ಯಾಯಾಲಯದಲ್ಲಿ ಈ ತೀರ್ಪಿನ ವಿರುದ್ಧ ಮೇಲ್ಮನವಿ ಕುರಿತು ಮರು ವಿಚಾರಣೆ ನಡೆಸಲಾಗುವುದು. ಈ ಬಗ್ಗೆ ಸುರೇಂದ್ರನ್ ಅವರು, ಸರ್ವೋಚ್ಚ ನ್ಯಾಯಾಲಯದಿಂದ ಯಾವುದೇ ತೀರ್ಪು ಬರಲಿ, ಜನರೊಂದಿಗೆ ಚರ್ಚಿಸಿದ ನಂತರವೇ ನಮ್ಮ ಸರಕಾರ ಕ್ರಮ ಕೈಗೊಳ್ಳುವ ವಿಚಾರ ಮಾಡುವುದು ಎಂದು ಹೇಳಿದರು.