‘ಐಐಟಿ ಇಂದೂರ್’ನಲ್ಲಿ ಪ್ರಾಚೀನ ಭಾರತೀಯ ವಿಜ್ಞಾನವನ್ನು ಸಂಸ್ಕೃತ ಭಾಷೆಯಲ್ಲಿ ಕಲಿಸಲಾಗುತ್ತಿದೆ !

  • ಜಗತ್ತಿನ ೭೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಹಭಾಗ
  • ೧೫ ದಿನಗಳ ವಿಶೇಷ ಆನ್‌ಲೈನ್ ‘ಕೋರ್ಸ್’ನ ಆಯೋಜನೆ

ಕಾಂಗ್ರೆಸ್‌ನವರು ಸಂಸ್ಕೃತ ಭಾಷೆಯನ್ನು ‘ಮೃತ ಭಾಷೆ’ ಎಂದು ತೀರ್ಮಾನಿಸಿದ್ದರಿಂದ ಇಂದಿಗೂ ಭಾರತೀಯರು ಪ್ರಾಚೀನ ವಿಜ್ಞಾನದಿಂದ ವಂಚಿತರಾಗಿದ್ದಾರೆ. ಜಗತ್ತಿನಲ್ಲಿ ಎಲ್ಲಕ್ಕಿಂತ ಪ್ರಾಚೀನವಾಗಿರುವ ಸಂಸ್ಕೃತ ಭಾಷೆಯ ತನ್ನ ಸ್ವಂತ ನೆಲದಲ್ಲಿ, ಅಂದರೆ ಭಾರತದಲ್ಲಿ ಅನೇಕ ದಶಕಗಳಿಂದ ಕಡೆಗಣೆಯಾಗುತ್ತಿದೆ, ಇದು ಸ್ವಾತಂತ್ರ್ಯನಂತರದ ಮತ್ತು ಇಲ್ಲಿಯವರೆಗಿನ ಆಡಳಿತಗಾರರಿಗೆ ಲಜ್ಜಾಸ್ಪದವಾಗಿದೆ ! ಈಗಿರುವ ಕೇಂದ್ರ ಸರಕಾರವು ಸಂಸ್ಕೃತ ಭಾಷೆಗೆ ಅದರ ಪುನರ್‌ವೈಭವವನ್ನು ಪ್ರಾಪ್ತ ಮಾಡಿಕೊಡಲು ಕ್ರಮಗಳನ್ನು ಕೈಗೊಳ್ಳಬೇಕು, ಎಂದು ಅಪೇಕ್ಷೆಯಾಗಿದೆ !

ಇಂದೂರ – ‘ಐಐಟಿ ಇಂದೂರ್’ನಲ್ಲಿ ಪ್ರಾಚೀನ ಭಾರತೀಯ ವಿಜ್ಞಾನವನ್ನು ಸಂಸ್ಕೃತ ಭಾಷೆಯಲ್ಲಿ ಕಲಿಸಲಾಗುತ್ತಿದೆ. ಇದಕ್ಕಾಗಿ ಜಗತ್ತಿನಾದ್ಯಂತ ೭೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಪ್ರಾಚೀನ ಗಣಿತತಜ್ಞ ಭಾಸ್ಕರಾಚಾರ್ಯ ಇವರ ‘ಲೀಲಾವತಿ’ ಈ ಗಣಿತ ವಿಷಯದ ಗ್ರಂಥದೊಂದಿಗೆ ಭಾರತದಲ್ಲಿನ ಇತರ ಪ್ರಾಚೀನ ವೈಜ್ಞಾನಿಕ ಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ಅರಿತುಕೊಂಡು ಅದರ ಮೂಲ ರೂಪದಲ್ಲಿ ತಿಳಿದುಕೊಳ್ಳಲು ‘ಐಐಟಿ ಇಂದೂರ್’ ಇದು ೧೫ ದಿನಗಳ ವಿಶೇಷ ಆನ್‌ಲೈನ್ ‘ಕೋರ್ಸ್’ ಆರಂಭಿಸಿದೆ. ಇದರಲ್ಲಿ ‘ಐಐಟಿ ಮುಂಬಯಿ’ ಹಾಗೂ ‘ಐಐಟಿ ಇಂದೂರ್’ನ ನುರಿತ ಪ್ರಾಧ್ಯಾಪಕರು ಸಂಸ್ಕೃತದಲ್ಲಿ ಜ್ಞಾನವನ್ನು ನೀಡುತ್ತಿದ್ದಾರೆ. ‘ಐಐಟಿ ಇಂದೂರ್’ನ ಈ ‘ಕೋರ್ಸ್’ನ ಪಠ್ಯಕ್ರಮದಲ್ಲಿ ಧಾತು ವಿಜ್ಞಾನ, ಖಗೋಳ ಶಾಸ್ತ್ರ, ಔಷಧಿ, ಸಸ್ಯ ಇತ್ಯಾದಿಗಳು ಸಮಾವೇಶಗೊಂಡಿದ್ದು ಎಲ್ಲ ಜ್ಞಾನವನ್ನು ಸಂಸ್ಕೃತದಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಈ ವಿಷಯಗಳ ಗ್ರಂಥಗಳನ್ನು ಶಾಸ್ತ್ರೀಯ ವೈಜ್ಞಾನಿಕ ಭಾಷೆಯಲ್ಲಿ ಅಧ್ಯಯನ ಮಾಡಬಹುದು ಮತ್ತು ಅವುಗಳನ್ನು ಪ್ರಾಚೀನ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳಬಹುದು.

ಭವಿಷ್ಯದಲ್ಲಿ ಸಂಸ್ಕೃತ ಭಾಷೆಯೊಂದೇ ಇರಲಿದೆ ! – ಪ್ರಾ. ನಿಲೇಶ ಕುಮಾರ ಜೈನ್

‘ಐಐಟಿ ಇಂದೂರ್’ನ ಕಾರ್ಯದರ್ಶಿ ನಿರ್ದೇಶಕ ಪ್ರಾ. ನಿಲೇಶ ಕುಮಾರ ಜೈನ್ ಇವರು ಈ ಉಪಕ್ರಮವನ್ನು ಉದ್ಘಾಟಿಸಿದರು. ಅವರು, “ಸಂಸ್ಕೃತವು ಒಂದು ಪ್ರಾಚೀನ ಭಾಷೆಯಾಗಿದ್ದು, ಪ್ರಸ್ತುತ ಕೃತಕ ಬುದ್ಧಿಶಕ್ತಿಯಲ್ಲಿ ತನ್ನ ಸ್ಥಾನವನ್ನು ಹುಡುಕುತ್ತಿದೆ. ಭವಿಷ್ಯದಲ್ಲಿ ಇದೊಂದೇ ಭಾಷೆಯು ಇರಲಿದೆ. ಈ ಉಪಕ್ರಮದ ಮಾಧ್ಯಮದಿಂದ ಜನರನ್ನು ಸಂಸ್ಕೃತದೊಂದಿಗೆ ಜೋಡಿಸುವಾಗ ನಮಗೆ ತುಂಬಾ ಆನಂದವಾಗುತ್ತಿದೆ. ನಾವು ಇಷ್ಟವಾಗುತ್ತದೆ ಎಂದು ಈ ಉಪಕ್ರಮವನ್ನು ಆರಂಭಿಸದೇ, ಇಂತಹ ಉಪಕ್ರಮವನ್ನು ಹಮ್ಮಿಕೊಳ್ಳುವುದು, ಸದ್ಯದ ಕಾಲದ ಅವಶ್ಯಕತೆಯಾಗಿದೆ’ ಎಂದು ಹೇಳಿದರು.

ಸಂಸ್ಕೃತದ ರಕ್ಷಣೆ ಹಾಗೂ ಪ್ರಸಾರ ಮಾಡುವುದು ಅತ್ಯಾವಶ್ಯಕವಾಗಿದೆ ! – ಪ್ರಾ. ಗಂತಿ ಎಸ್. ಮೂರ್ತಿ

ಈ ಉಪಕ್ರಮದ ಸಮನ್ವಯಕರಾದ ಪ್ರಾ. ಗಂತಿ ಎಸ್. ಮೂರ್ತಿಯವರು, ‘ಕೃಷಿ, ಗಣಿತ, ಧಾತು, ಖಗೋಳ, ಚಿಕಿತ್ಸೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳ ಬರವಣಿಗೆಗಳು ಸಂಸ್ಕೃತದಲ್ಲಿವೆ. ಆದ್ದರಿಂದ ಈ ಗ್ರಂಥಗಳ ಅಧ್ಯಯನ ಮಾಡಲು ಮೊದಲು ಸಂಸ್ಕೃತ ಭಾಷೆ ಬರುವುದು ಅನಿವಾರ್ಯವಾಗಿದೆ. ಸಂಸ್ಕೃತ ಭಾಷೆಯ ಸಮೃದ್ಧ ಪರಂಪರೆಯನ್ನು ಸಂರಕ್ಷಿಸುವುದು ಹಾಗೂ ಅದರ ಪ್ರಸಾರ ಮಾಡುವುದು ಅತ್ಯಾವಶ್ಯಕವಾಗಿದೆ” ಎಂದು ಹೇಳಿದರು.