ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಇವರ ಭದ್ರತೆಯಲ್ಲಿ ಹೆಚ್ಚಳ

ಭಯೋತ್ಪಾದನಾ ಹಲ್ಲೆಯ ಸಾಧ್ಯತೆ

‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ’ ಆದ್ದರಿಂದ ಅವರು ಹಿಂದೂಗಳನ್ನು ಹಾಗೂ ಅವರ ನಾಯಕರನ್ನು ಗುರಿಪಡಿಸುತ್ತಾರೆ ! ಭಾರತದಲ್ಲಿ ಎಂದಿಗೂ ಇತರ ಧರ್ಮೀಯ ನಾಯಕರ ಮೇಲೆ ಭಯೋತ್ಪಾದನೆಯ ಸಂಕಟ ಬರುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಭಾಗ್ಯನಗರ(ತೆಲಂಗಾಣ) – ಇಲ್ಲಿಯ ಗೋಶಾ ಮಹಲ ಚುನಾವಣಾಕ್ಷೇತ್ರದಲ್ಲಿಯ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಹ ಇವರ ಮೇಲೆ ಭಯೋತ್ಪಾದನೆ ದಾಳಿಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಭಾಗ್ಯನಗರ ಪೊಲೀಸ್ ಆಯುಕ್ತರಾದ ಅಂಜನಿಕುಮಾರ ಇವರು ಇದರ ಬಗ್ಗೆ ಟಿ. ರಾಜಾ ಸಿಂಹ ಇವರಿಗೆ ಪತ್ರವನ್ನು ಕಳುಹಿಸಿದ್ದಾರೆ. ಅದರಲ್ಲಿ, ನೀವು ಕೆಲವೊಮ್ಮೆ ಸಂಚಾರಕ್ಕಾ ದ್ವಿಚಕ್ರ ವಾಹನವನ್ನು ಉಪಯೋಗಿಸುತ್ತೀರಿ; ಆದರೆ ಸುರಕ್ಷೆಗಾಗಿ ನೀವು ದ್ವಿಚಕ್ರವನ್ನು ಓಡಿಸಬೇಡಿ, ಅದೇರೀತಿ ಭದ್ರತೆ ಇಲ್ಲದೇ ಎಲ್ಲಿಯೂ ಹೋಗದಿರಿ. ನೀವು ದ್ವಿಚಕ್ರ ನಡೆಸುವ ಬದಲು ನಿಮಗೆ ಸರಕಾರದಿಂದ ನೀಡಿದ ‘ಬುಲೆಟ್ ಪ್ರೂಫ್’ ಚತುಷ್ಚಕ್ರ ವಾಹನವನ್ನು ಉಪಯೋಗಿಸಿರಿ. ಸರಕಾರವು ನಿಮ್ಮ ಭದ್ರತೆಗಾಗಿಯೇ ಈ ವಾಹನವನ್ನು ನೀಡಿದೆ. ನಿಮಗೆ ನೀಡಿರುವ ರಕ್ಷಕರು ವಿಶೇಷವಾಗಿ ತರಬೇತಿಯನ್ನು ಪಡೆದಿದ್ದಾರೆ, ಅದೇರೀತಿ ನಿಮ್ಮ ಸುರಕ್ಷೆಯ ಬಗ್ಗೆ ಸತತವಾಗಿ ಸಮೀಕ್ಷೆಯನ್ನೂ ಮಾಡಲಾಗುವುದು’, ಎಂದಿದೆ.

ಶ್ರೀರಾಮಮಂದಿರದ ಶಿಲಾನ್ಯಾಸದಿಂದಾಗಿ ಹಿಂದುತ್ವನಿಷ್ಠರಿಗೆ ಗುರಿ ಮಾಡುವ ಪಾಕಿಸ್ತಾನದ ಸಂಚು

ಮೂಲಗಳ ಪ್ರಕಾರ, ಶ್ರೀರಾಮಮಂದಿರದ ಶಿಲಾನ್ಯಾಸದ ಸೇಡನ್ನು ತೀರಿಸಿಕೊಳ್ಳಲು ಪಾಕಿಸ್ತಾನದ ಗುಪ್ತಚರ ಸಂಘಟನೆ ಐ.ಎಸ್.ಐ.ಯು ಭಾರತದಲ್ಲಿಯ ಹಿಂದುತ್ವನಿಷ್ಠ ನಾಯಕರು, ಅದೇರೀತಿ ಭಾಜಪ ಹಾಗೂ ರಾ.ಸ್ವ. ಸಂಘದ ನಾಯಕರನ್ನು ಗುರಿಯಾಗಿಸುವ ಸಂಚನ್ನು ರೂಪಿಸಿದೆ. ಕಳೆದ ಕೆಲವು ದಿನಗಳಲ್ಲಿ ಪೊಲೀಸರು ಕೆಲವು ಭಯೋತ್ಪಾದಕರನ್ನು ಬಂಧಿಸಿದ ನಂತರ ಈ ಮಾಹಿತಿಯು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಟಿ. ರಾಜಾ ಸಿಂಹ ಇವರನ್ನು ಗುರಿಯಾಗಿಸುವ ಸಾಧ್ಯತೆ ಇದೆ. ಆದ್ದರಿಂದ ಪೊಲೀಸರು ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಯಾವ ಭಯೋತ್ಪಾದಕ ಸಂಘಟನೆಯಿಂದ ಅಪಾಯವಿದೆ ಹೇಳಬೇಕು ! – ಟಿ. ರಾಜಾ ಸಿಂಹ

ಈ ಪತ್ರದ ಬಗ್ಗೆ ಹಾಗೂ ಸಂಭಾವ್ಯ ಹಲ್ಲೆಯ ಬಗ್ಗೆ ಟಿ. ರಾಜಾ ಸಿಂಹ ಇವರು ಮಾತನಾಡುತ್ತಾ, ಭಾಗ್ಯನಗರದ ಪೊಲೀಸ್ ಆಯುಕ್ತರು ‘ನನ್ನ ಜೀವಕ್ಕೆ ಅಪಾಯವಿದ್ದರಿಂದ ನಾನು ದ್ವಿಚಕ್ರ ವಾಹನದಿಂದ ಹೋಗಬೇಡಿ’, ಎಂದು ಹೇಳಿದ್ದಾರೆ. ನಾನು ಪೊಲೀಸ್ ಆಯುಕ್ತರಲ್ಲಿ, ನನಗೇನು ಅಪಾಯವಿದೆ ? ಯಾವ ಭಯೋತ್ಪಾದಕ ಸಂಘಟನೆ, ಸ್ಥಳೀಯ ಸಂಸ್ಥೆ ಅಥವಾ ಯಾರಾದರೂ ವ್ಯಕ್ತಿಯು ನನ್ನ ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ ?, ಅದನ್ನು ಹೇಳಬೇಕು ಎಂದು ಕೇಳಿದ್ದೇನೆ. ಕೇಂದ್ರೀಯ ಗೃಹ ಸಚಿವ ಅಮಿತ ಶಾಹ, ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಗೃಹ ಸಚಿವ ಮಹಮ್ಮದ ಮಹಮೂದ್ ಅಲೀ ಹಾಗೂ ಪೊಲೀಸ ಆಯುಕ್ತ ಅಂಜನಿ ಕುಮಾರ ಇವರಲ್ಲಿ ‘ನನ್ನ ಮೇಲೆ ಇರುವ ಅಪಾಯ ಯಾವ ಸ್ವರೂಪದ್ದಾಗಿದೆ ?’ ಎಂಬ ಬಗ್ಗೆ ಕೇಳುವೆನು’ ಎಂದು ಹೇಳಿದರು.