ಕನ್ನಡ ಹಾಗೂ ಹಿಂದಿ ಸನಾತನ ಪಂಚಾಂಗ ಆಪ್ ಪ್ರತಿಯೊಂದು ೧೦ ಲಕ್ಷಕ್ಕೂ ಹೆಚ್ಚು ಜನರಿಂದ ‘ಡೌನ್‌ಲೋಡ್’ !

ಸನಾತನದ ವಿವಿಧ ಭಾಷೆಯ ಪಂಚಾಂಗ ‘ಆಪ್ಸ್’ಗೆ ಅಭೂತಪೂರ್ವ ಪ್ರತಿಕ್ರಿಯೆ

‘ಸನಾತನ ಸಂಸ್ಥೆಯ ವತಿಯಿಂದ ಪ್ರತೀವರ್ಷ ವಾರ್ಷಿಕ ‘ಸನಾತನ ಪಂಚಾಂಗ’ (ದಿನದರ್ಶಿಕೆ) ಪ್ರಕಾಶಿಸಲಾಗುತ್ತದೆ. ಅಲ್ಪಾವಧಿಯಲ್ಲೇ ಈ ಪಂಚಾಗವು ಜನಪ್ರಿಯವಾಗಿದೆ. ಈ ಪಂಚಾಂಗ ಅಂದರೆ ಸಾಧನೆ ಹಾಗೂ ಧರ್ಮಶಿಕ್ಷಣ ವಿಷಯಗಳಿಂದ ಪರಿಪೂರ್ಣವಾಗಿದೆ. ‘ಪಂಚಾಂಗವಲ್ಲ, ಹಿಂದುತ್ವದ ಸರ್ವಾಂಗ !’ ಎಂದು ಇದರ ಘೋಷವಾಕ್ಯವಾಗಿದೆ. ‘ಸನಾತನ ಪಂಚಾಂಗ’ದ ಆಪ್ ಕನ್ನಡ, ಮರಾಠಿ, ಹಿಂದಿ, ಗುಜರಾತಿ, ತೆಲುಗು, ಆಂಗ್ಲ ಹಾಗೂ ತಮಿಳು ಭಾಷೆಗಳಲ್ಲಿ ‘ಅಂಡ್ರೈಡ್’ ಹಾಗೂ ‘ಐಒಎಸ್’ ಈ ‘ಆಪ್ ಪ್ಲಾಟಫಾರ್ಮ್ಸ್‌ಪ್ಲೇಸ್ಟೋರ್’ನಲ್ಲಿ ಲಭ್ಯವಿದೆ.

ವೈಶಿಷ್ಟ್ಯಪೂರ್ಣ ಅಂಶವೆಂದರೆ ಕನ್ನಡ ಹಾಗೂ ಹಿಂದಿ ಸನಾತನ ಪಂಚಾಂಗ ಆಪ್ ಪ್ರತಿಯೊಂದು ೧೦ ಲಕ್ಷಕ್ಕೂ ಹೆಚ್ಚು ಜನರು ‘ಡೌನ್‌ಲೋಡ್’ ಮಾಡಿದ್ದಾರೆ. ತೆಲುಗು ಹಾಗೂ ಮರಾಠಿ ಸನಾತನ ಪಂಚಾಂಗದ ಆಪ್ ೫ ಲಕ್ಷಕ್ಕಿಂತಲೂ ಹೆಚ್ಚು, ತಮಿಳಳು ಹಾಗೂ ಗುಜರಾತಿ ಸನಾತನ ಪಂಚಾಂಗದ ಆಪ್ ೧ ಲಕ್ಷಕ್ಕಿಂತಲೂ ಹೆಚ್ಚು ಜನರು ‘ಡೌನ್‌ಲೋಡ್ ಮಾಡಿದ್ದಾರೆ. ಆರಾಧ್ಯ ದೇವತೆಗಳ ಸಾತ್ತ್ವಿತ್ವಿಕ ಚಿತ್ರಗಳು, ಧರ್ಮಶಿಕ್ಷಣ ಹಾಗೂ ಸಾಧನೆಯ ಬಗ್ಗೆ ಮಾರ್ಗದರ್ಶನ, ಅದೇರೀತಿ ರಾಷ್ಟ್ರ ಹಾಗೂ ಧರ್ಮ ಇವುಗಳದ ರಕ್ಷಣೆಗಾಗಿ ಮಾರ್ಗದರ್ಶನ ಇದು ಸನಾತನದ ಪಂಚಾಂಗದ ವೈಶಿಷ್ಟ್ಯವಾಗಿದೆ. ಪಂಚಾಂಗದ ಆಪ್‌ಗೆ ಸಿಕ್ಕಿದ ಈ ಸಂದನೆಅಭಿಪ್ರಾಯ ಅದರ ಜನಪ್ರಿಯತೆಯ ರಶೀದಿಯಾಗಿದೆ.

ಸನಾತನ ಪಂಚಾಂಗ ಆಪ್ ಬಗ್ಗೆ ಬಳಕೆದಾರರಉಪಯೋಗಿಸುವವರ ವೈಶಿಷ್ಟ್ಯಪೂರ್ಣ ಅಭಿಪ್ರಾಯಗಳು

೧. ‘ನಮ್ಮ ಮೌಲ್ಯ ಹಾಗೂ ಸಂಸ್ಕಾರ ತಿಳಿದುಕೊಳ್ಳಲು ಇದು ಒಂದು ಒಳ್ಳೆಯದಾದ ಹಾಗೂ ಬಹುಮುಖ್ಯ ‘ಆಪ್ ಆಗಿದೆ.’ – ಶ್ರೀ. ಬಿ.ಬಿ.ಚಂದರ್ಗಿ

೨. ‘ಈ ಆಪ್ ಅತ್ಯಂತ ಸಹಾಯಕ ಹಾಗೂ ಉಪಯೋಗಿಸಲು ಸುಲಭವಾಗಿದೆ. ಸನಾತನ ಧರ್ಮದವರಿಗೆ ಇದೊಂದು ಒಳ್ಳೆಯ ವ್ಯವಸ್ಥೆಯಾಗಿದೆ.”’ – ಶ್ರೀ. ರವೀಂದ್ರನಾಥ ಪಳಹಲ್ಲಿ

೩. ‘ಈ ಆಪ್ ನಮಗಾಗಿ ಒಂದು ಮಾರ್ಗದರ್ಶಕದಂತೆ ಇದೆ.’ – ಶ್ರೀ. ಕೃಷ್ಣ ರಾಜ

೪. ‘ಉತ್ತಮ ಜೀವನವನ್ನು ಸಾಗಿಸಲು ಅನೇಕ ಅಂಶಗಳು ನನಗೆ ಈ ಆಪ್‌ನ ಮಾಧ್ಯಮದಿಂದ ಕಲಿಯಲು ಸಿಕ್ಕಿದೆ. ಈ ಆಪ್ ಉಚಿತವಾಗಿ ನೀಡಿದ್ದರಿಂದ ನಾನು ಆಭಾರಿಯಾಗಿದ್ದೇನೆ.’ – ಶ್ರೀ. ಮೇಘರಾಜ ಕಲಾಪನ್ನಾವರ

೫. ‘ನಮ್ಮ ಸಂಸ್ಕೃತಿಯ ಬಗ್ಗೆ ಈ ಆಪ್ ನ ಮಾಧ್ಯಮದಿಂದ ಒಳ್ಳೆಯ ಮಾಹಿತಿ ಸಿಕ್ಕಿದೆ. ಪ್ರತಿಯೊಬ್ಬರು ಇದರಲ್ಲಿರುವ ಮಾಹಿತಿಯನ್ನು ಓದಿ ಅದರಂತೆ ಆಚರಣೆಯನ್ನು ಮಾಡಬೇಕು.’ – ಶ್ರೀ. ಹಾಲಪ್ಪ ಶಿನಲೆ