ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಡಾ. ಉದಯ ಧುರಿಯವರಿಂದ ಮುಂಬಯಿ ಪೊಲೀಸ್ ಆಯುಕ್ತರಲ್ಲಿ ದೂರು !

ಗಣೇಶೋತ್ಸವ ಕಾಲದಲ್ಲಿ ಹಿಂದೂದ್ವೇಷಿ ಚಿತ್ರಕಾರ ಎಮ್.ಎಫ್. ಹುಸೇನ್ ಇವರು ಬಿಡಿಸಿದ ಶ್ರೀ ಗಣೇಶನ ವಿಕೃತ ಚಿತ್ರದ ಹರಾಜು; ಹಿಂದೂಗಳ ಧಾರ್ಮಿಕ ಭಾವನೆ ನೋಯಿಸಿದ ಪ್ರಕರಣದಲ್ಲಿ ಕ್ರಮಕೈಗೊಳ್ಳಲು ಆಗ್ರಹ !

ಡಾ. ಉದಯ ಧುರಿ

`AstaGuru’ ಈ ಸಂಸ್ಥೆಯು ಹಿಂದೂದ್ವೇಷಿ ಚಿತ್ರಕಾರ ಎಮ್.ಎಫ್. ಹುಸೇನ ಇವರು ವಿಕೃತವಾಗಿ ಬಿಡಿಸಿದ ಶ್ರೀ ಗಣೇಶ ಮತ್ತು ಭಗವಾನ ಶಿವನ ಚಿತ್ರಗಳನ್ನು ಗಣೇಶೋತ್ಸವದ ಕಾಲದಲ್ಲಿ ಆನ್‌ಲೈನ್‌ದಲ್ಲಿ ಮಾರಾಟಕ್ಕೆ ಇಟ್ಟಿತ್ತು. `AstaGuru’ ಈ ಹರಾಜು ಮಾಡುವ ಸಂಸ್ಥೆಯು 29 ಮತ್ತು 30 ಆಗಸ್ಟ್ 2020 ರಲ್ಲಿ ‘ಆನ್‌ಲೈನ್’ ಮೂಲಕ ಈ ಚಿತ್ರಗಳನ್ನು ಹರಾಜು ಮಾಡಲು ಆಯೋಜನೆ ಮಾಡಿತ್ತು. ಆದರೆ ಇದು ವರೆಗೂ ಈ ಚಿತ್ರಗಳ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ ವಕ್ತಾರಾದ ಡಾ. ಉದಯ ಧುರಿಯವರು `AstaGuru’ ಈ ಸಂಸ್ಥೆಯ ವಿರುದ್ಧ ಮುಂಬಯಿ ಪೊಲೀಸ್ ಆಯುಕ್ತರಲ್ಲಿ ದೂರನ್ನು ದಾಖಲಿಸಿ ಆಯೋಜಕರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅದೇ ರೀತಿ ಹರಾಜಿನ ಆಯೋಜಕರಿಗೆ ಸಮಿತಿಯ ವತಿಯಿಂದ ‘ಈ-ಮೇಲ್’ ಮೂಲಕ ಈ ಹರಾಜನ್ನು ತಕ್ಷಣವೇ ನಿಲ್ಲಿಸಬೇಕು’, ಎಂದೂ ಹೇಳಲಾಗಿದೆ.

ಡಾ. ಧುರಿಯವರು ಈ ದೂರಿನಲ್ಲಿ ಮುಂದಿನಂತೆ ಹೇಳಿದ್ದಾರೆ, ಚಿತ್ರಕಾರ ಎಮ್.ಎಫ್. ಹುಸೇನ ಇವರು ಅವರ ವೃತ್ತಿಜೀವನದಲ್ಲಿ ಭಾರತಮಾತೆ, ಅದೇ ರೀತಿ ಹಿಂದೂಗಳ ಅನೇಕ ದೇವದೇವತೆಗಳನ್ನು ನಗ್ನವಾಗಿ, ಆಶ್ಲೀಲವಾಗಿ ಮತ್ತು ವಿಕೃತವಾಗಿ ಚಿತ್ರಿಸಿ ದೇವತೆಗಳ ಹಾಗೂ ಭಾರತಮಾತೆಯ ಘೋರ ಅವಮಾನ ಮಾಡಿದ್ದರು. ಇದರ ವಿರುದ್ಧ ದೇಶಾದ್ಯಂತ ಹಿಂದೂಗಳು ಆಕ್ರೋಶದಿಂದ ಆಂದೋಲನಗಳನ್ನು ಮಾಡಿದ್ದರು. ಅದೇ ರೀತಿ ದೇಶಾದ್ಯಂತ 1250 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸ್ ದೂರನ್ನು ದಾಖಲಿಸಲಾಗಿತ್ತು. ಹುಸೇನ ಇವರ ವಿರುದ್ಧ ಧಾರ್ಮಿಕ ಭಾವನೆಯನ್ನು ನೋಯಿಸುವುದು, ಅಶ್ಲೀಲ ಸಾಹಿತ್ಯಗಳನ್ನು ಮಾರಾಟ ಮಾಡುವುದು, ರಾಷ್ಟ್ರೀಯ ಅಖಂಡತೆಯನ್ನು ಅಪಾಯಕ್ಕೀಡು ಮಾಡುವುದು, ರಾಷ್ಟ್ರೀಯ ಪ್ರತೀಕಗಳ ಅವಮಾನ ಮಾಡುವುದು ಇವುಗಳಿಗಾಗಿ ವಿವಿಧ ಕಲಂಗನುಸಾರ ಅಪರಾಧವನ್ನು ದಾಖಲಿಸಲಾಗಿತ್ತು.

`AstaGuru’ ಸಂಸ್ಥೆಯು ಹರಾಜಿಗೆ ಇಟ್ಟಿದ್ದ ಚಿತ್ರಗಳಲ್ಲಿ ‘ಓಮ್ ಶ್ರೀ ಗಣೇಶ ನಮನ’ ಹೆಸರಿನ ಚಿತ್ರದಲ್ಲಿ ಶ್ರೀ ಗಣೇಶನ ಮುಂದೆ ಸರಸ್ವತಿ ದೇವಿ ವೀಣಾವಾದನ ಮಾಡುತ್ತಿದ್ದು ಶ್ರೀ ಗಣೇಶನಿಗೆ ಹೆದರುತ್ತಿರುವಂತೆ ತೋರಿಸಲಾಗಿದೆ. ಅದೇರೀತಿ ಈ ಚಿತ್ರದಲ್ಲಿ ಶ್ರೀ ಗಣೇಶನ ಎರಡು ಕೈಗಳು ಮಾತ್ರ ಕಾಣಿಸುತ್ತಿವೆ. ‘ಶಂಕರಾ’ ಹೆಸರಿನ ಚಿತ್ರದಲ್ಲಿ ಭಗವಾನ ಶಿವ ನಗ್ನವಾಗಿ ಕುಳಿತಿರುವಂತೆ ಪಕ್ಕದಲ್ಲಿ ನಾಗರಹಾವನ್ನು ತೋರಿಸಲಾಗಿದೆ. ಇದರಲ್ಲಿ ಭಗವಾನ ಶಿವನಿಗೆ ಪ್ರಾಣಿಯ ಮುಖವನ್ನು ಹಾಕಲಾಗಿದೆ. ಶ್ರೀ ಗಣೇಶನ ಚಿತ್ರದ ಬೆಲೆಯು ಸುಮಾರು 75 ರಿಂದ 88 ಲಕ್ಷ ರೂಪಾಯಿ ಇದ್ದು, ಭಗವಾನ ಶಿವನ ಚಿತ್ರದ ಬೆಲೆ ಸುಮಾರು 70 ರಿಂದ 80 ಲಕ್ಷ ರೂಪಾಯಿ ನಿಗದಿ ಪಡಿಸಲಾಗಿದೆ. ಆದ್ದರಿಂದ ಪೊಲೀಸರು ಈ ಗಣೇಶೋತ್ಸವದ ಸಮಯದಲ್ಲಿ ಆಗುತ್ತಿರುವ ಶ್ರೀ ಗಣಪತಿಯ ಹಾಗೂ ಭಗವಾನ ಶಿವನ ವಿಡಂಬನೆಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಹರಾಜು ಮಾಡುವ ಆಯೋಜಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಆಗ್ರಹಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿಯ ಘಾಟಕೋಪರ ಇಲ್ಲಿನ ಧರ್ಮಪ್ರೇಮಿ ನ್ಯಾಯವಾದಿ ಪೂನಮ್ ಜಾಧವ ಇವರು ‘ಆನ್‌ಲೈನ್’ ಹರಾಜು ಮಾಡುವ ಆಯೋಜಕರಾದ `AstaGuru’ ಈ ಸಂಸ್ಥೆಗೆ ಕಾನೂನುರೀತ್ಯ ನೋಟಿಸನ್ನು ಕಳುಹಿಸಿದ್ದಾರೆ. ಅದೇರೀತಿ ಹಿಂದೂರಾಷ್ಟ್ರಸೇನೆಯ ಶ್ರೀ. ಪ್ರಕಾಶ ಸಾವಂತ, ಶ್ರೀ ಶಿವಕಾರ್ಯ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಭಾಕರ ಭೋಸಲೆ, ಹಿಂದೂ ಗೋವಂಶ ರಕ್ಷಾ ಸಮಿತಿಯ ಶ್ರೀ. ದೀಪ್ತೇಶ ಪಾಟೀಲ್, ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ ಸಮನ್ವಯಕರಾದ ಶ್ರೀ. ಬಳವಂತ ಪಾಠಕ ಇವರೊಂದಿಗೆ ಅನೇಕ ಧರ್ಮಪ್ರೇಮಿಗಳು ದೂರವಾಣಿ ಕರೆಯನ್ನು ಮಾಡಿ ಆಯೋಜಕರಲ್ಲಿ ಇದರ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಪನವೇಲ್‌ಯಲ್ಲಿನ ಶ್ರೀ. ಗಿರೀಶ ಢವಳಿಕರ ಇವರೊಂದಿಗೆ ಅನೇಕರು ‘ವಿ-ಅಂಚೆ’ಯ ಮೂಲಕ ಖಂಡಿಸಿದ್ದಾರೆ.

ಮಾಹಿತಿಗಾಗಿ ಈ ಕೆಳಗೆ ಲಿಂಕನ್ನು ನೀಡಲಾಗಿದೆ :-

https://astaguru.com/Home/billingAddress?productid=5433

https://astaguru.com/Home/LotDetails?productid=5416&page=0