ನಗದು ಬಿಕ್ಕಟ್ಟಿನಿಂದಾಗಿ ತಿರುಪತಿ ದೇವಸ್ಥಾನವು ೧೨ ಸಾವಿರ ಕೋಟಿ ರೂಪಾಯಿಗಳನ್ನು ಅಡವಿಟ್ಟು ತಿಂಗಳ ಬಡ್ಡಿ ತೆಗೆದುಕೊಳ್ಳುವುದು

ಕೊರೋನಾ ಸಂಕಟದ ಪರಿಣಾಮ

ತಿರುಪತಿ (ಆಂಧ್ರಪ್ರದೇಶ) – ತಿರುಮಲ ತಿರುಪತಿಯಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕೊರೋನಾದ ಸಂಕಟದಿಂದಾಗಿ ಭಕ್ತರಿಂದ ನಗದು ರೂಪದ ಅರ್ಪಣೆಗಳಲ್ಲಿ ತೀವ್ರ ಇಳಿಕೆಯಾದುದರಿಂದ ತಿರುಮಲ ತಿರುಪತಿ ದೇವಸ್ಥಾನವು ಆಗಸ್ಟ್ ೨೮ ರಂದು ನಡೆದ ಸಭೆಯಲ್ಲಿ ೧೨ ಸಾವಿರ ಕೋಟಿ ರೂಪಾಯಿಗಳ ನಗದನ್ನು ಅಡವಿಟ್ಟು ಬಡ್ಡಿಯನ್ನು ತಿಂಗಳ ಸ್ವರೂಪದಲ್ಲಿ ರೂಪಾಂತರಿತಗೊಳಿಸುವ ನಿರ್ಣಯವನ್ನು ತೆಗೆದುಕೊಂಡಿತು. ಈ ಮಾಸಿಕ ಬಡ್ಡಿ ವೇತನ ನೀಡಲು, ಓವರಹೆಡ್ ಖರ್ಚಿಗಾಗಿ ಹಾಗೂ ನಿಯಮಿತ ಧಾರ್ಮಿಕ ವಿಧಿಗಳಿಗಾಗಿ ಉಪಯೋಗಿಸಲಾಗುವುದು.

೧. ತಿರುಮಲಾದಲ್ಲಿ ನಡೆದ ತಿರುಪತಿ ತಿರುಮಲಾ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು. ದೇವಸ್ಥಾನ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿಯವರು ಬೋರ್ಡ್‌ನ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಇಲ್ಲಿಯವರೆಗೆ ದೇವಸ್ಥಾನ ಬ್ಯಾಂಕಿನಲ್ಲಿ ತ್ರೈಮಾಸಿಕ, ಅರ್ಧ ವಾರ್ಷಿಕ ಹಾಗೂ ವಾರ್ಷಿಕ ನಗದನ್ನು ಅಡವಿಡಲಾಗುತ್ತಿತ್ತು ಹಾಗೂ ಕೇವಲ ಅಡವಿನ ಮೆಚ್ಯುರಿಟಿಯ ಕೊನೆಯಲ್ಲಿ ಬಡ್ಡಿಯನ್ನು ಗಳಿಸುತ್ತಿದೆ.

೨. ಅಡವಿನ ತಿಂಗಳ ಬಡ್ಡಿ ೭೦೬ ಕೋಟಿ ರೂಪಾಯಿಯು ದೇವಸ್ಥಾನದ ವಾರ್ಷಿಕ ಬಜೆಟ್‌ನ ೩ ಸಾವಿರದ ೩೦೯ ಕೋಟಿ ರೂಪಾಯಿಗಳ ನಂತರದ ಎರಡನೇ ಸ್ಥಾನದ ಉತ್ಪನ್ನವಾಗಿದೆ. ಇದನ್ನು ಹೊರತು ಪಡಿಸಿ ಸುಮಾರು ೧ ಸಾವಿರದ ೩೧೩ ಕೋಟಿ ರೂಪಾಯಿಗಳು ಹುಂಡಿಯ ನಂತರದ ಉತ್ಪನ್ನದ ಮೊದಲ ಅತ್ಯಧಿಕ ಮೂಲವಾಗಿದೆ.

೩. ದೇವಸ್ಥಾನ ಮಂಡಳಿಯು, ದೇವತೆಗೆ ಅರ್ಪಿಸಿದ ಬಂಗಾರದ ಠೇವಣಿಗಳನ್ನು ಪ್ರಸ್ತುತ ಅಲ್ಪಾವಧಿಯ ಠೇವಣಿಗಳಲ್ಲಿ ಪರಿವರ್ತಿಸಬೇಕು ಇದರಿಂದ ಹೆಚ್ಚು ಬಡ್ಡಿ ಸಿಗುವುದು ಎಂದೂ ಸಹ ನಿರ್ಧಾರವನ್ನು ಕೈಗೊಂಡಿದೆ. ೨೦೧೫ ರಲ್ಲಿ ರಿಝರ್ವ ಬ್ಯಾಂಕ್ ‘ಗೋಲ್ಡ ಮ್ಯಾನಿಟೈಜೆಶನ್’ ತಂದಿತು, ಆಗ ದೇವಸ್ಥಾನವು ೫ ಸಾವಿರದ ೩೮೭ ಕಿಲೋ ಬಂಗಾರವನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ, ೧ ಸಾವಿರದ ೯೩೮ ಕಿಲೋ ಇಂಡಿಯನ್ ಓವರಸಿಸ್ ಬ್ಯಾಂಕಿನಲ್ಲಿ ಹಾಗೂ ಪಿ.ಎನ್.ಬಿ. ಬ್ಯಾಂಕಿನಲ್ಲಿ ೧ ಸಾವಿರದ ೩೮೧ ಕಿಲೋ ಬಂಗಾರವನ್ನು ಇಟ್ಟಿದೆ. ಪಿ.ಎನ್.ಬಿ.ನಲ್ಲಿನ ಬಂಗಾರವನ್ನು ಕಳೆದ ವರ್ಷ ಮ್ಯಾಚುರಿಟಿಯನಂತರ ತೆಗೆದು ಅದನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಇಡಲಾಯಿತು.

೪. ಸಪ್ಟೆಂಬರ್‌ನಲ್ಲಿ ‘ಬ್ರಹ್ಮೋತ್ಸವ’(ಭಕ್ತರಿಗೆ ಉಪಸ್ಥಿತರಿರಲು ಅನುಮತಿ ನೀಡದೇ) ಆಯೋಜಿಸುವಂತೆಯೂ ದೇವಸ್ಥಾನ ಮಂಡಳಿಯು ನಿರ್ಧರಿಸಿತು. ‘ಬ್ರಹ್ಮೋತ್ಸವ’ ಇದು ತಿರುಪತಿ ದೇವಸ್ಥಾನದ ಎಲ್ಲಕ್ಕಿಂತ ದೊಡ್ಡದಾದ ಉತ್ಸವವಾಗಿದೆ. ಕೊರೋನಾದಿಂದ ಇಡೀ ದೇಶದಾದ್ಯಂತ ಹರಡಿದ ರೋಗದಿಂದಾಗಿ ಬ್ರಹ್ಮೋತ್ಸವವನ್ನು ಸರಳ ಪದ್ದತಿಯಿಂದ ಆಚರಿಸಲಾಗುವುದು. ಅಕ್ಟೋಬರ್‌ನಲ್ಲಿ ಇನ್ನೊಂದು ಬ್ರಹ್ಮೋತ್ಸವ ನಡೆಯಲಿದೆ. ಪರಿಸ್ಥಿತಿ ಸುಧಾರಿಸಿದರೆ ಆಗ ಭಕ್ತರಿಗೆ ಅನುಮತಿ ನೀಡಲಾಗುವುದು ಎಂದು ಹೇಳಿದೆ.