ರಾಜ್ಯದಲ್ಲಿ ‘ಲವ್ ಜಿಹಾದ್’ನ ಘಟನೆಯನ್ನು ತಡೆಗಟ್ಟಲು ‘ಕಾರ್ಯ ಯೋಜನೆ’ ನಿರ್ಮಿಸಲು ಯೋಗಿ ಆದಿತ್ಯನಾಥ ಇವರ ಆದೇಶ

ಒಂದುವೇಳೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಈ ರೀತಿಯಲ್ಲಿ ಪ್ರಯತ್ನಿಸಬಹುದಾದರೇ, ಕೇಂದ್ರ ಸರಕಾರ ಹಾಗೂ ಇತರ ರಾಜ್ಯಗಳ ಸರಕಾರಗಳೂ ‘ಲವ್ ಜಿಹಾದ್’ ತಡೆಗಟ್ಟಲು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಇತ್ತೀಚೆಗೆ ಉತ್ತರಪ್ರದೇಶದ ಮೆರಠ, ಕಾನಪುರ ಹಾಗೂ ಲಖಿಮಪುರ ಖಿರಿಯಲ್ಲಿ ಮತಾಂಧರು ಹಿಂದೂ ಹುಡುಗಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಮೋಸಗೊಳಿಸುವ ಘಟನೆಯು ಬಹಿರಂಗಗೊಂಡಿತ್ತು. ‘ಲವ್ ಜಿಹಾದ್’ನ ಘಟನೆಗಳಲ್ಲಿ ಮೆರಠ ಹಾಗೂ ಲಖಿಮಪುರ ಖಿರಿಯಲ್ಲಿ ಹಿಂದೂ ಹುಡುಗಿಯರ ಹತ್ಯೆಯೂ ಆಗಿತ್ತು. ಈ ಘಟನೆಗಳನ್ನು ನೋಡಿ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರಕಾರವು ಕಠಿಣ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ರಾಜ್ಯ ಸರಕಾರ ಮತಾಂತರದ ಮೇಲೆ ಕಡಿವಾಣ ಹಾಕುವ ಸಿದ್ಧತೆಯಲ್ಲಿದೆ. ಅದಕ್ಕಾಗಿ ‘ಕಾರ್ಯ ಯೋಜನೆ’ ರೂಪಿಸುವಂತೆ ಯೋಗಿ ಆದಿತ್ಯನಾಥರು ಆದೇಶ ನೀಡಿದ್ದಾರೆ.