ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಇವರಿಂದ ಪ್ರಧಾನಿ ಮೋದಿಯವರಿಗೆ ಆಗ್ರಹ
ಹರಿದ್ವಾರ (ಉತ್ತಾರಾಖಂಡ) – ಅಯೋಧ್ಯೆಯಲ್ಲಿ ಇನನು ಭಗವಾನ ಶ್ರೀರಾಮನ ದೇವಸ್ಥಾನ ನಿರ್ಮಿಸಬೇಕಾಗಿದೆ, ಅಷ್ಟರಲ್ಲೇ ದೇಶದಲ್ಲಿ ಅದನ್ನು ಧ್ವಂಸ ಮಾಡುವ ಮಾತುಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ ದೇಶದ ಮುಸಲ್ಮಾನರಿಗೆ ಅಲ್ಪಸಂಖ್ಯಾತರೆಂದು ಹೇಳುವುದು ಯೋಗ್ಯವಿಲ್ಲ. ಅದಕ್ಕಾಗಿ ದೇಶದಲ್ಲಿ ಸಮಾನ ನಾಗರಿಕ ಕಾನೂನನ್ನು ರೂಪಿಸಬೇಕು, ಎಂದು ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಇವರು ಪ್ರಧಾನಿ ಮೋದಿಯವರಿಗೆ ಆಗ್ರಹಿಸಿದ್ದಾರೆ. ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ‘ಒಂದುವೇಳೆ ಪ್ರಧಾನಿ ಮೋದಿಯವರ ಕಾಲದಲ್ಲಿ ಈ ಕಾನೂನು ಆಗದಿದ್ದರೆ ಮುಂದೆ ಎಂದಿಗೂ ಆಗಲು ಸಾಧ್ಯವಿಲ್ಲ’, ಎಂದು ಹೇಳುತ್ತಾ ‘ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ ಶಾಹ ಇವರಿಗೆ ಪತ್ರವನ್ನು ಬರೆದು ಸಮಾನ ನಾಗರಿಕ ಕಾನೂನನ್ನು ರೂಪಿಸುವಂತೆ ವಿನಂತಿಸಿದ್ದಾರೆ’, ಎಂಬ ಮಾಹಿತಿಯನ್ನು ನೀಡಿದ್ದಾರೆ.
೧. ಮಹಂತ ನರೇಂದ್ರ ಗಿರಿ ತಮ್ಮ ಮಾತನ್ನು ಮುಂದುವರಿಸುತ್ತಾ, ಈ ಕಾನೂನಿನಿಂದಾಗಿ ಜನಸಮಖ್ಯೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ, ೨ ಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದವರಿಗೆ ಸರಕಾರಿ ಸೌಲಭ್ಯಗಳಿಂದ ವಂಚಿತಗೊಳಿಸಬೇಕು, ಎಂದರು.
೨. ಪ್ರಯಾಗರಾಜದಲ್ಲಿ ಹೀರ ಖಾನ್ ಮಹಿಳೆಯು ಸೀತಾ ಮಾತೆಯ ಬಗ್ಗೆ ಅಶ್ಲೀಲ ಹೇಳಿಕೆಯನ್ನು ನೀಡಿದ್ದಳು. ಅದಕ್ಕೆ ಮಹಂತ ನರೇಂದ್ರ ಗಿರಿಯವರು, ಇದರಿಂದ ಹಿಂದೂಗಳಿಗೆ ಹೇಗೆ ತೊಂದರೆಯನ್ನು ನೀಡಲು ಪ್ರಯತ್ನಿಸುತ್ತಾರೆ, ಎಂಬ ಕಲ್ಪನೆ ಬಂದಿರಬಹುದು, ಎಂದರು.