|
ತಿರುವನಂತಪುರಮ್ (ಕೇರಳ) – ಕೊರೋನಾದಿಂದಾಗಿ ದೇವಸ್ಥಾನಗಳ ಉತ್ಪನ್ನದಲ್ಲಿ ವ್ಯತ್ಯಯವಾಗಿದ್ದರಿಂದ ಶಬರಿಮಲೈ ದೇವಸ್ಥಾನದ ಬಂಗಾರವನ್ನು ರಿಝರ್ವ್ ಬ್ಯಾಂಕಿನಲ್ಲಿ ಅಡವಿಟ್ಟು ಅದರ ಬಡ್ಡಿಯನ್ನು ತೆಗೆದುಕೊಂಡು ದೇವಸ್ಥಾನದ ನಿಯಮಿತ ಖರ್ಚನ್ನು ತುಂಬಿಸುವ ಬಗ್ಗೆ ತ್ರಾವಣಕೋರ ದೇವಸ್ವಮ್ ಬೋರ್ಡ್ ನಿರ್ಣಯ ತೆಗೆದುಕೊಂಡಿದೆ. ಅದಕ್ಕನುಸಾರ ಈಗ ಮಂಡಳಿಯು ತನ್ನ ವ್ಯಾಪ್ತಿಯಲ್ಲಿ ಬರುವ ೧ ಸಾವಿರದ ೨೫೦ ದೇವಸ್ಥಾಗಳಲ್ಲಿರುವ ಬಂಗಾರಗಳ ಮಾಹಿತಿಯನ್ನು ಪಡೆದು ಅದರ ಮೌಲ್ಯವನ್ನು ತಿಳಿಯಲು ಆರಂಭಿಸಿದೆ.
೧ ಸಾವಿರ ಕೆಜಿಯಷ್ಟು ಬಂಗಾರವನ್ನು ಅಡವಿಡುವ ಬಗ್ಗೆ ಮಂಡಳಿಯು ವಿಚಾರ ಮಾಡಿದೆ. ಈ ಹಿಂದೆ ತಿರುಪತಿ ದೇವಸ್ಥಾನ ಸಮಿತಿ ಹಾಗೂ ಶಿರ್ಡಿ ಸಾಯಿಬಾಬಾ ದೇವಸ್ಥಾನ ಸಂಸ್ಥಾನವೂ ಈ ರೀತಿಯಲ್ಲಿ ಬಂಗಾರವನ್ನು ಅಡವಿಟ್ಟಿತ್ತು. ಇದರಿಂದ ಸಿಗುವಂತಹ ಹಣಕ್ಕೆ ತೆರಿಗೆ ಇರುವುದಿಲ್ಲ.
Faced with financial crunch, Sabarimala & 1,200 Kerala temples plan to monetise gold
ThePrint's @Rohini_Swamy reportshttps://t.co/DGW5poy0am
— ThePrintIndia (@ThePrintIndia) August 28, 2020
ಬೋರ್ಡ್‌ನ ಅಧ್ಯಕ್ಷ ಎನ್. ವಾಸು ಅವರು ಈ ಬಗ್ಗೆ ಮುಂದಿನಂತೆ ಹೇಳಿದ್ದಾರೆ,
೧. ರಿಝರ್ವ ಬ್ಯಾಂಕಿನ ‘ಗೋಲ್ಡ್ ಮ್ಯಾನಿಟೈಸೇಶನ’ ಈ ಯೋಜನೆಯಲ್ಲಿ ಬಂಗಾರವನ್ನು ಅಡವಿಡುವ ಬಗ್ಗೆ ವಿಚಾರ ಮಾಡಲಾಗುತ್ತಿದೆ. ೧ ಸಾವಿರ ಕೆಜಿ ಬಂಗಾರಕ್ಕಿಂತಲೂ ಹೆಚ್ಚು ಬಂಗಾರವನ್ನು ಅಡವಿಡುವ ಸಾಧ್ಯತೆಗಳಿವೆ. ಅದಕ್ಕೆ ನಮಗೆ ಶೇ. ೨.೫ ಬಡ್ಡಿ ಸಿಗುವುದು, ಇದರಿಂದ ವರ್ಷಕ್ಕೆ ೧೦ ಕೋಟಿ ರೂಪಾಯಿ ಸಿಗಲಿದೆ; ಆದರೆ ಈ ಹಣವು ನಮ್ಮ ಖರ್ಚನ್ನು ಹೊಂದಿಸಲು ಸಾಕಾಗುವುದಿಲ್ಲ.
೨. ನಮ್ಮ ದೇವಸ್ಥಾನಗಳಲ್ಲಿ ೫ ಸಾವಿರ ನಿಯಮಿತ ನೌಕರರು ಇದ್ದಾರೆ. ಅವರಿಗೆ ವೇತನ ನೀಡುವುದು, ಅದೇರೀತಿ ೪ ಸಾವಿರ ನಿವೃತ್ತ ನೌಕರರು ಇದ್ದಾರೆ, ಅವರಿಗೆ ನಿವೃತ್ತಿ ವೇತನ ನೀಡಬೇಕಾಗುತ್ತದೆ. ಅದಕ್ಕಾಗಿ ಪ್ರತಿತಿಂಗಳು ೪೦ ಕೋಟಿ ರೂಪಾಯಿ ಖರ್ಚು ಬರುತ್ತದೆ. ಪೂಜಾವಿಧಿಗಾಗಿ ೧೦ ಕೋಟಿ ರೂಪಾಯಿ ಖರ್ಚು ಆಗುತ್ತದೆ. ನಮಗೆ ಕೊರೋನಾದಿಂದಾಗಿ ಇಲ್ಲಿಯವರೆಗೆ ೩೦೦ ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ.
೩. ಬೋರ್ಡ್‌ನ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳ ಪೈಕಿ ಶಬರಿಮಲೈ ದೇವಸ್ಥಾನದ ವಾರ್ಷಿಕ ಉತ್ಪನ್ನ ೩೫೦ ಕೋಟಿ ಎಲ್ಲಕ್ಕಿಂತ ಹೆಚ್ಚು ಇದೆ; ಆದರೆ ಕೊರೋನಾದಿಂದಾಗಿ ಈ ಉತ್ಪನ್ನ ನಿಂತಿದೆ. ಸರಕಾರವು ನಮಗೆ ೧೦೦ ಕೋಟಿ ರೂಪಾಯಿ ನೀಡಲಾಗುವುದು ಎಂದು ಆಶ್ವಾಸನೆಯನ್ನು ನೀಡಿತ್ತು, ಅದರಲ್ಲಿ ೫೦ ಕೋಟಿ ರೂಪಾಯಿ ಸಿಕ್ಕಿದೆ.
೪. ಬಂಗಾರವನ್ನು ಅಡವಿಡಲು ಅನುಮತಿಯನ್ನು ನೀಡುವಂತೆ ನಾವು ಕೇರಳ ಉಚ್ಚ ನ್ಯಾಯಾಲಕ್ಕೆ ಹೋಗುವವರಿದ್ದೇವೆ. ಈ ಪ್ರಕ್ರಿಯೆಗೆ ೨-೩ ತಿಂಗಳು ಆಗಬಹುದು.
೫. ಮೂರ್ತಿಗಳಿಗೆ ಏರಿಸಿದ್ದ ಆಭರಣಗಳು ಹಾಗೂ ಪ್ರಾಚೀನ ಆಭರಣಗಳನ್ನು ಅಡವಿಡುವುದಿಲ್ಲ. ಕೇವಲ ಭಕ್ತರಿಂದ ಅರ್ಪಣೆಯ ಸ್ವರೂಪದಲ್ಲಿ ನೀಡಿದ್ದ ಬಂಗಾರವನ್ನು ಅಡವಿಡಲಾಗುವುದು, ಎಂದೂ ವಾಸು ಅವರು ಸ್ಪಷ್ಟ ಪಡಿಸಿದ್ದಾರೆ.