ಪಿತೃಪಕ್ಷದ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಕಡೆಗೆ ಅನೇಕ ಕಾಗೆಗಳು ಆಕರ್ಷಿತವಾಗುವುದು, ಇದು ಆಶ್ರಮವು ತೀರ್ಥಕ್ಷೇತ್ರ ಸಮಾನವಾಗಿರುವುದರಿಂದ ಇಲ್ಲಿಗೆ ಬಂದು ಪಿತೃಗಳು ತೃಪ್ತರಾದುದರ ದ್ಯೋತಕ !
ಶ್ರಾದ್ಧದಲ್ಲಿ ಪಿಂಡದಾನದ ಮಾಧ್ಯಮದಿಂದ ಪಿತೃಗಳನ್ನು ಆಹ್ವಾನಿಸುತ್ತಾರೆ. ಪಿತೃಗಳ ಅತೃಪ್ತ ಆಸೆಗಳನ್ನು ಪಿಂಡದ ಮೂಲಕ ಪೂರೈಸಲಾಗುತ್ತದೆ. ಪಿತೃಗಳ ಲಿಂಗದೇಹವು ಯಾವ ಸಮಯದಲ್ಲಿ ಪಿಂಡದ ಕಡೆಗೆ ಆಕರ್ಷಿತವಾಗುತ್ತದೆಯೋ ಆಗ ಅದು ರಜ-ತಮಾತ್ಮಕ ಲಹರಿಗಳಿಂದ ತುಂಬಿಕೊಂಡಿರುತ್ತದೆ. ಈ ಲಹರಿಗಳ ಕಡೆಗೆ ಕಾಗೆಯು ಆಕರ್ಷಿತವಾಗುತ್ತದೆ.