ಸಪ್ಟೆಂಬರ್ ೩೦ ರಂದು ಬಾಬರಿ ಮಸೀದಿ ನೆಲಸಮ ಪ್ರಕರಣದ ತೀರ್ಪು
ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲಿದ್ದ ಬಾಬರಿ ಮಸೀದಿಯನ್ನು ೬ ಡಿಸೆಂಬರ ೧೯೯೨ ರಲ್ಲಿ ನೆಲಸಮಗೊಳಿಸಿದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೩೦ ರಂದು ತೀರ್ಪು ನೀಡಲಿದೆ. ನ್ಯಾಯಾಧೀಶರಾದ ಎಸ್.ಕೆ. ಯಾದವ್ ಇವರು ತೀರ್ಪಿನಿ ದಿನ ಲಾಲ್‌ಕೃಷ್ಣ ಆಡ್ವಾಣಿ ಸೇರಿ ಎಲ್ಲ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶವನ್ನು ನೀಡಿದ್ದಾರೆ.