ಬಂಗಾಲದಲ್ಲಿ ಭಾಜಪದ ಕಾರ್ಯಕರ್ತರ ಶವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರು ಹತ್ಯೆಗೈಯ್ದಿದ್ದಾರೆ ಎಂದು ಭಾಜಪದಿಂದ ಆರೋಪ

ಬಂಗಾಲದಲ್ಲಿ ಕಳೆದ ೨-೩ ವರ್ಷಗಳಲ್ಲಿ ಭಾಜಪದ ಅನೇಕ ಕಾರ್ಯಕರ್ತರ ಹತ್ಯೆಯಾಗಿದೆ, ಆದರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದನ್ನು ತಡೆಗಟ್ಟಲು ವಿಫಲವಾಗಿದ್ದಾರೆ. ಹೀಗಿರುವಾಗ ಅದನ್ನು ತಡೆಗಟ್ಟಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳುತ್ತಿರುವುದು ಕಾಣಿಸುತ್ತಿಲ್ಲ ಹಾಗೂ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಏನೂ ಮಾತನಾಡುತ್ತಿಲ್ಲ !

ಕೊಲಕತಾ(ಬಂಗಾಲ) – ರಾಜ್ಯದ ಗೊಘಾಟ ರೈಲು ನಿಲ್ದಾಣದ ಬಳಿ ಒಂದು ಮರದ ಮೇಲೆ ಭಾಜಪದ ವಿಭಾಗೀಯ ಕಾರ್ಯದರ್ಶಿ ಗಣೇಶ ರಾಯ್ ಇವರ ಶವವು ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ‘ತೃಣಮೂಲ ಕಾಂಗ್ರೆಸ್‌ನವರು ಗಣೇಶ ರಾಯ್ ಇವರ ಹತ್ಯೆ ಮಾಡಿದ್ದಾರೆ’, ಎಂದು ಭಾಜಪ ಹಾಗೂ ರಾಯ್‌ನ ಮಗನು ಆರೋಪಿಸಿದ್ದಾನೆ. ಭಾಜಪದ ಕಾರ್ಯಕರ್ತರು ಇಲ್ಲಿ ‘ರಸ್ತೆ ತಡೆ’ ಆಂದೋಲನವನ್ನೂ ಮಾಡಿದ್ದಾರೆ. ಈ ಹತ್ಯೆಯ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಬಂಗಾಲದ ಭಾಜಪದ ಪ್ರದೇಶಾಧ್ಯಕ್ಷ ದಿಲೀಶ್ ಘೋಷ್ ಇವರು, ಈ ರೀತಿಯಲ್ಲಿ ನಮ್ಮ ಕಾರ್ಯಕರ್ತರನ್ನು ಪ್ರತಿದಿನ ಹತ್ಯೆ ಮಾಡಲಾಗುತ್ತಿದೆ. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ರಾಜ್ಯದಲ್ಲಿ ಅವರು ರಾಜಕೀಯ ವಿರೋಧಕರನ್ನು ಹತ್ಯೆ ಮಾಡಿ ಅವರ ಶವವನ್ನು ಹೂತುಹಾಕುತ್ತಿದ್ದರೆ, ತೃಣಮೂಲ ಕಾಂಗ್ರೆಸ್ ಮರದ ಮೇಲೆ ನೇತು ಹಾಕುತ್ತಿದ್ದಾರೆ, ಎಂದಿದ್ದಾರೆ.