‘ಲವ್ ಜಿಹಾದ್’ನ ಘಟನೆಗಳನ್ನು ತಡೆಗಟ್ಟಲು ಮತಾಂತರ ವಿರೋಧಿ ಕಾಯ್ದೆಯನ್ನು ರೂಪಿಸಲಿರುವ ಉತ್ತರಪ್ರದೇಶ ಸರಕಾರ
ಲವ್ ಜಿಹಾದ್‌ನ ವಿಷಯದಲ್ಲಿ ಉತ್ತರಪ್ರದೇಶ ಸರಕಾರ ಶೀಘ್ರವಾಗಿ ಮತಾಂತರದ ಬಗ್ಗೆ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ‘ಇತರ ರಾಜ್ಯಗಳಲ್ಲಿ ಮತಾಂತರದ ವಿರುದ್ಧ ರೂಪಿಸಲಾಗಿರುವ ಕಾನೂನುಗಳು ಹಾಗೂ ಅಧಿನಿಯಮಗಳ ಬಗ್ಗೆ ಅಭ್ಯಾಸ ಮಾಡಲಾಗುತ್ತಿದೆ. ನಂತರ ಉತ್ತರಪ್ರದೇಶ ಸರಕಾರ ಇದರ ಬಗ್ಗೆ ತನ್ನ ಕಾನೂನುಗಳನ್ನು ರೂಪಿಸಲಿದೆ’, ಎಂದು ರಾಜ್ಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.