ಇದು ಸ್ವಾತಂತ್ರ್ಯನಂತರದ ಇಲ್ಲಿಯವರೆಗಿನ ಆಡಳಿತದವರಿಗೆ ನಾಚಿಕೆಗೇಡು ! ಮೊಘಲರ ಗುಲಾಮಗಿರಿಯ ಈ ಚಿಹ್ನೆಗಳನ್ನು ಅಳಸಿ ಹಾಕಲು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಈಗಲಾದರೂ ಕ್ರಮ ವಹಿಸಬೇಕು !
ನವ ದೆಹಲಿ – ಕ್ರೂರ, ಆಕ್ರಮಣಕಾರಿ ಹಾಗೂ ಕಟ್ಟರ ಹಿಂದೂದ್ವೇಷಿಯಾಗಿದ್ದ ಮೊಘಲರು ಭಾರತದ ಮೇಲೆ ೧೫೨೬ ರಿಂದ ೧೮೫೭(೩೩೧ ವರ್ಷ) ತನಕ ರಾಜ್ಯವಾಳಿದರು. ತದನಂತರವೂ ದೇಶದ ೬ ಲಕ್ಷ ನಗರಗಳು, ಊರುಗಳು ಹಾಗೂ ಗ್ರಾಮಗಳು ಬಾಬರ್, ಹುಮಾಯುನ್, ಅಕಬರ, ಜಹಾಂಗಿರ, ಶಾಹಜಹಾಂ ಹಾಗೂ ಔರಂಗಜೇಬ್ ಈ ಪ್ರಥಮ ೬ ಮೊಘಲ ಆಕ್ರಮಣಕಾರರ ಹೆಸರನ್ನು ಹೊಂದಿವೆ.. ಅಕಬರ ಹೆಸರು ಎಲ್ಲಕ್ಕಿಂತ ಹೆಚ್ಚು ೨೫೧ ಗ್ರಾಮಗಳು ಹಾಗೂ ನಗರಗಳಿಗೆ ಇದೆ. ನಂತರ ಔರಂಗಜೇಬ್ (೧೭೭ ಗ್ರಾಮ), ಜಹಾಂಗೀರ್(೧೪೧), ಶಾಹಜಹಾಂ(೬೩), ಬಾಬರ(೬೧) ಹಾಗೂ ಹುಮಾಯುನ್(೧೧) ಇವರ ಸರದಿ.
ಮೊಘಲರ ಸಾಮ್ರಾಜ್ಯದ ಕೇಂದ್ರಗಳು ಇದ್ದ ಉತ್ತರ ಹಾಗೂ ಮಧ್ಯ ಭಾರತದಲ್ಲಿ ಇವುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.. ಭಾರತೀಯ ರಾಜ್ಯಗಳ ಪೈಕಿ ಉತ್ತರಪ್ರದೇಶವು ಎಲ್ಲಕ್ಕಿಂತ ಮೇಲಿನ ಸ್ಥಾನದಲ್ಲಿದೆ. ಯು.ಪಿ. ಯ ೩೯೬ ಗ್ರಾಮಗಳು ಹಾಗೂ ಪಟ್ಟಣಗಳಿಗೆ ಮೊಘಲರ ಹೆಸರು ಇದೆ. ಉತ್ತರಪ್ರದೇಶದ ನಂತರ ಬಿಹಾರ(೯೪), ಮಹಾರಾಷ್ಟ್ರ (೫೦) ಹಾಗೂ ಹರಿಯಾಣಾ(೩೯) ಕ್ರಮವಾಗಿ ನಂತರದ ಸ್ಥಾನಗಳು ಹೊಂದಿವೆ.