ಕೊರೋನಾದಿಂದ ಗುಣಮುಖರಾದವರು ಯೋಗಾಸನಗಳನ್ನು ಮಾಡಿ, ಚವನಪ್ರಾಶ್ ತೆಗೆದುಕೊಳ್ಳಿ ! – ಕೇಂದ್ರ ಸರಕಾರದ ಮಾರ್ಗದರ್ಶಕ ಸೂಚನೆ

ನವ ದೆಹಲಿ – ಕೇಂದ್ರದ ಆರೋಗ್ಯ ಸಚಿವಾಲಯವು ಕೊರೋನಾದಿಂದ ಗುಣಮುಖರಾದರೂ ರೋಗಿಗಳು ಕಾಳಜಿ ವಹಿಸುವ ಬಗ್ಗೆ ಹೊಸ ಮಾರ್ಗದರ್ಶಕ ಸೂಚನೆಗಳನ್ನು ಜಾರಿಗೊಳಿಸಿದೆ. ನಿಯಮಿತ ಯೋಗಾಸನಗಳು, ಪ್ರಾಣಾಯಾಮ ಮಾಡುವುದು, ಧ್ಯಾನಧಾರಣೆ ಮಾಡುವುದು, ಸಾಧ್ಯವಾಗುವಷ್ಟು ವೇಗವಾಗಿ ನಡೆಯುವುದು, ಬಿಸಿ ನೀರು ಕುಡಿಯುವುದು, ಪ್ರಾಣಶಕ್ತಿ ಹೆಚ್ಚಿಸಲು ‘ಆಯುಷ್’ ಔಷಧಿಗಳ ಸೇವನೆಯನ್ನು ಮಾಡುವುದರೊಂದಿಗೆ ಚವನಪ್ರಾಶ್ ಸೇವಿಸುವುದು ಇತ್ಯಾದಿ ಉಪಾಯಗಳನ್ನು ಹೇಳಿದೆ. ಕೊರೋನಾದಿಂದ ಗುಣಮುಖರಾದ ನಂತರ ಶಾರೀರಿಕ ಸುಸ್ತು, ಮೈ-ಕೈ ನೋವು, ಕೆಮ್ಮು, ಉಸಿರಾಟದ ತೊಂದರೆ ಈ ರೀತಿಯ ತೊಂದರೆಯ ಲಕ್ಷಣಗಳು ಉಳಿದಿರುತ್ತವೆ ಈ ಹಿನ್ನೆಲೆಯಲ್ಲಿ ಈ ಉಪಾಯಗಳನ್ನು ಹೇಳಲಾಗಿದೆ. ‘ಈ ಮಾರ್ಗದರ್ಶಕ ಸೂಚನೆ ಅಂದರೆ, ಕೊರೋನಾವನ್ನು ತಡೆಗಟ್ಟಲು ಉಪಾಯವಲ್ಲ’, ಎಂದೂ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ.