ಸಪ್ಟೆಂಬರ್ ೩೦ ರಂದು ಬಾಬರಿ ಮಸೀದಿ ನೆಲಸಮ ಪ್ರಕರಣದ ತೀರ್ಪು

ಆಡ್ವಾಣಿ, ಉಮಾ ಭಾರತಿ, ಮುರಳಿ ಮನೋಹರ ಜೋಶಿ, ವಿನಯ ಕಟಿಯಾರ್, ಸಾಧ್ವಿ ಋತಂಬರಾ ಇತ್ಯಾದಿ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಮೇಲಿದ್ದ ಬಾಬರಿ ಮಸೀದಿಯನ್ನು ೬ ಡಿಸೆಂಬರ ೧೯೯೨ ರಲ್ಲಿ ನೆಲಸಮಗೊಳಿಸಿದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೩೦ ರಂದು ತೀರ್ಪು ನೀಡಲಿದೆ. ನ್ಯಾಯಾಧೀಶರಾದ ಎಸ್.ಕೆ. ಯಾದವ್ ಇವರು ತೀರ್ಪಿನಿ ದಿನ ಲಾಲ್‌ಕೃಷ್ಣ ಆಡ್ವಾಣಿ ಸೇರಿ ಎಲ್ಲ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶವನ್ನು ನೀಡಿದ್ದಾರೆ. ಈ ತೀರ್ಪನ್ನು ನೀಡಲು ಕಳೆದ ತಿಂಗಳು ಸರ್ವೋಚ್ಚ ನ್ಯಾಯಾಲಯದ ವಿಶೇಷ ನ್ಯಾಯಾಲಯವು ಸಪ್ಟೆಂಬರ ೩೦ ರ ತನಕ ಕಾಲಾವಕಾಶ ನೀಡಿತ್ತು.

೧. ಈ ಪ್ರಕರಣದಲ್ಲಿ ಒಟ್ಟು ೩೨ ಆರೋಪಿಗಳಿದ್ದಾರೆ. ಅದರಲ್ಲಿ ಲಾಲ್‌ಕೃಷ್ಣ ಆಡ್ವಾಣಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಹ, ಭಾಜಪದ ಮುಖಂಡ ಮುರುಳಿ ಮನೋಹರ ಜೋಶಿ, ಉಮಾ ಭಾರತಿ, ವಿನಯ ಕಟಿಯಾರ್ ಹಾಗೂ ಸಾಧ್ವಿ ಋತಂಬರಾರವರು ಮುಖ್ಯ ಆರೋಪಿಗಳಾಗಿದ್ದಾರೆ. ಅದೇರೀತಿ ಕಾರ ಸೇವಕರ ವಿರುದ್ಧವೂ ಅಪರಾಧವನ್ನು ನೊಂದಾಯಿಸಲಾಗಿದೆ.

೨. ಈ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ೩೫೧ ಸಾಕ್ಷೀದಾರರು ಹಾಗೂ ಪುರಾವೆ ಎಂದು ೬೦೦ ಕಾಗದಪತ್ರಗಳನ್ನು ಸಲ್ಲಿಸಲಾಗಿದೆ ಎಂದು ಸಿಬಿಐ ನ್ಯಾಯವಾದಿ ಲಲಿತ್ ಸಿಂಹ ಇವರು ಮಾಹಿತಿಯನ್ನು ನೀಡಿದರು.

೩. ಈ ಹಿಂದೆ ಆಡ್ವಾಣಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಹಾಜರಿದ್ದು ಅವರ ಮೇಲಿರುವ ಆರೋಪಗಳನ್ನು ತಿರಸ್ಕರಿಸಿದ್ದರು.