ಚುನಾವಣೆಯ ಎದುರಾಗುತ್ತಿದ್ದಂತ್ಲೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಂದ ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತ ಮನೆ ಹಾಗೂ ೧ ಸಾವಿರ ರೂಪಾಯಿ ಮಾಸಿಕ ಭತ್ಯೆ !

ಆಡಳಿತದಲ್ಲಿರುವಾಗ ಜನರ ಕೆಲಸವನ್ನು ಮಾಡದೇ ಇದ್ದರಿಂದ ರಾಜಕಾರಣಿಗಳು ಚುನಾವಣೆಯ ಸಮಯದಲ್ಲಿ ಈ ರೀತಿಯ ಆಮಿಷವನ್ನು ಒಡ್ಡುತ್ತಾರೆ. ಆದ್ದರಿಂದ ಜನರಿಗೂ ಇಂತಹವರ ವಿಷಯದಲ್ಲಿ ಯೋಗ್ಯ ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶ ಇದೆ !

ಅಲ್ಪಸಂಖ್ಯಾತರ ಓಲೈಕೆ ಮಾಡುವ ಮಮತಾ(ಬಾನೊ) ಇವರು ಬ್ರಾಹ್ಮಣರಿಗೂ ಇಷ್ಟು ಮಹತ್ವ ನೀಡುತ್ತಿದ್ದರೆ, ಇಲ್ಲಿಯವರೆಗೆ ಬ್ರಾಹ್ಮಣರಿಗೆ ಏಕೆ ಸಹಾಯ ಮಾಡಲಿಲ್ಲ ? ಈಗ ಬಂಗಾಲದಲ್ಲಿ ಮಮತಾ(ಬಾನೊ) ಮುಂದೆ ಭಾಜಪ ದೊಡ್ಡ ಸವಾಲಾಗಿರುವುದರಿಂದ ಬ್ರಾಹ್ಮಣ ಮತದಾರರು ಭಾಜಪದತ್ತ ಹೋಗದಿರಲಿ ಎಂಬ ಸ್ವಾರ್ಥವಿದೆ ಎಂಬುದು ತಿಳಿಯದಿರಲು ಜನರು ಅಷ್ಟು ದಡ್ಡರಲ್ಲ !

ಕೊಲಕತಾ – ಚುನಾವಣೆಯ ಎದುರಾಗುತ್ತಿದ್ದಂತೆ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬಂಗಾಲದ ಬ್ರಾಹ್ಮಣ ಅರ್ಚಕರಿಗೆ ಉಚಿತವಾಗಿ ಮನೆ ಹಾಗೂ ೧ ಸಾವಿರ ರೂಪಾಯಿ ತಿಂಗಳ ಭತ್ಯೆ ನೀಡುವಂತೆ ಘೋಷಿಸಿದ್ದಾರೆ. ಬಂಗಾಲದಲ್ಲಿ ೮ ಸಾವಿರ ಬ್ರಾಹ್ಮಣ ಅರ್ಚಕರು ಇದ್ದಾರೆ. ಈ ಮೂಲಕ ಬ್ಯಾನರ್ಜಿಯವರು ರಾಜ್ಯದ ಬ್ರಾಹ್ಮಣ ಮತದಾರರನ್ನು ತಮ್ಮತ್ತ ಆಕರ್ಷಿಸಲು ಪ್ರಯತ್ನಿಸಿತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಮಮತಾ ಬ್ಯಾನರ್ಜಿಯವರು ‘ರಾಷ್ಟ್ರೀಯ ಹಿಂದಿ ದಿನ’ದ ನಿಮಿತ್ತ ‘ನಾವು ಎಲ್ಲ ಭಾಷೆಗಳನ್ನು ಗೌರವಿಸುತ್ತೇವೆ’, ಎಂದು ಹೇಳುತ್ತಾ ಬಂಗಾಲ ಸರಕಾರದಿಂದ ‘ಹಿಂದಿ ಅಕಾದಮಿ’ ಹಾಗೂ ‘ದಲಿತ ಸಾಹಿತ್ಯ ಅಕಾದಮಿ’ಯ ಸ್ಥಾಪನೆಯನ್ನು ಮಾಡಲಾಗುವುದು ಎಂದು ಘೋಷಿಸಿದ್ದರು.