೨೦೧೫ ರಿಂದ ೨೦೧೯ ಈ ಕಾಲಾವಧಿಯಲ್ಲಿ ಬಹುಕೋಟಿ ರೂಪಾಯಿಯ ಬ್ಯಾಂಕ್ ಹಗರಣಗಳ ೩೮ ಆರೋಪಿಗಳು ದೇಶದಿಂದ ಪರಾರಿಯಾಗಿದ್ದಾರೆ ! – ಕೇಂದ್ರ ಸರಕಾರದ ಖುಲಾಸೆ

  • ಈ ಆರೋಪಿಗಳನ್ನು ಪರಾರಿಯಾಗಲು ಸಹಾಯ ಮಾಡಿದವರ ಹಾಗೂ ನಿರ್ಲಕ್ಷ್ಯ ತೋರಿದವರ ಪೈಕಿ ಎಷ್ಟು ಜನರ ಮೇಲೆ ಸರಕಾರ ಇಲ್ಲಿಯವರೆಗೆ ಕ್ರಮ ಕೈಗೊಂಡಿದೆ, ಇದೂ ಕೂಡಾ ಹೇಳಬೇಕು !

  • ಬಹುಕೋಟಿ ರೂಪಾಯಿಗಳ ಹಗರಣಗಳನ್ನು ಮಾಡಿ ಆರೋಪಿಗಳು ದೇಶದಿಂದ ಪರಾರಿಯಾಗುತ್ತಾರೆ, ಇದು ತನಿಖಾ ತಂಡಗಳಿಗೆ ನಾಚಿಕೆಗೇಡು !

ನವ ದೆಹಲಿ – ೧ ಜನವರಿ ೨೦೧೫ ರಿಂದ ೩೧ ಡಿಸೆಂಬರ ೨೦೧೯ ರ ಕಾಲಾವಧಿಯಲ್ಲಿ ಬ್ಯಾಂಕ್ ಹಗರಣಗಳ ೩೮ ಆರೋಪಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಸಿಬಿಐ ಯಾವ ಬ್ಯಾಂಕ್ ಹಗರಣಗಳ ತನಿಖೆಯನ್ನು ಮಾಡುತ್ತಿದೆಯೋ, ಅದರ ಆರೋಪಿಗಳೇ ಇವರು ಎಂದು ಕೇಂದ್ರ ಹಣಕಾಸು ಸಚಿವ ಅನುರಾಗ ಠಾಕುರ್ ಇವರು ಸಂಸತ್ತಿನಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ಈ ಆರೋಪಿಗಳಲ್ಲಿ ೯ ಸಾವಿರ ಕೋಟಿ ರೂಪಾಯಿಯ ಹಗರಣ ಮಾಡಿದ ವಿಜಯ ಮಲ್ಯಾ, ೧೨ ಸಾವಿರ ಕೋಟಿ ರೂಪಾಯಿ ಹಗರಣ ಮಾಡಿದ ಮೇಹುಲ್ ಚೋಕ್ಸಿ, ೧೪ ಸಾವಿರ ಕೋಟಿ ರೂಪಾಯಿಗಳ ಹಗರಣ ಮಾಡಿ ಲಂಡನ್‌ಗೆ ಪರಾರಿಯಾದ ವಜ್ರ ವ್ಯಾಪಾರಿ ನಿರವ್ ಮೋದಿ ಹಾಗೂ ಅವರ ಕುಟುಂಬದ ಕೆಲವರು ಸಹಭಾಗಿಯಾಗಿದ್ದಾರೆ.

ಜಾರಿ ನಿರ್ದೇಶನಾಲಯವು ೨೦ ಆರೋಪಿಗಳ ವಿರುದ್ಧ ‘ರೆಡ್ ಕಾರ್ನ್‌ರ’ ನೋಟಿಸ್ ಅನ್ನು ಜಾರಿಗೊಳಿಸಲು ‘ಇಂಟರ್‌ಪೋಲ್’ ಬಳಿ ವಿನಂತಿಸಿದ್ದರೇ, ೧೪ ಆರೋಪಿಗಳನ್ನು ಹಸ್ತಾಂತರಿಸಲು ವಿವಿಧ ದೇಶಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ.