|
ಲಕ್ಷ್ಮಣಪುರಿ – ಆಗ್ರಾದಲ್ಲಿ ನಿರ್ಮಿಸಲಾಗುವ ಸಂಗ್ರಹಾಲಯಕ್ಕೆ ‘ಮೊಘಲ್ ಮ್ಯೂಸಿಯಮ್’ ಅಲ್ಲ, ಛತ್ರಪತಿ ಶಿವಾಜಿ ಮಹಾರಾಜರ ಹೆಸರಿಡಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಘೋಷಣೆ ಮಾಡಿದರು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಇವರಿಗೆ ಆದೇಶವನ್ನು ನೀಡಿದ್ದಾರೆ. ಈ ಸಂಗ್ರಹಾಲಯದ ಕಟ್ಟಡ ಕೆಲಸ ನಡೆಯುತ್ತಿದೆ. ೧೫೦ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ತಾಜ್ ಮಹಲ್‌ನ ಪೂರ್ವದ್ವಾರದ ಬಳಿ ಈ ಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ಈ ಮೊಘಲ್ ಸಂಗ್ರಹಾಲಯದ ನಿರ್ಮಾಣವನ್ನು ಅಂದಿನ ಸಮಾಜವಾದಿ ಪಕ್ಷದ ಆಡಳಿತದಲ್ಲಿ ಆರಂಭಿಸಿತ್ತು. (ಅಂದಿನ ಸಮಾಜವಾದಿ ಪಕ್ಷದ ಗುಲಾಮಗಿರಿ ಮಾನಸಿಕತೆ ! ಇಂತಹ ಸರಕಾರ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿ ಇತ್ತು, ಇದು ಹಿಂದೂಗಳ ದೌರ್ಭಾಗ್ಯವೇ ಆಗಿದೆ ! – ಸಂಪಾದಕರು)
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಉತ್ತರಪ್ರದೇಶ ಸರಕಾರ ರಾಷ್ಟ್ರವಾದಿ ವಿಚಾರಗಳನ್ನು ಪ್ರೋತ್ಸಾಹಿಸುತ್ತದೆ. ಆದ್ದರಿಂದ ದಾಸ್ಯತನದ ಮಾನಸಿಕತೆಯ ಪ್ರತೀಕಗಳ ಬದಲು ರಾಷ್ಟ್ರದ ಗೌರವವನ್ನು ಹೆಚ್ಚಿಸುವ ವಿಷಯಗಳಿಗೆ ಆದ್ಯತೆ ನೀಡುವುದು ಅಗತ್ಯವಿದೆ. ಮೊಘಲರು ನಮ್ಮ ನಾಯಕರಾಗಲು ಸಾಧ್ಯವಿಲ್ಲ. ಛತ್ರಪತಿ ಶಿವಾಜಿ ಮಹಾರಾಜರೇ ನಮ್ಮ ನಿಜವಾದ ನಾಯಕರಾಗಿದ್ದಾರೆ” ಎಂದು ಹೇಳಿದರು.
ಮರಾಠಾ ಸಾಮ್ರಾಜ್ಯದ ಕಾಲದ ವಸ್ತುಗಳ ಪ್ರದರ್ಶನವನ್ನೂ ಹಾಕಲಾಗುವುದು !
ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿಗನುಸಾರ ಈ ಸಂಗ್ರಹಾಲಯದಲ್ಲಿ ಮೊಘಲರ ಕಾಲದ ವಸ್ತು ಹಾಗೂ ದಾಖಲೆಗಳ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜ ಸಹಿತ ಸಂಪೂರ್ಣ ಮರಾಠಾ ಸಾಮ್ರಾಜ್ಯ ಕಾಲದ ಅನೇಕ ವಸ್ತುಗಳ ಪ್ರದರ್ಶನಗಳನ್ನೂ ಇಡಲಾಗುವುದು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಮನಃಪೂರ್ವಕವಾಗಿ ಅಭಿನಂದನೆ ! – ಭಾಜಪದ ಶಾಸಕ ಉದಯನರಾಜೆ ಭೋಸಲೆಛತ್ರಪತಿ ಶಿವಾಜಿ ಮಹಾರಾಜರ ವಂಶಜರಾದ ಭಾಜಪದ ಶಾಸಕ ಉದಯನರಾಜೆ ಭೋಸಲೆ ಇವರು ಟ್ವೀಟ್ ಮಾಡುತ್ತಾ ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಉದಯನರಾಜೆ ಭೋಸಲೆ ಇವರು ತಮ್ಮ ಟ್ವೀಟ್‌ನಲ್ಲಿ, ‘ಆಗ್ರಾದಲ್ಲಿಯ ಔರಂಗಜೇಬ್‌ನ ಆಸ್ಥಾನದಿಂದ ಛತ್ರಪತಿ ಶಿವಾಜಿ ಮಹಾರಾಜರು ಪ್ರಪ್ರಥಮಬಾರಿ ಸ್ವಾತಂತ್ರ್ಯಕ್ಕಾಗಿ ಘರ್ಜಿಸಿದ್ದರು. ಅವರ ಪಾದಸ್ಪರ್ಶದಿಂದ ಪಾವನವಾಗಿದ್ದ ಆಗ್ರಾ ನಗರದಲ್ಲಿ ‘ಛತ್ರಪತಿ ಶಿವಾಜಿ ಮಹಾರಾಜರ ಸಂಗ್ರಹಾಲಯ’ದ ಸ್ಥಾಪನೆ ಇದು ಐತಿಹಾಸಿಕ ನಿರ್ಧಾರವಾಗಿದ್ದು ಇಡೀ ರಾಷ್ಟ್ರಕ್ಕೆ ಅಭಿಮಾನದ ಸಂಗತಿಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಮನಃ ಪೂರ್ವಕವಾಗಿ ಅಭಿನಂದನೆಗಳು’ ಎಂದು ಹೇಳಿದ್ದಾರೆ. |
छत्रपती शिवाजी महाराजांनी स्वातंत्र्याचा पहिला हुंकार दिला तो आग्य्रातल्या औरंगजेबाच्या दरबारातून. महाराजांनी याच दरबारातल्या अपमानाचा बदला घेवून अखंड हिंदुस्तानावर राज्य केलं. pic.twitter.com/8VzUycltWa
— Chhatrapati Udayanraje Bhonsle (@Chh_Udayanraje) September 15, 2020