ಸನಾತನ ಸಂಸ್ಥೆಯ ೫ ಫೇಸ್‌ಬುಕ್ ಪುಟಗಳು ಒಮ್ಮೆಲೆ ಬಂದ್
ಸಪ್ಟೆಂಬರ್ ೨ ರಾತ್ರಿ ೧೧.೫೭ ರಿಂದ ಸನಾತನ ಸಂಸ್ಥೆಯ ಫೇಸ್‌ಬುಕ್‌ನ ಅಧಿಕೃತ ‘ಸನಾತನ ಸಂಸ್ಥೆ, ‘ಸನಾತನ ಸಂಸ್ಥೆ ಆಂಗ್ಲ, ಸನಾತನದ ‘ಪ್ರೊಫೈಲ್ ಪೇಜ್, ಸನಾತನ ಸಂಸ್ಥೆ ಬೆಳಗಾವ ಹಾಗೂ SSKarnataka ಹೀಗೆ ಒಟ್ಟು ೫ ಪುಟಗಳು ಇದ್ದಕ್ಕಿದ್ದಂತೆ ಬಂದ್ ಆದವು. ಈ ಫೇಸ್‌ಬುಕ್ ಪುಟಗಳಿಂದ ನಿಯಮಿತವಾಗಿ ಧರ್ಮ ಶಾಸ್ತ್ರ, ಅಧ್ಯಾತ್ಮ, ಸಾಧನೆ ಇತ್ಯಾದಿ ವಿಷಯಗಳ ಬಗ್ಗೆ ಪೋಸ್ಟ್ ಮಾಡಲಾಗುತ್ತಿತ್ತು.