ಇಲ್ಲಿಯವರೆಗೆ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ೧೨೨ ಭಯೋತ್ಪಾದಕರನ್ನು ಬಂಧಿಸಲಾಗಿದೆ

ಇಂತಹವರ ಮೇಲೆ ನ್ಯಾಯಾಲಯದಲ್ಲಿ ಶೀಘ್ರವಾಗಿ ಮೊಕದ್ದಮೆಯನ್ನು ಹೂಡಿ ಗಲ್ಲಿಗೇರಿಸುವ ಶಿಕ್ಷೆಯನ್ನು ನೀಡುವಂತೆ ಸರಕಾರ ಪ್ರಯತ್ನಿಸಬೇಕು ಇಲ್ಲದಿದ್ದರೆ ಅವರು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಾರೆ ಹಾಗೂ ದೇಶದಲ್ಲಿ ಚಟುವಟಿಕೆಗಳನ್ನು ಮಾಡುತ್ತಾರೆ !

ಗೃಹ ಸಚಿವ ಜಿ. ಕಿಶನ್ ರೆಡ್ಡಿ

ನವ ದೆಹಲಿ – ದಕ್ಷಿಣ ಭಾರತದ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ತಮಿಳನಾಡು ರಾಜ್ಯಗಳಿಂದ ಇಸ್ಲಾಮಿಕ್ ಸ್ಟೇಟ್‌ನ ೧೨೨ ಭಯೋತ್ಪಾದಕರನ್ನು ೧೭ ಅಪರಾಧಗಳಲ್ಲಿ ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ದಳದವರು (ಎನ್.ಐ.ಎ.ನಿಂದ) ಭಯೋತ್ಪಾದಕರನ್ನು ಬಂಧಿಸಿದ್ದಾರೆ, ಎಂದು ಕೇಂದ್ರ ಗೃಹ ಸಚಿವ ಜಿ. ಕಿಶನ್ ರೆಡ್ಡಿಯವರು ರಾಜ್ಯಸಭೆಯಲ್ಲಿ ಲಿಖಿತ ಮಾಹಿತಿ ನೀಡಿದ್ದಾರೆ. ಈ ರಾಜ್ಯಗಳನ್ನು ಹೊರತುಪಡಿಸಿ ಜಮ್ಮು-ಕಾಶ್ಮೀರ, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಬಂಗಾಲ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಸಕ್ರಿಯವಾಗಿದೆ, ಎಂದೂ ಸಹ ಮಾಹಿತಯನ್ನು ನೀಡಿದರು. ಭಾರತವು ಈ ಹಿಂದೆಯೇ ಇಸ್ಲಾಮಿಕ್ ಸ್ಟೇಟ್ ಹಾಗೂ ಅದರೊಂದಿಗೆ ಸಂಪರ್ಕಹೊಂದಿರುವ ಇತರ ಸಂಘಟನೆಗಳ ಮೇಲೆ ನಿಷೇಧ ಹೇರಿದೆ.
ರೆಡ್ಡಿ ತಮ್ಮ ಮಾತನ್ನು ಮುಂದುವರೆಸುತ್ತಾ, ಭಯೋತ್ಪಾದಕರಿಗೆ ಆರ್ಥಿಕ ಸಹಾಯ ಹೇಗೆ ಸಿಗುತ್ತದೆ, ಅವರಿಗೆ ಭಯೋತ್ಪಾದಕ ಕಾರ್ಯಾಚರಣೆಯನ್ನು ಮಾಡಲು ವಿದೇಶದಿಂದ ಹೇಗೆ ಆದೇಶವನ್ನು ನೀಡಲಾಗುತ್ತದೆ ಹಾಗೂ ಹೇಗೆ ಸಹಾಯ ಮಾಡಲಾಗುತ್ತದೆ, ಎಂಬುದರ ಬಗೆಗಿನ ಮಾಹಿತಿ ಇದೆ. ಈ ಭಯೋತ್ಪಾದಕರು ಇಂಟರ್‌ನೆಟ್‌ನ ಸಹಾಯದಿಂದ ಪರಸ್ಪರರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದು ಹೇಳಿದರು.