ಲಡಾಖ್‌ನಲ್ಲಿ ಚೀನಾದ ಸೈನಿಕನನ್ನು ಸೆರೆಹಿಡಿದ ಭಾರತೀಯ ಸೇನೆ
ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (ಪಿಎಲ್‌ಎ) ಯೋಧನನ್ನು ಇಲ್ಲಿನ ಡೆಮ್‌ಚೋಕ್ ಪ್ರದೇಶದಲ್ಲಿ ಗಡಿಯಲ್ಲಿ ಭಾರತೀಯ ಸೈನ್ಯವು ಸೆರೆಹಿಡಿದಿದೆ. ಆತನ ಹೆಸರು ವಾಂಗ್ ಯಾ ಲಾಂಗ್ ಎಂದಿದೆ. ಆತ ಜೆಜಿಯಾಂಗ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಆತನ ಬಳಿ ಸಿವಿಲ್ ಮತ್ತು ಮಿಲಿಟರಿ ದಾಖಲೆಗಳು ಪತ್ತೆಯಾಗಿವೆ.