ರಿವಾ (ಮಧ್ಯಪ್ರದೇಶ) ದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ೫ ಪೊಲೀಸರಿಂದ ೧೦ ದಿನಗಳ ಕಾಲ ಸಾಮೂಹಿಕ ಅತ್ಯಾಚಾರ – ಮಹಿಳೆಯ ಆರೋಪ

ಈ ಘಟನೆಯು ನಿಜ ಎಂದಾದಲ್ಲಿ, ಸಂಬಂಧಪಟ್ಟ ಪೊಲೀಸರನ್ನು ತಕ್ಷಣ ವಜಾ ಮಾಡಬೇಕು ಹಾಗೂ ಅವರಿಗೆ ಗಲ್ಲು ಶಿಕ್ಷೆಯೇ ಆಗುವಂತೆ ಸರಕಾರ ಪ್ರಯತ್ನಿಸಬೇಕು !

ಪ್ರಾತಿನಿಧಿಕ ಚಿತ್ರ

ರಿವಾ (ಮಧ್ಯಪ್ರದೇಶ) – ಇಲ್ಲಿನ ಪೊಲೀಸ್ ಕಸ್ಟಡಿಯಲ್ಲಿ ೫ ಪೊಲೀಸರು ೧೦ ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪಿಸಿದ್ದಾಳೆ. ಮೇ ೯ ರಿಂದ ಮೇ ೨೧ ರವರೆಗೆ ಈ ಪ್ರಸಂಗ ಘಟಿಸಿದೆ ಎಂದು ಅವಳು ಹೇಳಿದ್ದಾಳೆ. ಈ ಮಹಿಳೆಯು ಹತ್ಯೆಯ ಪ್ರಕರಣದ ಆರೋಪಿಯಾಗಿದ್ದಾಳೆ. ಸಧ್ಯ ಆಕೆ ಸೆರೆಮನೆಯಲ್ಲಿದ್ದಾಳೆ. ಅಕ್ಟೋಬರ್ ೧೦ ರಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ನ್ಯಾಯವಾದಿ ತಂಡವು ಸೆರೆಮನೆಯ ಪರಿಶೀಲನೆಗೆ ಹೋದಾಗ ಈ ಘಟನೆಯು ಬೆಳಕಿಗೆ ಬಂದಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಅತ್ಯಾಚಾರವಾದ ವಿಷಯವನ್ನು ಪೀಡಿತೆಯು ಮೂರು ತಿಂಗಳ ಹಿಂದೆಯೇ ಜೈಲು ಅಧೀಕ್ಷಕರಿಗೆ ತಿಳಿಸಿದ್ದಳು. ಅತ್ಯಾಚಾರದ ಘಟನೆಯ ಬಗ್ಗೆ ಮಹಿಳೆ ಹೇಳಿದ್ದಳು ಎಂಬುದನ್ನು ಅಧೀಕ್ಷಕರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. (ಹೀಗಿದ್ದಲ್ಲಿ, ಸಂಬಂಧಪಟ್ಟವರ ವಿರುದ್ಧ ಜೈಲು ಅಧೀಕ್ಷಕರು ಯಾವ ಕ್ರಮ ಕೈಗೊಂಡಿದ್ದಾರೆ, ಎಂಬುದನ್ನು ಸಹ ಅವರು ತಿಳಿಸಬೇಕು! – ಸಂಪಾದಕರು)