‘ಸಮಾನ ನಾಗರಿಕ ಕಾನೂನಿನ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸುವೆವು !’(ಅಂತೆ) – ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್

ಯಾವಾಗಲೂ ಸಮಾನತೆಯ ರಾಗ ಎಳೆಯುವ ಪ್ರಗತಿ(ಅಧೋಗತಿ)ಪರರು ಈಗ ಎಂದಿನಂತೆ ಅನುಕೂಲಕರ ಮೌನತಾಳಿ ‘ಜಾತ್ಯತೀತತೆಯ’ ಗೂಡಿನಲ್ಲಿ ಹೋಗಿ ಕುಳಿತುಕೊಳ್ಳುವರು !

ಜಾಫರ್‌ಯಾಬ್ ಜಿಲಾನಿ

ಲಕ್ಷ್ಮಣಪುರಿ (ಲಕ್ನೋ) – ಭಾರತವು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿಂದ ತುಂಬಿದ ದೇಶವಾಗಿದೆ. ಇಲ್ಲಿ ಸಮಾನ ನಾಗರಿಕ ಕಾನೂನನ್ನು ಅನ್ವಯಿಸುವುದು ತಪ್ಪಾಗಿದೆ. ಆದ್ದರಿಂದ ಸಮಾಜದ ವಿವಿಧ ಅಂಗಗಳನ್ನು ಸಂಪರ್ಕಿಸಿ, ನಾವು ಈಗಾಗಲೇ ಈ ಕಾನೂನಿನ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲಿದ್ದೇವೆ, ಎಂದು ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ನ ಸದಸ್ಯ ಜಾಫರ್‌ಯಾಬ್ ಜಿಲಾನಿ ಅವರು ಇತ್ತೀಚೆಗೆ ‘ಬೋರ್ಡ್’ನ ಸಭೆಯಲ್ಲಿ ಹೇಳಿದರು.

‘ಸಮಾನ ನಾಗರಿಕ ಕಾನೂನು ಮತ್ತು ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ೧೧ ಮತ್ತು ೧೩ ರಂದು ನಡೆದ ಸಭೆಯಲ್ಲಿ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆಡಳಿತಾರೂಢ ಬಿಜೆಪಿಯ ದೃಷ್ಟಿಯಿಂದ ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರುವುದು ಮಾತ್ರ ಉಳಿದಿದೆ ಹಾಗೂ ಈ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿದೆ.’ ಎಂದು ಜಿಲಾನಿ ಹೇಳಿದರು.

ಬಾಬರಿ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸುವ ನಿರ್ಧಾರವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು

ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ಸಿಬಿಐ ನ್ಯಾಯಾಲಯದ ನಿರ್ಧಾರವನ್ನು ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದೂ ಜಿಲಾನಿ ಸ್ಪಷ್ಟ ಪಡಿಸಿದರು.