ಚೀನಾದ ‘ಶಾವೊಮಿ’ ಸಂಚಾರವಾಣಿಯಲ್ಲಿ ‘ಅರುಣಾಚಲ ಪ್ರದೇಶ’ವನ್ನು ಚೀನಾದ ಭಾಗವೆಂದು ತೋರಿಸಲಾಗುತ್ತಿದೆ !

ಭಾರತೀಯರು ಇಂತಹ ಚೀನೀ ಕಂಪನಿಗಳನ್ನು ಬಹಿಷ್ಕಾರವನ್ನೇ ಹಾಕಿಬಿಡಬೇಕು, ಹಾಗೂ ಕೇಂದ್ರ ಸರಕಾರವು ಭಾರತದಲ್ಲಿ ಈ ಕಂಪನಿಯನ್ನೇ ನಿಷೇಧಿಸಬೇಕು !

ನವ ದೆಹಲಿ – ಸಂಚಾರವಾಣಿಗಳನ್ನು ತಯಾರಿಸುವ ಚೀನಾದ ಕಂಪನಿ ‘ಶಾವೊಮಿ’ಯ ಸಂಚಾರವಾಣಿಯಿಂದ ಅರುಣಾಚಲ ಪ್ರದೇಶದ ಹವಾಮಾನ ವರದಿಯ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಿದಾಗ ಅದು ಯಾವುದೇ ಮಾಹಿತಿಯನ್ನು ತೋರಿಸಲಿಲ್ಲ. ಅದೇರೀತಿ ರಾಜ್ಯದ ರಾಜಧಾನಿ ‘ಇಟಾನಗರ’ದ ಹೆಸರನ್ನು ಸಹ ಬೆರಳಚ್ಚು ಮಾಡಿದರೂ ಯಾವುದೇ ಉತ್ತರ ಸಿಗುತ್ತಿಲ್ಲ. ಈ ಸಂಚಾರವಾಣಿಯೊಂದಿಗೆ ಸಿಗುವ ‘ವೆದರ್ ಆಪ್’(ಹವಾಮಾನದ ಮಾಹಿತಿ ನಿಡುವ ಆಪ್)ನಲ್ಲಿ ಹುಡುಕಲು ಪ್ರಯತ್ನಿಸಿದಾಗ ಹೀಗೆ ಕಾಣುತ್ತದೆ.

ಇಂಜಿನಿಯರ್ ಆಗಿರುವ ಗೌರವ್ ಚೌಧರಿಯವರು ತಮ್ಮ ಟ್ವಿಟರ್‌ನಲ್ಲಿ ‘ಸ್ಕ್ರೀನ್‌ಶಾಟ್’ ಶೇರ್ ಮಾಡುತ್ತಾ ಶಿಯೋಮಿ ಕಂಪನಿಯಿಂದ ಉತ್ತರ ಕೇಳಿದ್ದಾರೆ. ಚೌಧರಿಯವರು, ‘ಕೇವಲ ಶಾವೊಮಿ ಮಾತ್ರವಲ್ಲ, ಭಾರತ ಸರಕಾರವೂ ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕಾಗಿದೆ.’ ಎಂದು ಹೇಳಿದರು. ಇದರ ನಂತರ ‘ಶಿಯೋಮಿ ಜವಾಬ್ ದೋ’ ಎಂಬ ‘ಹ್ಯಾಶ್‌ಟ್ಯಾಗ್’ ಟ್ವಿಟರ್‌ನಲ್ಲಿ ‘ಟ್ರೆಂಡ್’ ಮಾಡಲಾಯಿತು.