ಬಿಜೆಪಿಯ ಮಹಿಳಾ ಅಭ್ಯರ್ಥಿಯನ್ನು ‘ಐಟಂ’ ಎಂದು ಉಲ್ಲೇಖಿಸಿದ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕಮಲನಾಥ !

ಭಾಜಪದಿಂದ ಚುನಾವಣಾ ಆಯೋಗಕ್ಕೆ ದೂರು

  • ಮಹಿಳೆಯರನ್ನು ಅವಮಾನಿಸುವ ಕಾಂಗ್ರೆಸ್ ನಾಯಕ ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರು, ಇದಕ್ಕಿಂತ ದೊಡ್ಡ ದೌರ್ಭಾಗ್ಯ ಜನತೆಗೆ ಇನ್ನೇನಿರಬಹುದು ?

  • ಕಾಂಗ್ರೆಸ್‌ನ ಅಧ್ಯಕ್ಷ ಪದವಿಯಲ್ಲಿ ಓರ್ವ ಮಹಿಳೆಯಿರುವಾಗಲೇ ಪಕ್ಷದ ನಾಯಕರು ಮಹಿಳೆಯರ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡುತ್ತಿರುವಾಗ ಸೋನಿಯಾ ಗಾಂಧಿಯವರು ಕಮಲನಾಥರ ವಿರುದ್ಧ ಕಠಿಣಕ್ರಮ ಕೈಗೊಳ್ಳುವುದು ಅಪೇಕ್ಷಿತವಿತ್ತು. ಅವರು ಇದರ ಬಗ್ಗೆ ಯಾವುದೇ ಕೃತಿ ಮಾಡಿಲ್ಲ. ಇದರಿಂದ ಮಹಿಳೆಯರನ್ನು ಗೌರವಿಸುವುದಕ್ಕಿಂತ ಕಾಂಗ್ರೆಸ್‌ಗೆ ತನ್ನ ನಾಯಕರೇ ಹೆಚ್ಚು ಮಹತ್ವದವರೆನಿಸುತ್ತದೆ ಎಂಬುದು ಗಮನಕ್ಕೆ ಬರುತ್ತದೆ.

ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕಮಲನಾಥ ಹಾಗು ಬಿಜೆಪಿ ಅಭ್ಯರ್ಥಿ ಇಮರತಿದೇವಿ

ಭೋಪಾಲ (ಮಧ್ಯಪ್ರದೇಶ) – ಕಾಂಗ್ರೆಸ್‌ನ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥ ಇವರು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವಾಗ ಬಿಜೆಪಿ ಅಭ್ಯರ್ಥಿ ಇಮರತಿದೇವಿಯವರನ್ನು ‘ಐಟಂ’ ಎಂದು ಸಂಬೋಧಿಸಿದ್ದರು. ಅದಕ್ಕಾಗಿ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಸೌಜನ್ಯ : NDTV India

ಈ ಘಟನೆಯನ್ನು ಖಂಡಿಸಲು ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಶಿವರಾಜ ಸಿಂಗ ಚೌಹಾಣರು ಅಕ್ಟೋಬರ್ ೧೯ ರಂದು ಎರಡು ಗಂಟೆಗಳ ಮೌನ ಪಾಲಿಸಿದರು. ಮತ್ತೊಂದೆಡೆ ಕಮಲನಾಥರು ಸ್ಪಷ್ಟೀಕರಣ ನೀಡುವಾಗ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. (ಇದರಿಂದ ಕಮಲನಾಥರ ದುರಹಂಕಾರವೇ (ಉದ್ಧಟತನ) ಕಂಡುಬರುತ್ತದೆ ! – ಸಂಪಾದಕ) ಅವರು, “ಭಾಷಣದ ಸಮಯದಲ್ಲಿ ನನಗೆ ಇಮರತಿದೇವಿ ಹೆಸರು ನೆನಪಾಗಲಿಲ್ಲ. ಅದಕ್ಕಾಗಿಯೇ ಇದನ್ನು ಎಲ್ಲರನ್ನು ಉದ್ದೇಶಿಸಿ ‘ಐಟಂ’ ಎಂದು ಹೇಳಿದೆ. (ಇಂತಹ ಹಾಸ್ಯಾಸ್ಪದ ಸ್ಪಷ್ಟೀಕರಣವನ್ನು ಯಾರು ನಂಬುತ್ತಾರೆ ? ಇಮರತಿ ದೇವಿಯವರ ಹೆಸರು ನೆನಪಾಗದಿದ್ದರೆ, ಅಲ್ಲಿ ಉಪಸ್ಥಿತರಿದ್ದ ಇತರರಲ್ಲಿ ಕೇಳಬಹುದಿತ್ತಲ್ಲ್ಲ ? ಇಂತಹ ನೀತಿಶೂನ್ಯ ರಾಜಕಾರಣಿಗಳ ನಿಜಪರಿಚಯ ಜನರಿಗಾಗಿದೆ ! – ಸಂಪಾದಕರು)