ಹೊಸ ದೆಹಲಿ – ಭಾರತವು ತನ್ನ ಒಂದೊಂದು ಇಂಚಿನ ಭೂಮಿಗಾಗಿ ಜಾಗೃತವಾಗಿದೆ. ಅದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಸೈನ್ಯವು ಯುದ್ಧಕ್ಕಾಗಿ ಸಿದ್ಧವಿದೆ. ಸೈನ್ಯವು ಯುದ್ಧಕ್ಕಾಗಿ ಸಜ್ಜಾಗಿರಿಸುವುದರ ಹಿಂದಿನ ಉದ್ದೇಶವೆಂದರೆ, ಯಾವುದೇ ಸ್ವರೂಪದ ಆಕ್ರಮಣಕ್ಕಾಗಿ ಸಿದ್ಧರಿರುವುದು. ನಾನು ಇದನ್ನು ಯಾವುದೇ ವಿಶೇಷ ಪ್ರಸಂಗದ ಸಂದರ್ಭದಲ್ಲಿ ಹೇಳುತ್ತಿಲ್ಲ; ಆದರೆ ಭಾರತದ ಸಂರಕ್ಷಣೆಗಾಗಿ ಸೈನ್ಯವು ಯಾವಾಗಲೂ ಸಿದ್ಧವಿದೆ. ಜಾಗತಿಕ ಸಮುದಾಯವೂ ಭಾರತವನ್ನು ಸಮರ್ಥಿಸಿದೆ. ನಮ್ಮ ಧ್ಯೇಯವು ಯೋಗ್ಯ ಮತ್ತು ಸಶಕ್ತವಾಗಿದೆ. ೧೩೦ ಕೋಟಿ ಜನರ ಈ ದೇಶವು ಯಾರಿಗೂ ತಲೆಬಾಗುವುದಿಲ್ಲ, ಎಂದು ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರು ಒಂದು ವಾರ್ತಾವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.
Indian Army is prepared for any eventuality, says Shah after Xi asks Chinese troops to get ready for warhttps://t.co/0TvdZmDnli#AmitShah
— Zee News English (@ZeeNewsEnglish) October 18, 2020
ಇತ್ತೀಚೆಗಷ್ಟೇ ಚೀನಾದ ರಾಷ್ಟ್ರಪತಿ ಶೀ ಜಿನ್‌ಪಿಂಗ್ ಇವರು ಚೀನಾದ ಸೈನ್ಯಕ್ಕೆ ಯುದ್ಧಕ್ಕಾಗಿ ತಯಾರಿರುವಂತೆ ಆದೇಶ ನೀಡಿದ್ದಾರೆ. ಅದರ ಬಗ್ಗೆ ಶಹಾ ಇವರಿಗೆ ಈ ಸಂದರ್ಶನದಲ್ಲಿ ಪ್ರಶ್ನೆಯನ್ನು ಕೇಳಿದಾಗ ಅವರು ಮೇಲಿನಂತೆ ಉತ್ತರಿಸಿದರು.
ರಾಜ್ಯಪಾಲ ಕೋಶ್ಯಾರಿ ಇವರ ಅಯೋಗ್ಯ ನುಡಿ ! – ಅಮಿತ ಶಹಾ
ಮಹಾರಾಷ್ಟ್ರದ ರಾಜ್ಯಪಾಲ ಭಗತಸಿಂಹ ಕೋಶ್ಯಾರಿ ಇವರು ಶಿವಸೇನಾ ಪಕ್ಷಪ್ರಮುಖ ಮತ್ತು ಮುಖ್ಯಮಂತ್ರಿ ಉದ್ಧವ ಠಾಕರೆ ಇವರಿಗೆ ರಾಜ್ಯದಲ್ಲಿನ ದೇವಸ್ಥಾನಗಳನ್ನು ತೆರೆಯುವ ಕುರಿತು ಬರೆದ ಪತ್ರವನ್ನು ನಾನು ಓದಿದ್ದೇನೆ. ಈ ಪತ್ರದಲ್ಲಿ ಕೋಶ್ಯಾರಿ ಇವರು ಕೆಲವು ಸಂದರ್ಭಗಳನ್ನು ನೀಡಿದ್ದಾರೆ. ಕೋಶ್ಯಾರಿ ಇವರು ಮಾತುಗಳನ್ನಾಡುವಾಗ ನಿಯಂತ್ರಣವನ್ನಿರಿಸಬೇಕು, ಅವರು ಬಳಸಿದ ಶಬ್ದಗಳು ಅಯೋಗ್ಯವಾಗಿದ್ದವು ಎಂಬುದನ್ನು ಕೇಂದ್ರೀಯ ಗೃಹಮಂತ್ರಿ ಅಮಿತ ಶಹಾ ಇವರು ಈ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಸ್ವೀಕರಿಸಿದರು.
ರಾಜ್ಯದಲ್ಲಿನ ದೇವಸ್ಥಾನಗಳು ಮುಚ್ಚಿದುದರಿಂದ ರಾಜ್ಯಪಾಲ ಕೋಶ್ಯಾರಿ ಇವರು ಮುಖ್ಯಮಂತ್ರಿ ಉದ್ಧವ ಠಾಕರೆ ಇವರಿಗೆ ಬರೆದ ಪತ್ರದಲ್ಲಿ ಉದ್ಧವ ಠಾಕರೆ ಇವರ ಹಿಂದುತ್ವದ ಕುರಿತು ಪ್ರಶ್ನೆಯನ್ನು ಕೇಳಿದ್ದರು. ಅದಕ್ಕೆ ಉದ್ಧವ ಠಾಕರೆ ಇವರೂ ಪ್ರತ್ಯುತ್ತರ ನೀಡುವಾಗ ‘ನಮಗೆ ಹಿಂದುತ್ವಕ್ಕಾಗಿ ನಿಮ್ಮ ಪ್ರಮಾಣಪತ್ರದ ಆವಶ್ಯಕತೆ ಇಲ್ಲ’, ಎಂದು ಹೇಳಿದ್ದರು.