ನವ ದೆಹಲಿ – ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಇವರು ಕಾಂಗ್ರೆಸ್‌ಗೆ ನಿಮಗೆ ಧೈರ್ಯವಿದ್ದರೆ, ಬಿಹಾರದ ಚುನಾವಣಾ ಘೋಷಣಾಪತ್ರದಲ್ಲಿ ‘೩೭೦’ ಅನ್ನು ಉಲ್ಲೇಖಿಸಬೇಕು ಎಂದು ಸವಾಲನ್ನು ನೀಡಿದ್ದಾರೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪುನಃಸ್ಥಾಪಿಸುವ ಬೇಡಿಕೆಯನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಅದರ ನಂತರ ಜಾವಡೇಕರ ಈ ಸವಾಲನ್ನು ನೀಡಿದ್ದಾರೆ.
೧. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಅಭಿವೃದ್ಧಿಯಾಗುತ್ತಿರುವುದು ಜನರಿಗೆ ಕಾಣಿಸುತ್ತಿದೆ, ಆದರೂ ಕಾಂಗ್ರೆಸ್ ಬಿಹಾರದಲ್ಲಿ ಮತಗಳನ್ನು ಪಡೆಯಲು ಪ್ರತ್ಯೇಕತಾವಾದಿಗಳ ಭಾಷೆಯನ್ನು ಮಾತನಾಡುತ್ತಿದೆ. ಕಾಂಗ್ರೆಸ್ಸಿನ ವಿಚಾರಗಳು ಸಂಕುಚಿತವಾಗಲು ಆರಂಭವಾಗಿದೆ; ಹಾಗಾಗಿ ಅವರು ಜನರ ಭಾವನೆಗಳ ವಿರುದ್ಧದ ನಿಲುವು ತಾಳುತ್ತಿದ್ದಾರೆ ಎಂದು ಜಾವಡೇಕರರು ಹೇಳಿದರು
೨. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳು ೩೭೦ ನೇ ವಿಧಿಗನುಸಾರ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನದ ಅಧಿಕಾರವನ್ನು ಪುನರ್ಸ್ಥಾಪಿಸಲು ‘ರಹಸ್ಯ ಠರಾವಿ’ನ ಮೂಲಕ ಒಟ್ಟಾಗಿದ್ದಾರೆ. ಆ ಬಗ್ಗೆ ಕಾಂಗ್ರೆಸ್ ಮುಖಂಡ ಪಿ. ಚಿದಂಬರಮ್ ಇವರು ‘ಕಾಶ್ಮೀರದ ವಿಶೇಷಾಧಿಕಾರವನ್ನು ಪುನರ್ಸ್ಥಾಪಿಸಲು ಕಾಂಗ್ರೆಸ್‌ಅನ್ನು ಬೆಂಬಲಿಸಿದ್ದಾರೆ. ಈ ಅಧಿಕಾರವನ್ನು ಸರಕಾರವು ನಿರಂಕುಶ ರೀತಿಯಲ್ಲಿ ಕಿತ್ತುಕೊಂಡಿದೆ’ ಎಂದು ಅವರು ಟ್ವೀಟ್ ಮಾಡಿ ಹೇಳಿದ್ದರು. ಅದನ್ನು ಸಹ ಜಾವಡೇಕರರು ಟೀಕಿಸಿದ್ದಾರೆ.