‘ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ವೇಶ್ಯೆಯೆಂದು ಪರಿಗಣಿಸಲಾಗುತ್ತದೆ !’(ಅಂತೆ)

ಇಲ್ಲಿಯ ದಲಿತರ ಪಕ್ಷವೆಂದು ಪರಿಗಣಿಸಲ್ಪಟ್ಟ ವಿದುಥಲೈ ಚಿರುಥಾಯಗಲ ಕಾಚಿ(ವಿಸಿಕೆ) ಪಕ್ಷದ ಮುಖಂಡ ಹಾಗೂ ಸಾಂಸದ ಥೋಲ್ ತಿರುಮಾವಲವನ್ ಅವರು ಪೆರಿಯಾರವಾದಿ ಸಮೂಹದಿಂದ ಆಯೋಜಿಸಲಾಗಿದ್ದ ಆನ್‌ಲೈನ್ ಚರ್ಚಾಕೂಟದಲ್ಲಿ ಹಿಂದೂ ಧರ್ಮಗ್ರಂಥ ಮನುಸ್ಮೃತಿಯ ಆಧಾರವನ್ನು ನೀಡುತ್ತಾ ‘ಹಿಂದೂ ಧರ್ಮದಲ್ಲಿ ವಿಶೇಷವಾಗಿ ಬ್ರಾಹ್ಮಣರಲ್ಲಿ ಮಹಿಳೆಯರನ್ನು ವೇಶ್ಯೆರೆಂದು ಪರಿಗಣಿಸಲಾಗುತ್ತದೆ.

ಸುಳ್ಳು ಹಾಗೂ ಅಯೋಗ್ಯ ವಾರ್ತೆ ಪ್ರಸಾರ ಮಾಡಿದ ‘ಆಜ್ ತಕ್’, ‘ಝೀ ನ್ಯೂಸ್’, ‘ಇಂಡಿಯಾ ಟಿವಿ’ ಹಾಗೂ ‘ನ್ಯೂಸ್ ೨೪’ ಇವುಗಳಿಗೆ ಕ್ಷಮೆಯಾಚಿಸುವಂತೆ ಎನ್.ಬಿ.ಎಸ್.ಎ. ನಿಂದ ಆದೇಶ.

ನಟ ಸುಶಾಂತ್ ಸಿಂಗ ರಜಪೂತ ಅವರ ಆತ್ಮಹತ್ಯೆ ಪ್ರಕರಣದಲ್ಲಿ ‘ಆಜ್ ತಕ್’ ಈ ಹಿಂದಿ ವಾರ್ತಾವಾಹಿನಿಯು ಸುಳ್ಳು ವಾರ್ತೆಯನ್ನು ಪ್ರಕಟಿಸಿದ್ದರಿಂದ ‘ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಸ್ಟೆಂಡರ್ಡ ಅಸೊಸಿಯೇಶನ್’ ಇದು (ಎನ್.ಬಿ.ಎಸ್.ಎ.ಯು) ಅಕ್ಟೋಬರ್ ೨೭ ರ ರಾತ್ರಿ ೮ ಗಂಟೆಗೆ ವಾರ್ತಾವಾಹಿನಿಗಳಿಗೆ ಕ್ಷಮೆಯಾಚಿಸುವಂತೆ ಹಾಗೆಯೇ ೧ ಲಕ್ಷ ರೂಪಾಯಿ ದಂಡ ಕಟ್ಟುವಂತೆ ಆದೇಶಿಸಿದೆ.

ಬಾಡಮೆರ್ (ರಾಜಸ್ಥಾನ)ದಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಶನ ಲಾಲ ಭೀಲ ಎಂಬ ೩೫ ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ರೋಶನ ಲಾಲನು ಅನೇಕ ದಿನಗಳಿಂದ ಗಡಿಯಲ್ಲಿರುವ ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದನು.

ಉತ್ತರ ಪ್ರದೇಶದ ಲಕ್ಷ್ಮಣಪುರಿ ಮತ್ತು ಹಮೀರಪುರದಲ್ಲಿ ಇಬ್ಬರು ಸಾಧುಗಳ ಹತ್ಯೆ

ಇಲ್ಲಿಯ ಮುಸ್ಕರಾ ಪ್ರದೇಶದ ಬಸಾಯಕ್ ಎಂಬಲ್ಲಿ ಸಿದ್ಧ ಬಾಬಾ ದೇವಾಲಯದ ಅರ್ಚಕ ಮಹಂತ್ ರತಿರಾಮ್ ಅವರ ಹತ್ಯೆ ಮಾಡಲಾಗಿದೆ. ಇದಲ್ಲದೆ, ಲಕ್ಷ್ಮಣಪುರಿ ಬಳಿಯ ಕಾಕೋರಿಯಲ್ಲಿಯೂ ಓರ್ವ ಸಾಧುವಿನ ಹತ್ಯೆ ಮಾಡಿ ಅವರ ದೇಹವನ್ನು ನೇತುಹಾಕಲಾಗಿದೆ.

ಜಂತರ್ ಮಂತರ್ (ನವ ದೆಹಲಿ)ನಲ್ಲಿ ‘ಲಕ್ಷ್ಮಿ ಬಾಂಬ್’ ಚಲನಚಿತ್ರದ ವಿರುದ್ಧ ‘ಯುನೈಟೆಡ್ ಹಿಂದೂ ಫ್ರಂಟ್’ ಆಂದೋಲನ

‘ಯುನೈಟೆಡ್ ಹಿಂದೂ ಫ್ರಂಟ್’ನ ಕಾರ್ಯಕರ್ತರು ಅಕ್ಟೋಬರ್ ೨೩ ರಂದು ನವ ದೆಹಲಿಯ ಜಂತರ್ ಮಂತರ್‌ನಲ್ಲಿ ‘ಲಕ್ಷ್ಮಿ ಬಾಂಬ್’ ಚಲನಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದರು. ಅವರು ಈ ಚಿತ್ರದ ಹೆಸರು ಮತ್ತು ‘ಲವ್ ಜಿಹಾದ್’ನ ಪ್ರಸಂಗವನ್ನು ಅಳಿಸಬೇಕೆಂದು ಒತ್ತಾಯಿಸಿದರು. ‘ಇದನ್ನು ಬದಲಾಯಿಸದಿದ್ದರೆ, ಬೃಹತ್ ಪ್ರಮಾಣದಲ್ಲಿ ವಿರೋಧ ನಡೆಸಲಾಗುವುದು’, ಎಂದು ಎಚ್ಚರಿಕೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ 18 ನೇ ವರ್ಧಂತ್ಯುತ್ಸವ ನಿಮಿತ್ತ ಆನ್‌ಲೈನ್ ವಿಶೇಷ ಧರ್ಮಸಂವಾದ !

ಧರ್ಮಶಿಕ್ಷಣ ಹಾಗೂ ಧರ್ಮಾಚರಣೆಯ ಅಭಾವದಿಂದಾಗಿ ದೇಶದಲ್ಲಿ ಹಿಂದೂ ಸಮಾಜ ಬಹುಸಂಖ್ಯಾತರಾಗಿದ್ದೂ ನಿರಂತರವಾಗಿ ಪೆಟ್ಟು ತಿನ್ನುತ್ತಿತ್ತು. ಇಂತಹ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಹಿಂದೂಗಳಿಗಾಗಿ ವಿವಿಧ ಮಾಧ್ಯಮದಿಂದ ಧರ್ಮಶಿಕ್ಷಣ ನೀಡಲು ಆರಂಭವಾಯಿತು.

ನವರಾತ್ರಿ ಮಂಟಪವನ್ನು ಕಪ್ಪು ಬಟ್ಟೆಯಿಂದ ಮುಚ್ಚುವುದಕ್ಕೆ ಭಾಜಪದ ವಿರೋಧ, ಆದೇಶ ಹಿಂಪಡೆದ ಆಡಳಿತ

ರಾಂಚಿ ರೈಲ್ವೆ ನಿಲ್ದಾಣದ ಬಳಿಯಿರುವ ನವರಾತ್ರಿ ಮಂಡಳಿಯ ಮಂಟಪದಲ್ಲಿ ಚಿತ್ರಗಳನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಸೇರುತ್ತಾರೆ ಹಾಗೂ ಇದರಿಂದ ಸಾಮಾಜಿಕ ಅಂತರದ ನಿಯಮಗಳ ಉಲ್ಲಂಘನೆಯಾಗುತ್ತದೆ, ಆದ್ದರಿಂದ ಆಡಳಿತವು ಕಪ್ಪುಬಟ್ಟೆ ಹಾಕಿ ಮಂಟಪವನ್ನು ಮುಚ್ಚುವಂತೆ ಆದೇಶ ನೀಡಿದ ನಂತರ ಮಂಡಳಿಯವರು ಮಂಟಪವನ್ನು ಮುಚ್ಚಿದ್ದರು.

ನವರಾತ್ರಿಯನ್ನು ಅಶ್ಲೀಲವಾಗಿ ಅವಮಾನಿಸಿದ್ದಕ್ಕಾಗಿ ‘ಇರೋಸ್ ನೌ’ ವಿರುದ್ಧ ಅಪರಾಧಗಳು ದಾಖಲು

ಚಲನಚಿತ್ರಗಳನ್ನು ನಿರ್ಮಿಸುವ ಸಂಸ್ಥೆ ‘ಇರೋಸ್ ನೌ’ ನವರಾತ್ರಿಯ ನಿಮಿತ್ತ ಸಾಮಾಜಿಕ ಮಾಧ್ಯಮಗಳಲ್ಲಿ ೩ ಅಶ್ಲೀಲ ಚಿತ್ರಗಳನ್ನು ಬಿತ್ತರಿಸಿ ನವರಾತ್ರಿಯ ಅವಮಾನ ಮಾಡಿದ್ದರಿಂದ ಅದರ ವಿರುದ್ಧ ಪ್ರಕರಣ ದಾಖಲಿಸಿದೆ. ಧರ್ಮಪ್ರೇಮಿಗಳಿಂದ ಪ್ರಚಂಡವಾಗಿ ವಿರೋಧ ವ್ಯಕ್ತವಾದನಂತರ ‘ಇರೋಸ್ ನೌ’ ಕ್ಷಮೆಯಾಚಿಸಿತ್ತು.

ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಿಂದ ದೇವಾಲಯವನ್ನು ಪ್ರವೇಶಿದ ‘ಸಸ್ಯಾಹಾರಿ’ ಮೊಸಳೆ

ಮುಖ್ಯ ಅರ್ಚಕರ ‘ವಿನಂತಿ’ಯ ಮೇರೆಗೆ ಮೊಸಳೆ ಮತ್ತೆ ಕೆರೆಯನ್ನು ಪ್ರವೇಶಿಸಿತು ಕಾಸರಗೋಡು (ಕೇರಳ) – ಉತ್ತರ ಕೇರಳದ ಕಾಸರಗೋಡಿನಲ್ಲಿರುವ ಶ್ರೀ ಅನಂತ ಪದ್ಮನಾಭ ದೇವಾಲಯದ ಆವರಣದಲ್ಲಿರುವ ಕೊಳದಲ್ಲಿ ಒಂದು ದೊಡ್ಡ ಮೊಸಳೆ ವಾಸಿಸುತ್ತಿದೆ. ಈ ಮೊಸಳೆಯು ಸಸ್ಯಹಾರಿ ಪ್ರಾಣಿಯಾಗಿದೆ. ‘ಬಾಬಿಯಾ’ ಹೆಸರಿನ ಈ ಮೊಸಳೆ ದೇವಾಲಯದ ಕೊಳದಲ್ಲಿ ೭೦ ವರ್ಷಗಳಿಂದ ವಾಸಿಸುತ್ತಿದೆ. ಅರ್ಚಕರ ಪ್ರಕಾರ, ಬಾಬಿಯಾ ಇದೇ ಮೊದಲ ಬಾರಿ ದೇವಾಲಯವನ್ನು ಪ್ರವೇಶಿಸಿದ್ದು, ಅರ್ಚಕರ ‘ಕೋರಿಕೆ’ಯ ನಂತರ ಅದು ಅಂಗಳವನ್ನು ಬಿಟ್ಟು ಮತ್ತೆ ಕೆರೆಗೆ ಹೋಯಿತು. ೧. … Read more

ಅನುಮತಿಯಿಲ್ಲದೆ ಗಡ್ಡ ಬೆಳೆಸಿದ್ದರಿಂದ ಪೊಲೀಸ್ ಉಪನಿರೀಕ್ಷಕ ಅಮಾನತು

ಬಾಗ್‌ಪತ್‌ನ ರಾಮಲಾ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಇಂತಸಾರ್ ಅಲಿ ಅನುಮತಿಯಿಲ್ಲದೆ ಗಡ್ಡವನ್ನು ಬೆಳೆಸಿದ್ದರು. ಇದರಿಂದಾಗಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತುಗೊಳಿಸಿದ್ದಾರೆ. ಈ ಹಿಂದೆ ಗಡ್ಡವನ್ನು ಬೆಳೆಸುವ ಬಗ್ಗೆ ಅಲಿಯನ್ನು ಮೇಲಧಿಕಾರಿಗಳಿಂದ ಅನುಮತಿ ಪಡೆಯಲು ಹೇಳಲಾಗಿತ್ತು;